Description
ಡಾ. ಪುರುಷೋತ್ತಮ ಬಿಳಿಮಲೆಯವರ 400 ಪುಟಗಳ ಈ ಕೃತಿಗೆ 1985ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ಸಂಶೋಧನ ಕೃತಿಯು ಇದೀಗ ಪ್ರಕಟವಾಗಿದೆ. ಸುಮಾರು 35 ವರ್ಷಗಳ ಹಿಂದೆ ಬಿಳಿಮಲೆ ಅವರು ನಡೆಸಿದ ಅಧ್ಯಯನವನ್ನು ಬಳಸಿಕೊಂಡು ಗೌಡ ಸಮುದಾಯದ ಇಂದಿನ ಪರಿಸ್ಥಿತಿಯ ಕುರಿತು ಸ್ಥೂಲವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದಲ್ಲಿ ಅನೇಕ ಹಳೆಯ ವಿಚಾರಗಳೂ ಇವೆ, ಹೊಸ ಸಂಗತಿಗಳೂ ಇವೆ. ಈ ನಿಟ್ಟಿನಲ್ಲಿ ‘ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತುಇಲ್ಲಿ ಸಾರ್ಥಕಗೊಂಡಿದೆ. ತಲೆಮಾರುಗಳ ಜೊತೆಗಿನ ನಮ್ಮ ಸಂಬಂಧಗಳನ್ನು ಈ ಕೃತಿಯು ಗಟ್ಟಿಯಾಗಿ ಬೆಸೆಯುತ್ತದೆ. ‘ಮುಂದೇನು?’ ಎನ್ನುವ ಪ್ರಶ್ನೆಗೂ ಪುಸ್ತಕವು ಕೆಲವು ಉತ್ತರಗಳನ್ನು ನೀಡುತ್ತದೆ.
Reviews
There are no reviews yet.