Sale!

ಕುವೆಂಪು ದರ್ಶನ ಮೀಮಾಂಸೆ

100.00 90.00

Add to Wishlist
Add to Wishlist
Email

Description

ಪ್ರಿಯ ಬಾಲು,
ನಿನ್ನ ‘ಕುವೆಂಪು ದರ್ಶನ ಮೀಮಾಂಸೆ’ ಪುಸ್ತಕ ಓದಿದೆ. ಕುವೆಂಪು ಅವರ ವೈಚಾರಿಕ ಬರಹಗಳನ್ನು ನಾನು ಅಷ್ಟಾಗಿ ಓದಿರಲಿಲ್ಲ. ಓದಿದ್ದು ಅವರ ಕಾವ್ಯ ಮತ್ತು ಕಾದಂಬರಿಗಳನ್ನಷ್ಟೇ. ಈಗ ಒಟ್ಟಾರೆಯಾಗಿ ಸಾಹಿತ್ಯ ಮತ್ತು ಸಮಾಜದ ಬಗೆಗಿನ ಅವರ ಆಳವಾದ ಮತ್ತು ವಿಸ್ತಾರವಾದ ವಿಚಾರಗಳನ್ನು, ಕಾವ್ಯ ಮೀಮಾಂಸೆಯನ್ನು ಮತ್ತು ಜೀವನ ದರ್ಶನವನ್ನು ಸೂಕ್ಷ್ಮವಾಗಿ ತಿಳಿದ ಹಾಗಾಯಿತು. ಅತ್ಯಂತ ಸಂಕೀರ್ಣ ಸಂಗತಿಗಳನ್ನೂ ಸರಳ ಮಾತುಗಳಲ್ಲಿ ಸಾಮಾನ್ಯ ಓದುಗರಿಗೂ ಮನದಟ್ಟಾಗುವಂತೆ ನಿರೂಪಿಸುವ ನಿನ್ನ ಅನನ್ಯ ಪರಿಣಾಮಕಾರಿ ಶೈಲಿ ಇಲ್ಲಿಯೂ ಎದ್ದು ತೋರುತ್ತದೆ. ನಾನಂತೂ ಈ ಪುಸ್ತಕಕ್ಕಾಗಿ ನಿನಗೆ ತುಂಬ ಉಪಕೃತನಾಗಿದ್ದೇನೆ. ಕೆಲವು ವಿಚಾರಗಳು ಮತ್ತು ಉಲ್ಲೇಖಿತ ಪದ್ಯಭಾಗಗಳು ಅಲ್ಲಲ್ಲಿ ಪುನರುಕ್ತವಾಗಿವೆ. ಇದನ್ನು ನಿವಾರಿಸಬಹುದಿತ್ತು ಅನ್ನಿಸಿತು. ಇರಲಿ, ಅದು ಗೌಣ. ಒಟ್ಟಾರೆಯಲ್ಲಿ ಇದೊಂದು ಕುವೆಂಪು ಅವರ ಬಗೆಗಿನ ಉತ್ಕೃಷ್ಟ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಹಾರ್ದಿಕ ಅಭಿನಂದನೆಗಳು.

ನಿನ್ನ ಪ್ರೀತಿಯ ಲಕ್ಷ್ಮಣ
(ಬಿ.ಆರ್. ಲಕ್ಷ್ಮಣರಾವ್)

Reviews

There are no reviews yet.

Be the first to review “ಕುವೆಂಪು ದರ್ಶನ ಮೀಮಾಂಸೆ”

Your email address will not be published. Required fields are marked *