Description
ಮಹಾದೇವ ಅನುಸರಿಸಿರುವ ಕಥನ ರೀತಿಯ ಜಾನಪದೀಯವಾಗಿ ಕಂಡರೂ
ಅದು ಸಂಪೂರ್ಣ ಜಾನಪದೀಯವಲ್ಲ. ಪಂಪನು ದೇಸೀ-ಮಾರ್ಗಗಳನ್ನು ಮಿಶ್ರ
ರೂಪಮಾಡಿ ಹೊಸ ತಿರುಳ್ಗನ್ನಡವನ್ನು ಕಂಡುಕೊಂಡಂತೆ ಮಹಾದೇವ ಕೂಡ
ಜಾನಪದೀಯ ಮತ್ತು ಚಾಲ್ತಿಯ ರೀತಿಗಳನ್ನು ಮಿಶ್ರಮಾಡಿ ಭಾಷೆಯನ್ನು ಹೇಗೋ
ಹಾಗೆ ಕಥನ ರೀತಿಯನ್ನೂ ಒಂದು ವಿಶಿಷ್ಟ ಮಿಶ್ರಣದಲ್ಲಿ ಪಂಚಲೋಹಪಾಕ
ಮಾಡಿದ್ದಾರೆ.
ಆ ಬೆಳಕು ತನ್ನ ಶಕ್ತಿ ಮೀರಿ ಹಬ್ಬಿಯೂ ಕಣ್ಗಳ ಓಡಿಸಿದಷ್ಟೂ ಇನ್ನೂ
ಈ ಏಡು ನೇತ್ರಗಳಿಂದ ನೋಡಕಾಗಲ್ಲ ಕಣವ್ವ’’ ಎಂಬಂತ
ಕಂಡುಬರುತ್ತಿದ್ದ ಆ ಒಂದೂರಷ್ಟಿದ್ದ ಹಟ್ಟಿಯ ಒಕ್ಕಡ ಮೂಲೇನಾದರು ತಲುಪಲು
ಅದಕ್ಕಾಗದೆ ಏದುಸಿರಾಗಿ ನಿಂತಿತು’’- ಇಂಥ ಅನೇಕ ಸಂದರ್ಭಗಳಲ್ಲಿ ಮಹಾದೇವ
ಶೂನ್ಯ ಪದಾರ್ಥಗಳನ್ನು ಸಮಾನ ಕುತೂಹಲದಿಂದ ಗಣನೆಮಾಡುತ್ತಾ ಇಲ್ಲೆಲ್ಲ
ಭಾಷೆ-ಅದು ಗ್ರಾಮ್ಯವೇ ಆದರೂ-ಅಲ್ಲಿಯೂ ಯಥಾರೂಪದಲ್ಲಿರದೆ ಕಾವ್ಯದ
ಆವೇಶದಲ್ಲಿ ಕಾಮರೂಪಿಯಾಗಿಬಿಡುತ್ತದೆ. `ಅವನ ತುಟಿ ಮಿಸ್ಗಳು ತಮ್ಮಟ ಮುಂದ
ಹೈಕ್ಳು ಕುಣಿವಂತೆ ಕುಣೀತೊಡಗಿದವು’- ಈ ವರ್ಣನೆಗಳೆಲ್ಲ (ವಾಚಕ)-ಆಹಾರ್ಯಕಾ
(ಆನುಭಾವಿಕ) ಎಂಬಂತೆ ಬಹಳ ನಾಟಕೀಯವಾಗಿ ಇವೆ. ಹಾಗೆಯೇ ಜ್ಯೋತಮ್ಮನ
ಬಾಯಿಯಲ್ಲಿ ಬರುವ
ಮಾತು ಮಾನವ ಗೆಳತಿಯರ ನಡುವಿನ ದೇವತೆಯ ಮಾತಿನಂತಿದೆ.
ತನ್ನ ಆಸ್ತಿಯಾದ ಅಳುವ ಅಳಲೂ ತ್ರಾಣವಿಲ್ಲದವಳಾಗಿ ಕಿತ್ತು ತೂರಾಡುತ್ತಿದ್ದ
ಕಣ್ಣ ಅರತೆಗೆದು ಸುತ್ತಲ ಜನ್ವ ನೋಡಿ ಕಣ್ಣು ಮುಚ್ಚಿ ಆಮ್ಯಾಲೆ ಅರಗಣ್ಣು
ತನ್ನವು ಕೂದಲುಗಳ ತನ್ನೆರಡು ಕೈಗಳಿಂದಲೂ ಬಾಚಿಕೊಳ್ಳುತ್ತಾ’’ ಎಂದು
ಮುಂತಾದವೆಲ್ಲಾ ಬಂದು ಇದು ಕಾದಂಬರಿಯ ಚಾಲ್ತಿಗದ್ಯವಲ್ಲ; ಸಾಂದ್ರಭಾವದ
ಸುಂದರಕಾವ್ಯ.
ಬುಟ್ಟು ಮುಚ್ಚಿ ಈ ಪ್ರಕಾರ ಮಾಡುತಲಿತ್ತು.’’
ಅವನ ದುಃಖ ಆ ಗುಳ್ಳು ಆವರಿಸಿ ಆ ಗುಳ್ಳಿಂದಲೂ ಎದ್ದು ಆ ಊರ
ಬಂದವರು ಯಾರ. ಹೋದವರು ಯಾರ. ಯಾರೋ ಬಂದರು. ಬಂದವರು
ಆವರಿಸಿಕೊಂಡಿತು. ಆ ಊರಿಂದಲೂ ಎದ್ದು ಬಾನು ತುಂಬಿತು.’’
ಯಾರೋ ಆ ಮೂಳ್ವ ಗೋರ್ಕಂಡರು…’’
ಇದೆಲ್ಲ ಕನ್ನಡದಲ್ಲಿ ಎಂದೂ ಮೈದೋರದ ಮನೋಹರ ಭಾಷಾ ಸರಸ್ವತಿಯ
ಅಪೂರ್ವ ಸೊಬಗು. ಕುಸುಮಬಾಲೆಯೊಂದು ಲಯಬದ್ಧವಾದ ಪದ್ಯಗಂಧೀ ಕಾವ್ಯ.
ಇಲ್ಲಿ ಬಳಸಿರುವ ಭಾಷೆಯ ರೂಪ ಗದ್ಯವೇ ಅಲ್ಲ. ಅದು ಛಂದೋಗಂಧಿಯಾದ
ಪದ್ಯ. ಹಾಗೆಂದು ಅದು ಶರಣರ ವಚನದ ಲಯದಲ್ಲೂ ಇಲ್ಲ. ಮಹಾದೇವ ಇಲ್ಲಿ
ಕಾವ್ಯಕ್ಕೆ ಬಳಕೆಯಾಗಬಲ್ಲ ಅಭಿನವ ರೀತಿಯ ಪದ್ಯಶೈಲಿಯನ್ನು ರಾಜಸೂಯದ
ಕುದುರೆಯನ್ನೆಂತೋ ಅಂತೆ ಬಿಟ್ಟಿದ್ದಾರೆ. ಇದನ್ನು ಬರೆದ ದೇವನೂರ ಮಹಾದೇವರುತ
ಮ್ಮ ಈ ಕೃತಿಯುದ್ದಕ್ಕೂ ಪಾತ್ರಗಳು ತಮ್ಮ ರಕ್ತ ಮತ್ತು ಅನುರಕ್ತಿಗೆ ಅನುಗುಣವಾಗಿಯೇ
ಪ್ರಕಟವಾಗುವಲ್ಲಿ ತಮ್ಮ ಪ್ರತಿಷ್ಠೆಯನ್ನು ಮುಂದುಮಾಡದೆ-ಆಗಬೇಕಾದ್ದನ್ನು ಆಗಲು
ಒಂದು ಗಿಡಮರವನ್ನಂತೆ ಸಲಹಿ-ಬರಬೇಕಾದ್ದು ಅಷ್ಟೇ ಸಲೀಲವಾಗಿ ಸ್ವಾನುಭಾವಕ್ಕೆ
ಬರುವಂತೆ ಬರೆಯುವುದೇ ಮಹಾಕಾವ್ಯವೆಂದು ತಿಳಿದವರು.
-ಎಲ್. ಬಸವರಾಜು
(ಲಯಕಾರ ವಿನ್ಯಾಸಕರ ನುಡಿಯಿಂದ)
Reviews
There are no reviews yet.