Description
ಸ್ವತಂತ್ರ ಭಾರತಕ್ಕೊಂದು ಸಂವಿಧಾನ ರೂಪಿಸುವಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಅನನ್ಯವಾದುದು. ಇಪ್ಪತ್ತನೆಯ ಶತಮಾನದ ಜಗತ್ತಿನ ಶ್ರೇಷ್ಠ ಚಿಂತಕರಲ್ಲೊಬ್ಬರಾದ ಅವರು ತಮ್ಮ ಸಮಿತಿಯೊಂದಿಗೆ ರೂಪಿಸಿದ ಸಂವಿಧಾನ ಸಿದ್ಧತಾ
ಪ್ರತಿಯನ್ನು, ಭಾರತದ ಸಂವಿಧಾನ ರಚನಾ ಸಭೆಯ ಮುಂದೆ ಮಂಡಿಸಲಾಯಿತು. ಅಲ್ಲಿ ನಡೆದ ಚರ್ಚೆಗಳನ್ನು ಸಮಗ್ರವಾಗಿ ಹತ್ತು ಸಂಪುಟಗಳಲ್ಲಿ ಇಂಗ್ಲಿಷಿನಿಂದ ಅನುವಾದಿಸಿ ಪ್ರಕಟಿಸಿರುವ ಸಂಪುಟಗಳು ಇವು.
1946 ರಿಂದ 1949ರವರೆಗೆ ಹನ್ನೆರಡು ಬಾರಿ ಸಭೆ ಸೇರಿ,
ನೂರಾ ಅರವತ್ತೇಳು ದಿನಗಳ ಕಾಲ ಸಂವಿಧಾನ ರಚನಾ ಸಭೆಯ ನೂರಾರು ಸದಸ್ಯರು ಕೂಲಂಕಷವಾಗಿ ಚರ್ಚಿಸಿ ಸಿದ್ಧಪಡಿಸಿದ
ನಮ್ಮ ದೇಶದ ಸಂವಿಧಾನವು ಜಗತ್ತಿನ ಪ್ರಜಾ ಪ್ರಭುತ್ವ
ರಾಷ್ಟ್ರಗಳಿಗೆ ಮಾದರಿ ಎಂಬಂತಿದೆ.
ಸಂವಿಧಾನ ರಚನಾ ರಚನಾ ಸಭೆಯಲ್ಲಿ ಪಾಲುಗೊಂಡಿದ್ದ ಎಲ್ಲ ಸದಸ್ಯರೂ ಅಪ್ರತಿಮ ದೇಶಭಕ್ತರು, ರಾಜನೀತಿ ವಿಶಾರದರು, ದಕ್ಷ
ಆಡಳಿತಗಾರರು ಮತ್ತು ಘನವಿದ್ವಾಂಸರೂ ಆಗಿದ್ದವರು. ಪರಸ್ಪರ ವಾದ ವಿವಾದಗಳಲ್ಲಿ ತೊಡಗಿದರೂ ಸಭಾ ಗೌರವವಕ್ಕೆ ಚ್ಯುತಿಯಾಗದಂತೆ ಘನತೆ-ಗೌರವಗಳಿಂದ ವರ್ತಿಸಿದ ಅಂದಿನ ಸಭಾ ನಡವಳಿಗಳು, ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ನಡೆಯುವ ಪಾರ್ಲಿಮೆಂಟರಿ ಚರ್ಚೆಗೆ ಆದರ್ಶಪ್ರಾಯವಾಗುವಂತಿವೆ.
ಕೆ. ಮರುಳಸಿದ್ದಪ್ಪ
Reviews
There are no reviews yet.