Sale!

ಆನಂದಾಮೈಡ್

144.00

Add to Wishlist
Add to Wishlist
Email

Description

ಪರಿಸರವಾದಿ ನಾಗೇಶ ಹೆಗಡೆ ಅವರು ವಿವಿಧ ವಿಷಯಗಳ ಕುರಿತು ಬರೆದ ಲೇಖನಗಳ ಸಂಗ್ರಹ ಕೃತಿ-ಆನಂದಾಮೈಡ್. ವಿಜ್ಞಾನ-ತಂತ್ರಜ್ಞಾನ ಸುದ್ದಿ ವಿಶ್ಲೇಷಣೆ ಎಂಬ ಉಪಶೀರ್ಷಿಕೆಯ ಈ ಕೃತಿಯಲ್ಲಿ ಒಟ್ಟು 35 ವಸ್ತು ವೈವಿಧ್ಯತೆಯ ಲೇಖನಗಳನ್ನು ಸಂಕಲಿಸಲಾಗಿದೆ. ದೈವತ್ವದ ಕಡೆ ದೈತ್ಯ ಹೆಜ್ಜೆ, ದೇಶದ ಖ್ಯಾತಿ ದೂಳುಪಾಲು, ನೀರಿಗಾಗಿ ಹಿಮಖಂಡಕ್ಕೆ ಹಗ್ಗ, ಕಲ್ಪಿತ ಕತೆಯನ್ನೂ ಮೀರುವ ಮಿದುಳು, ಊಹೆಗೂ ಮೀರುವ ವುಹಾನ್ ವ್ಯೂಹ, ಭೂದಿನದಂದು ಗೇಯಾ ಮಾತೆಯ ನೆನಪು, ಕಾಂಗ್ರೆಸ್ ಕಳೆಗೂ ಕೊರಾನಾಕ್ಕೂ ತಾಳಮೇಳ, ಒಂದು ಸುಂದರ ಕನಸಿನ ಕೊನೆ, ಕೋವಿಡ್ ಬದಿಗಿಟ್ಟು ಸಿವಿಡಿ ನೋಡೋಣವೆ?, ಭಯಬಿದ್ದಾಗ ಜ್ವರ ಏಕೆ ಬರುತ್ತದೆ?, ಭೂಮಿತಾಯಿ ಶರ್ಬತ್ ಮಾಡುತ್ತಿದ್ದಾಳೆ, ಮರೀಚಿಕೆಯೂ ಕಾಣದಷ್ಟು ಮಬ್ಬುಮಬ್ಬು, ಗೀತಾಂಜಲಿ ಎಂಬ ಬೆಳಕಿನ ಬಾಲೆ…ಹೀಗೆ ವಿವಿಧ ಲೇಖನಗಳಿವೆ. ಈ ಎಲ್ಲವೂ ಪ್ರಜಾವಾಣಿಯ ‘ವಿಜ್ಞಾನ ವಿಶೇಷ ಅಂಕಣ ಬರಹ’ಗಳಾಗಿವೆ. ಕಳೆದ ಎರಡು ವರ್ಷಗಳಲ್ಲಿ (2019-2020) j ಜಗತ್ತಿನ ಕೆಲವು ಪ್ರಮುಖ ವಿದ್ಯಮಾನಗಳನ್ನು ಕನ್ನಡದ ಕನ್ನಡಕದ ಮೂಲಕ ನೋಡಿ ವ್ಯಾಖ್ಯಾನಿಸಲು ಹಾಗೂ ಮಧ್ಯೆ ಮಧ್ಯೆ ಕೆಲವು ಲೇಖನಗಳು ತಮ್ಮ ಅಂಕಣ ಬರಹದ ವಿಸ್ತರಣೆಯ ರೂಪದಲ್ಲಿ ಫೇಸ್ ಬುಕ್ ನಲ್ಲಿ ಬಂದಿದ್ದು , ಅವುಗಳನ್ನು ಸಹ ಈ ಸಂಕಲನದಲ್ಲಿ ಸೇರಿಸಿದ್ದಾಗಿ ಲೇಖಕರು ಹೇಳಿದ್ದಾರೆ.

Reviews

There are no reviews yet.

Be the first to review “ಆನಂದಾಮೈಡ್”

Your email address will not be published.