Description
ಡಾ. ಹಾ.ಮಾ. ನಾಯಕ ಅಂಕಣ ಬರಹ ಪುರಸ್ಕಾರ ಪಡೆದ ಕೃತಿ.
ಸಹನಾ ಕಾಂತಬೈಲು `ಆನೆ ಸಾಕಲು ಹೊರಟವಳು ’ ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆ. ಸೊಪ್ಪು, ತರಕಾರಿ, ಬಿಸಿನೀರ ಹಂಡೇ, ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ಬದುಕು ಮತ್ತು ಬವಣೆಗಳ ಕುರಿತು ಬರೆಯುತ್ತಲೇ ಅವರು ಜಾಗತಿಕ ಸಮಸ್ಯೆಯೊಂದನ್ನ ನಮ್ಮ ಮುಂದೆ ತಣ್ಣಗೆ ಹರವಿಟ್ಟು ಅದಕ್ಕೆ ಪರ್ಯಾಯ ಮಾರ್ಗವನ್ನು ತಮ್ಮದೇ ರೀತಿಯಲ್ಲಿ ಬಿತ್ತರಪಡಿಸುತ್ತಾರೆ. ಮುಗಿದು ಹೋಗುವ ಸಂಪನ್ಮೂಲಗಳ ಕುರಿತು ಅವರು ಹಳ್ಳಿ ಮೂಲೆಯಲ್ಲಿ ಕುರಿತು ಚಿಂತಿಸುತ್ತಾರೆ, ಅದಕ್ಕಾಗಿ ಮತ್ತೊಬ್ಬರಿಗೆ ಅದು ಉಪಯೋಗವಾಗುವ ನಿಟ್ಟಿನಲ್ಲಿ ತಾನೇ ಕಾರ್ಯಪ್ರವೃತ್ತರಾಗುತ್ತಾರೆ.
ಈ ಕೃತಿಯಲ್ಲಿ ಲೇಖಕಿ ಹಳ್ಳಿಯ ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಸ್ವಂತ ಅನುಭವವನ್ನು ಸರಳ ಪದಗಳೊಂದಿಗೆ ಸರಾಗವಾಗಿ ಪೋಣಿಸುತ್ತಾ ಹೋಗುತ್ತಾರೆ. ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಓದುಗರಿಗೆ ತಿಳಿಸಿಕೊಡುತ್ತಾರೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಹಳ್ಳಿಯ ಜನರ ಪಾಡು, ನೈಸರ್ಗಿಕ ವೈಪರೀತ್ಯಗಳಿಂದ ಬೆಳೆಗೆ ಆಗುವ ಹಾನಿ, ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಗುವ ರೈತರ ಪರಿಸ್ಥಿತಿ, ಎಲ್ಲವನ್ನು ಸಾಧಾರವಾಗಿ ವಿವರಿಸುತ್ತಾರೆ.
Reviews
There are no reviews yet.