ಕತೆ ಕತೆ ಕಾರಣ

145.00

Add to Wishlist
Add to Wishlist
Email

Description

ವೈದೇಹಿಯವರ ಸ್ತ್ರೀಸಂವೇದನಾಶೀಲತೆ, ಕೇವಲ ಸ್ತ್ರೀಯರ ಬದುಕನ್ನಷ್ಟೇ ಕುರಿತದ್ದಲ್ಲ. ಮನುಷ್ಯರೆಲ್ಲರನ್ನೂ ಕುರಿತದ್ದು. ಅವರು ಕೆಳಸ್ತರಗಳ ಹೆಂಗಸರ ಬಗ್ಗೆ ಏನನ್ನೂ ಬರೆಯಲಿಲ್ಲ ಎಂದು ಕೆಲವರ ಆಕ್ಷೇಪ ಎಂದಿನಿಂದಲೂ ಇದೆ. ‘ಬಾಕಿ ಇತಿಹಾಸ’ ಹಾಗೂ ಮಂಜಮ್ಮಜ್ಜಿಯ ಕಥೆಗಳನ್ನು ಓದಿದ ಮೇಲೆ ಆ ಸ್ತ್ರೀಯರ ಜೀವನದ ಸ್ತರ ಯಾವುದೆನ್ನಬಹುದು? ಎಲ್ಲ ಬಗೆಯ ಸೈದ್ಧಾಂತಿಕ ಓದುಗಾರಿಕೆಯಿಂದ ಹುಟ್ಟಿದಂಥ ಪ್ರಶ್ನೆಗಳಿಗೆ ಉತ್ತರ ಹೇಳಲು ಯತ್ನಿಸುವುದು ವೈದೇಹಿಯವರ ವಿಧಾನವಲ್ಲ. ಏನನ್ನೇ ಉತ್ತರಿಸುವುದಕ್ಕೂ ಸೃಜನಶೀಲವೂ, ಕಲಾತ್ಮಕವೂ ಆದ ಕತೆಗಾರಿಕೆಯಲ್ಲೇ ಅವರು ಯತ್ನಿಸುತ್ತಾ ಬಂದಿದ್ದಾರೆ. ‘ಕತೆ ಕತೆ ಕಾರಣ’ದ ಕಥೆಗಳು ಅವರ ಅಭಿವ್ಯಕ್ತಿಯ ಹಾದಿಯಲ್ಲಿ ಹೇಗೋ ಹಾಗೆ ಕನ್ನಡದ ಕಥನಸಾಹಿತ್ಯದ ಹಾದಿಯಲ್ಲೂ ಒಂದು ಮೈಲಿಗಲ್ಲಾಗಿವೆ ಎಂಬುದು ನನ್ನ ನಂಬಿಕೆ. ಅದು ಎಲ್ಲ ಕನ್ನಡಿಗರದೂ ಆಗಲಿ.

– ಬಿ. ಎನ್. ಸುಮಿತ್ರಾಬಾಯಿ

‘ಒಂದು ಸೇಬಿನ ಮರದಲ್ಲಿರುವ ಹಣ್ಣುಗಳನ್ನು ಎಣಿಸಬಹುದು.ಆದರೆ ಸೇಬಿನ ಹಣ್ಣಿನ ಒಳಗೆ ಇರುವ ಮರಗಳನ್ನು ಎಣಿಸುವುದು ಮಾತ್ರ ಅಸಾಧ್ಯ’ ಎಂದು ಒಂದು ಚೀನೀಗಾದೆ. ಈ ಗಾದೆಯನ್ನು ವೈದೇಹಿಯವರ ಇತ್ತೀಚೆಗಿನ ಕತೆಗಳ ಸಂಕಲನ, ‘ಕತೆ ಕತೆ ಕಾರಣ’ಕ್ಕೂ ಅನ್ವಯಿಸಿ, ಇದರಲ್ಲಿ ೧೨ ಕತೆಗಳಿವೆ ಎಂದು ಹೇಳಬಹುದು; ಆದರೆ ಈ ಕತೆಗಳು ಇನ್ನೆಷ್ಟು ಕತೆಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ ಎಂಬ ವಿಸ್ಮಯ ಈ ಕತೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿದೇ ಬಿಡುತ್ತದೆ. ಸಂಕಲನದ ಕತೆಗಳು ನೀಡುವ ಒಳ ನೋಟದ ಮುಖಾಂತರ ಓದುಗ ಆ ಕತೆಗಳನ್ನು ತಾನೇ ಕಲ್ಪಿಸಿಕೊಳ್ಳಬಲ್ಲ.

– ಜಿ.ರಾಜಶೇಖರ

Reviews

There are no reviews yet.

Be the first to review “ಕತೆ ಕತೆ ಕಾರಣ”

Your email address will not be published.