Description
ಈ ವಿಷಯ ನಮ್ಮನ್ನು ಕಾಡುವಂಥದಾಗಿದ್ದರೂ ಬಹಳ ಜಟಿಲವಾದದ್ದು. ಸುಲಭವಾಗಿ ವಿವರಿಸಲಾಗದ ಮತ್ತು ಘರ್ಷಣೆಗೆ ವಸ್ತುವಾಗಬಲ್ಲ ವಿಷಯ. ನಮ್ಮ ಸಮಾಜ ಮತ್ತು ಸಂಸ್ಕೃತಿ ಹೇಗೆ ಬೆಳೆದುಕೊಂಡು ಬಂದಿತು ಎಂಬುದನ್ನು ನಿಮಗೆ ಹೇಳಬೇಕಾಗಿಲ್ಲ. ಒಅಂದು ವಿಷಯ ಎದ್ದು ಕಾಣುವುದು ಹತ್ತೊಂಬತ್ತನೆಯ ಶತಮಾನಕ್ಕಿಂತ ಮುಂಚಿದ್ದ ಸಮಾಜ ಮತ್ತು ಸಂಸ್ಕೃತಿಯ ಮುಖವೇ ಬೇರೆ 19ರಿಂದ 21ನೆಯ ಶತಮಾನದವರೆಗಿನ ಸಂಸ್ಕೃತಿಯ ಮುಖವೇ ಬೇರೆ. ಈ ಶತಮಾನದ ಎರಡು ದಶಕಗಳಲ್ಲಿ ನಾವು ನೋಡುತ್ತಿರುವ ಸಂಸ್ಕೃತಿ ಮುಖವೇ ಬೇರೆ.
ಸ್ಥೂಲವಾಗಿ ಹೇಳುವುದಾದರೆ19ನೆಯ ಶತಮಾನಕ್ಕಿಂತ ಮುಂಚಿನ ಸಮಾಜ ತನ್ನದೇ ಆದ ಚೌಕಟ್ಟಿನೊಳಗೆ ಮುಂದುವರೆದ ಸಮಾಜವಾಗಿತ್ತು. ಸ್ಥಿತ್ಯಂತರಗಳು ಆಗುತ್ತಿರಲಿಲ್ಲವೇ ಎಂದು ಕೇಳಿದರೆ ಖಂಡಿತಾ ಆಗುತ್ತಿದ್ದವು. ಆ ಸ್ಥಿತ್ಯಂತರಗಳ ಮಧ್ಯೆ ಕೂಡ ಸಮಾಜದ ಸ್ವರೂಪವನ್ನು ಗುರುತಿಸಬಹುದಾಗಿತ್ತು. ಇದನ್ನು ಹೇಳಲು ಮುಖ್ಯ ಕಾರಣ ನಮ್ಮನ್ನು ಆಳುತ್ತಿದ್ದ ದೇಶೀಯ ಮತ್ತು ಪರದೇಶೀಯ ರಾಜರ ಆಳ್ವಿಕೆಯ ಕಾಲದಲ್ಲಿ ಸಮಾಜ ಮತ್ತು ಸಂಸ್ಕೃತಿಗೆ ಯಾವ ರೀತಿಯ ಲಾಭವಾಗಿದೆ ಧಕ್ಕೆಯಾಗಿದೆ ಎಂಬುದನ್ನು ಬಲ್ಲವರಾಗಿದ್ದೇವೆ. ಹಿಂದಿನ ಕಾಲದೊಳಗೆ- ನಮ್ಮ ಲಿಖಿತ ದಾಖಲೆಗಳು ಸಿಗುವ ಕಾಲದಿಂದ ಪೂರ್ವಕಾಲದ ಸಮಾಜ ಮತ್ತು ಸಂಸ್ಕೃತಿಯ ಬಗೆಗೆ ಸ್ಥೂಲವಾದ ಮಾಹಿತಿ ಸಿಗುತ್ತದೆಯೇ ಹೊರತು ನಿಖರವಾಗಿ ಸಿಗುವುದಿಲ್ಲ. ಯಾವಾಗ ಬರವಣಿಗೆ ರೂಢಿಗೆ ಬಂದಿತೋ ಆಗಿನಿಂದ ಮನುಷ್ಯ ಸುಸಂಸ್ಕೃತನಾದ ಎಂಬ ನಿರ್ಣಯಕ್ಕೆ ಬರಲಾಗಿದೆ. ಅಂದರೆ ಪೂರ್ವೇತಿಹಾಸ ಮತ್ತು ಇತಿಹಾಸವನ್ನು ವರ್ಗೀಕರಿಸುವ ವಸ್ತು ಎಂದರೆ ಬರವಣಿಗೆ. ಬರವಣಿಗೆ ಸಮಾಜಕ್ಕೆ ಅವಶ್ಯವಾದಾಗ ಅದರ ಮೂಲಕ ನಮ್ಮ ವಿಚಾರಗಳನ್ನು ಹಂಚಿಕೊಳ್ಲಲು ಸಾಧ್ಯವಾಗುತ್ತದೆ. ಬರವಣಿಗೆ ಇಲ್ಲದಿದ್ದರೆ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುದಿಲ್ಲ.
Reviews
There are no reviews yet.