Description
ಒಂದು ತರಗತಿಯಲ್ಲಿ ಪ್ರಭುಲಿಂಗಲೀಲೆಯ ಪಾಠ. ಮಾಯಾದೇವಿಯ ಕಾಮ ವಿಕಾರದ ವರ್ಣನೆ. ತರಗತಿಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ತಮ್ಮ ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯ ಬಗ್ಗೆ ಕೀಟಲೆ ಆರಂಭಿಸಿದರು. ಹುಡುಗಿ ಸೊರಗಿದಳು. ರಾಜರತ್ನಂ ಒಂದೆರೆಡು ಬಾರಿ ಅತ್ತ ಕಣ್ಣು ಹಾಯಿಸಿ ಕಂಡೂ ಕಾಣದಂತೆ, ಮಾಯೆಯ ಕಾಮವಿಕಾರವನ್ನು ವಿವರಿಸುತ್ತಿದ್ದರು. ಇತ್ತ ಆ ವಿದ್ಯಾರ್ಥಿಗಳು ಮುಂದಿದ್ದ ಹುಡುಗಿ ಮುಡಿದಿದ್ದ ಹೂ ದಂಡೆಯನ್ನು ಕಿತ್ತರು. ಇಬ್ಬರೂ ಹಂಚಿಕೊಂಡರು. ರಾಜರತ್ನಂ ಒಮ್ಮೆಲೆ ಹುಬ್ಬುಗಂಟಿಕ್ಕಿದರು. ತೋಳಿನ ಮೇಲಿದ್ದ ಉತ್ತರೀಯವನ್ನು ಮೇಲಕ್ಕೆ ಎಳೆದುಕೊಂಡರು. ವೇದಿಕೆಯಿಂದ ಇಳಿದರು. ವಿದ್ಯಾರ್ಥಿಗಳು ಏನೂ ತೋಚದೆ ಮಿಕಮಿಕ ನೋಡುತ್ತಿರುವಾಗ , ಇವರು ನೇರವಾಗಿ ಹಿಂದಿನ ಡೆಸ್ಕಿನ ಬಳಿಗೆ ಬಂದು ಒಬ್ಬ ವಿದ್ಯಾರ್ಥಿಯನ್ನು ಅನಾಮತ್ತಾಗಿ ಎತ್ತಿ ಹೊರಗೆ ಎಸೆದರು. ಇನ್ನೊಬ್ಬ ನಕ್ಕ. ಅವನನ್ನು ಜುಟ್ಟು ಹಿಡಿದು ಮೇಲಕ್ಕೆ ಎತ್ತಿ ಹೆಕ್ಕತ್ತಿಗೆ ಕೈಹಾಕಿ ಹೊರಕ್ಕೆ ತಳ್ಳಿದರು. ಅವರ ಕ್ರೋಧ ಇನ್ನೂ ತಗ್ಗಿರಲಿಲ್ಲ, ಕಣ್ಣು ಕಿಡಿಗಾರುತ್ತಿತ್ತು. ‘ಬನ್ರೋ ಯಾರ್ಯಾರು ಇದಿರೋ, ಎಲ್ಲರನ್ನು ನೋಡಿಕೊಳ್ಳುವೆನು.’ ಎನ್ನುತ್ತ ಒಮ್ಮೆ ತೋಳು ತಟ್ಟಿದರು, ಒಮ್ಮೆ ತೊಡೆ ತಟ್ಟಿದರು. ಅಂದು ಅಷ್ಟಕ್ಕೆ ಪಾಠ ಮುಗಿಯಿತು. ಇಡೀ ತರಗತಿ ಸ್ತಬ್ಧವಾಯಿತು. ಸಾಮೂಹಿಕವಾಗಿ ನಡುಕ ಶುರುವಾಯಿತು.
(ಒಳಪುಟಗಳಿಂದ)
*
ಇದು ರಿಟೈರ್ಡ್ ಮೇಷ್ಟ್ರು ರಾಜರತ್ನಂ ಹೊಸದಾಗಿ ಮೇಷ್ಟ್ರು ಆಗಲು ಹೊರಟಿದ್ದ ಯುವಕರಿಗೆ ಹೇಳಿದ ಕಿವಿಮಾತು. ಇದೇ ಅವರ ಮೇಷ್ಟ್ರಗಿರಿಯ ಉದ್ದಕ್ಕೂ ಪಾಲಿಸಿದ ಸೂತ್ರ.
*ಒಂದು ಗಂಟೆ ಪಾಠ ಮಾಡಬೇಕಾದರೆ ಎರಡು ಗಂಟೆ ಪಾಠಕ್ಕೆ ಸಿದ್ಧವಾಗಿರು. ಹಂಡೆ (ತಲೆ ತೋರಿಸಿ) ಬೇಗ ಖಾಲಿಯಾಗಬಾರದು.
*ನೀನು ಮಾಡುವ ಪಾಠಗಳಿಗೆ ಟಿಪ್ಪಣಿ ತಯಾರಿಸು. ಪಾಠ ಮುಗಿದ ಮೇಲೆ ಹರಿದುಹಾಕು. ಅದನ್ನ ಇಟ್ಟುಕೊಂಡರೆ ಮತ್ತೆ ಪುಸ್ತಕ ಓದುವುದಿಲ್ಲ. ಹೊಸ ವಿಷಯಗಳ ಕಡೆ ಗಮನ ಹರಿಯುವುದಿಲ್ಲ.
*ನೀನು ಮೇಷ್ಟ್ರು ಆಗುವವನು. ನಿಯತ್ತಾಗಿ ಪಾಠಮಾಡು. ಪಡೆದ ಸಂಬಳ ಜೀರ್ಣವಾಗಬೇಕು. ವಿದ್ಯಾರ್ಥಿಗಳ ಉತ್ಸಾಹವನ್ನು ಎಂದೂ ಕುಗ್ಗಿಸಬೇಡ. ತರಗತಿ ಮುಗಿದ ಮೇಲೆ ಬೋರ್ಡ್ ಮೇಲೆ ಬರೆದದ್ದನ್ನು ಚೆನ್ನಾಗಿ ಅಳಿಸಿ ಬಾ.
Reviews
There are no reviews yet.