ಗ್ರಾಹಕ ಜಾಗೃತಿ

75.00

Add to Wishlist
Add to Wishlist
Email

Description

(ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮಾಲಿಕೆ – 1)

ಲೇಖಕರು: ವೈ.ಜಿ. ಮುರಳೀಧರನ್

ಪ್ರಕಾಶನ: ಅಮೂಲ್ಯ ಪುಸ್ತಕ, ಬೆಂಗಳೂರು

***************************

ಗ್ರಾಹಕ ಜಾಗೃತಿ ಎಂದ ಕೂಡಲೇ ಗ್ರಾಹಕರ ಸಂರಕ್ಷಣಾ ಕಾಯ್ದೆ ಮತ್ತು ಗ್ರಾಹಕರ ವೇದಿಕೆಗಳಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯುವುದು ಎಂದು ಭಾವಿಸಲಾಗಿದೆ. ಆದರೆ, ಇದು ತಪ್ಪು ಕಲ್ಪನೆ. ಗ್ರಾಹಕರ ರಕ್ಷಣೆಗೆ ಕಾನೂನು ಒಂದು ಪರಿಣಾಮಕಾರಿ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿದ್ಯಾರ್ಥಿಗಳಿಗೆ, ಅದಕ್ಕಿಂತ ಹೆಚ್ಚಾಗಿ ಗ್ರಾಹಕ ಶಿಕ್ಷಣ ನೀಡುವ ಅಗತ್ಯವಿದೆ. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೈಪಿಡಿಯನ್ನು ಸಿದ್ಧಪಡಿಸಿದ್ದೇವೆ. ಈ ಕೈಪಿಡಿಯು ವಿದ್ಯಾರ್ಥಿಗಳಲ್ಲಿ ಗ್ರಾಹಕ ಸಂರಕ್ಷಣೆಯ ಬಗ್ಗೆ ಇರಬೇಕಾದ ಕನಿಷ್ಠ ಮಾಹಿತಿಯನ್ನು ನೀಡುತ್ತದೆ. ಗ್ರಾಹಕ ಕ್ಲಬ್‌ಗಳಲ್ಲಿ ಇದನ್ನು ಪಠ್ಯಪುಸ್ತಕವನ್ನಾಗಿ ಉಪಯೋಗಿಸಬಹುದು.

*

ದೇಶದಲ್ಲಿ ಬಹಳಷ್ಟು ಬಳಕೆದಾರರು ತಾವು ಕೊಂಡ ವಸ್ತುಗಳಿಂದಾಗಿ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಿಲ್ಲದೆ ಇಲ್ಲ. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರಗಳಿವೆ. ಅದನ್ನು ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ.

ನೀವು ಕೊಟ್ಟ ಹಣಕ್ಕೆ ತಕ್ಕ ಮೌಲ್ಯದ ಸರಕನ್ನು ಪಡೆಯುವುದು ನಿಮ್ಮ ಹಕ್ಕು. ಒಬ್ಬ ಗ್ರಾಹಕರಾಗಿ ನಿಮ್ಮ ಹಕ್ಕುಗಳು, ಜವಾಬ್ದಾರಿಗಳು ಯಾವುವು, ಯಾವುದೇ ವಸ್ತು, ಸರಕು ಅಥವಾ ಸೇವೆ ಖರೀದಿಸುವ ಮುನ್ನ ನೀವು ಗಮನಿಸಬೇಕಾದ ಅಂಶಗಳ ಬಗ್ಗೆ ಈ ಪುಸ್ತಕ ಮಾಹಿತಿ ನೀಡುತ್ತದೆ.

ಒಂದು ವೇಳೆ ನಿಮಗೆ ಮೋಸ ಆಗಿದೆ ಎಂದಾದರೆ ಅದಕ್ಕೆ ಪರಿಹಾರ ಪಡೆಯುವುದು ಹೇಗೆ ಮತ್ತು ನಿಮ್ಮ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಸೂಕ್ಷ್ಮ ಪರಿಚಯ ಮತ್ತು ಅದನ್ನು ಬಳಸಿಕೊಳ್ಳುವ ಕ್ರಮದ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇನ್ನೇಕೆ ತಡ, ಪುಸ್ತಕ ಓದಲು ಶುರುಮಾಡಿ.

Reviews

There are no reviews yet.

Be the first to review “ಗ್ರಾಹಕ ಜಾಗೃತಿ”

Your email address will not be published.