ಯಕ್ಷಕವಿ ಕೆಂಪಣ್ಣಗೌಡ

90.00

Add to Wishlist
Add to Wishlist
Email

Description

ಲೇಖಕರು: ನರಹಳ್ಳಿ ಬಾಲಸುಬ್ರಹ್ಮಣ್ಯ

ಪ್ರಕಾಶನ: ಅಭಿನವ

******************

ಕನ್ನಡದಲ್ಲಿ ಸಾಹಿತ್ಯ ಚರಿತ್ರೆಯ ರಚನೆಯು ಕಿಟಲ್ ಅವರಿಂದಲೇ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಅನೇಕ ವಿದ್ವಾಂಸರು – ಸಂಶೋಧಕರು ತಮ್ಮ ಶೋಧಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯ ಪಾತಳಿಯನ್ನು ಹಿರಿದಾಗಿಸುತ್ತಾ ಬಂದಿದ್ದಾರೆ. ಈ ನಿರಂತರ ಪ್ರಯತ್ನದಾಚೆಗೂ ಸಾಹಿತ್ಯ ಚರಿತ್ರೆಯಲ್ಲಿ ಸೇರದೆ ಉಳಿದುಹೋದ ಎಷ್ಟೋ ಕವಿಗಳು-ಕೃತಿಗಳು ಇನ್ನೂ ಕನ್ನಡದ ನೆನಪಿನಲ್ಲಿವೆ. ಇಂತಹ ಆಲಕ್ಷಿತ ಕೃತಿಗಳನ್ನು, ಕೃತಿಕಾರರನ್ನು ಗುರುತಿಸಿ ಸಾಹಿತ್ಯ ಪರಂಪರೆಯಲ್ಲಿ ಸ್ಥಾಪಿಸುವುದು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಕಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಯಕ್ಷಕವಿ ಕೆಂಪಣ್ಣಗೌಡ ಸಮಗ್ರ ಸಾಹಿತ್ಯ ಶೋಧ ಒಂದು ಮಹತ್ವದ ಕೃತಿಯಾಗಿದೆ.

ಈ ಹೊತ್ತಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇರುವ ತೆರಪೊಂದನ್ನು ತುಂಬಿಕೊಡುವಂತೆ ಕನ್ನಡ ಸಮುದಾಯಗಳು ಉಳಿಸಿ ಪೋಷಿಸಿಕೊಂಡು ಬಂದ ಜನಪದ ಪ್ರದರ್ಶನ ಪರಂಪರೆಯನ್ನು ವಿಶ್ಲೇಷಿಸಿರುವುದು ಈ ಬರಹದ ಹೆಗ್ಗಳಿಕೆಯಾಗಿದೆ. ಅಲಕ್ಷಿತವಾಗಿ ಉಳಿದ ಅಂಚುಗಳ ಅಧ್ಯಯನದ ಅವಶ್ಯಕತೆಯನ್ನು ಸಬಾಲ್ಸ್ಟ್ರನ್ ಸ್ಟಡೀಸ್ ನಮಗೆ ಮನವರಿಕೆ ಮಾಡಿಕೊಟ್ಟು ಮೂರು ದಶಕಗಳೇ ಕಳೆದಿದ್ದರೂ ಇಂದಿಗೂ ಜನಪದ ಮತ್ತು ಮೌಖಿಕ ಪರಂಪರೆಯ ಅನೇಕ ಕೃತಿಗಳು ಮರೆವಿನಲ್ಲಿಯೇ ಇವೆ. ನರಹಳ್ಳಿಯವರು ಈಗ ಬೊಟ್ಟುಮಾಡಿ ನಮಗೆ ತೋರಿಸುತ್ತಿರುವ ಕೆಂಪಣ್ಣಗೌಡ ಅಂತಹ ನೂರಾರು ಅಲಕ್ಷಿತ ಕವಿಗಳಲ್ಲಿ ಒಬ್ಬ. ಹದಿನೈದನೆಯ ಶತಮಾನದ ಕೊನೆಯಲ್ಲಿ ಜೀವಿಸಿದ್ದ ಕೆಂಪಣ್ಣಗೌಡನನ್ನು ಕನ್ನಡದ ಮೊದಲ ಯಕ್ಷಗಾನ ಕವಿ ಎಂದು ಸಾಕ್ಷಾಧಾರಗಳ ಸಹಿತ ನರಹಳ್ಳಿಯವರು ಸಾಹಿತ್ಯ ಚರಿತ್ರೆಯ ಭಾಗವಾಗಿಸಿದ್ದಾರೆ.

ಹದಿನೈದನೆಯ ಶತಮಾನದಲ್ಲಿ ಗ್ರಾಮೀಣ ಸಮಾಜದಲ್ಲಿ ಜೀವಂತವಿದ್ದ ಓದು ಪಾರಾಯಣ’ ಪರಂಪರೆಯು ಯಕ್ಷಗಾನ-ಮೂಡಲಪಾಯ ಪ್ರದರ್ಶನ ಪರಂಪರೆಯಾಗಿ ಪಲ್ಲಟವಾಗಿರುವ ಸಾಧ್ಯತೆಯನ್ನು ಹೊಳೆಯಿಸುತ್ತಾರೆ. ಓದು ಕೆಂಪಯ್ಯನ ಮಗ ಕೆಂಪಣ್ಣಗೌಡ ಯಕ್ಷಗಾನ ಕವಿಯಾಗಿ ಜನ ಮಾನಸದಲ್ಲಿ ಇಂದಿಗೂ ಜೀವಂತವಿರುವುದನ್ನು ಗುರುತಿಸಿದ್ದಾರೆ, ಕೆಂಪಣ್ಣಗೌಡ ವಿರಚಿತ ಕರಿರಾಯಚರಿತ್ರೆ-ನಳಚರಿತ್ರೆ- ಹಾಗೂ ಶನಿಮಾಹಾತ್ಮೆ ಕೃತಿಗಳ ಅನನ್ಯತೆಯನ್ನು ವಿವರಿಸಿದ್ದಾರೆ. ಅಲ್ಲದೆ ಈ ಕೃತಿಗಳು ಕಾಲಾಂತರದಲ್ಲಿ ತಳೆದ-ಬೆಳೆದ ಕಥಾರೂಪಾಂತರಗಳನ್ನು ಕೆಂಪಣ್ಣಗೌಡನ ಕೃತಿಗಳ ಜೊತೆ ತೌಲನಿಕವಾಗಿ ವಿಶ್ಲೇಷಿಸಿದ್ದಾರೆ. ಈ ಕೃತಿಯ ಓದು ಸುತ್ತಣದ ಗ್ರಾಮೀಣ ಸಮುದಾಯಗಳ ನೆನಪುಗಳತ್ತ ನಮ್ಮ ಗಮನ ಸೆಳೆಯುವಷ್ಟು ಶಕ್ತವಾಗಿದೆ. ಇಂತಹ ಅಪರೂಪದ ಬರಹವನ್ನು ರೂಪಿಸಿದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಅಭಿನಂದನೆಗಳು.

ಕೆ. ವೈ. ನಾರಾಯಣ ಸ್ವಾ

Reviews

There are no reviews yet.

Be the first to review “ಯಕ್ಷಕವಿ ಕೆಂಪಣ್ಣಗೌಡ”

Your email address will not be published.