Description
‘ಆಕಾಶದಲ್ಲಿ ಹಾರಾಡುವ ಹಕ್ಕಿಯ ಸಂಕ್ಷಂದ ಮತ್ತು ಆರಾಮವಾಗಿ ಕುಳಿತಹಕ್ಕಿಯ ನೆಮ್ಮದಿಯ ಮುಂದೆ ಹೆಚ್ಚಿನದು ಏನಿದೆ? ಯಾರಾದರೂ ತಟಸ್ಥವಾಗಿ ಜಗತ್ತನ್ನು ನೋಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಪಾರಿವಾಳದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಆ ಹಕ್ಕಿಯ ಮನಃಸ್ಥಿತಿಗೆ ಧ್ಯಾನಸ್ಥ ಸ್ಥಿತಿಯಲ್ಲಿರುವ ಮನುಷ್ಯನ ಮನಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ತೋರುವುದಿಲ್ಲ. ಹೀಗಿದ್ದಾಗ ಚಿಂತೆಗಳು ನಿಶ್ಚಿಂತ ಸ್ಥಿತಿಗೆ ಬಂದು, ಅಸ್ತಿತ್ವದ ಅನನ್ಯತೆಯ ಅನುಭವವಾಗುತ್ತದೆ. ಇದು ನಿಜವಾದ ಸತ್ಯದ ಜೀವಂತ ನಿದರ್ಶನವಾಗಬಹುದು. ಜೀವನದಲ್ಲಿ ಎಲ್ಲಿ ಯಶಸ್ಸುಗಳನ್ನೂ ಅಪಯಶಸ್ಸನ್ನೂ ಅನುಭವಿಸಿರುವ ಮನುಷ್ಯನು, ಬುದ್ದಿಜನ್ಯವಾದ ಸ್ಪರ್ಧಾತ್ಮಕ ಹಾಗೂ ಸಂಕೀರ್ಣವಾದ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ದೂರವಿರಿಸಿ ಅವುಗಳಿಂದ ನಿವೃತ್ತಿಹೊಂದಿ ಸ್ವಯಿಚ್ಛೆಯಿಂದಲೇ ವಾನಪ್ರಸ್ಥ ಸ್ಥಿತಿಯನ್ನು ಸ್ವೀಕರಿಸಿದಾಗ, ಅವನು ಪರಮೋಚ್ಚ ಸಂತೃಪ್ತಿಯನ್ನಲ್ಲದೇ ಬೇರೇನನ್ನೂ ಬಯಸುವುದಿಲ್ಲ. ಅಂಥಾ ಮನುಷ್ಯನು ಹೇಗೆ ಮರಗಳು ಹಕ್ಕಿಗಳೂ ತಂಪಾದ ಗಾಳಿಯ ಸುಖವನ್ನು ಅನುಭವಿಸುತ್ತದೋ ಹಾಗೆ ಎಲ್ಲ ಒತ್ತಡಗಳನ್ನು ಕಳಚಿದಂಥಾ ಅಥವಾ ಮಾಯಾಮಾಡಿದಂಥಾ ನಿರಾಳ ಮನಸ್ತನಾಗಿ ಶುದ್ಧಗಾಳಿಯನ್ನು ಆಸ್ವಾದಿಸುತ್ತಾನೆ. ಇದೇ ಬದುಕಿನ ಉದ್ದೇಶವೆಂದು ಕರೆಯುವ ಅಗತ್ಯವೇ ಇಲ್ಲ. ಅಥವಾ ಅದೂ ತಪ್ಪಾಗುತ್ತದೆ. ಏಕೆಂದರೆ ಇಂಥದ್ದು ಯಾವಾಗ ಘಟಿಸಬೇಕೆಂದಿರುತ್ತದೋ ಆಗ ಘಟಿಸುತ್ತದೆ. ಮನುಷ್ಯನಿಗೆ ಆತ ಸಾಯುವ ಮುನ್ನ, ತನ್ನ ಇಡೀ ಜೀವಮಾನದಲ್ಲಿ ಒಮ್ಮೆಯಾದರೂ ಇಂಥಾ ಪರಮೋಚ್ಚ ಅನುಭವವಾದರೆ ಆತನಿಗೆ ಆತ್ಯಂತಿಕ ಸುಖ ಮತ್ತು ಅತ್ಯಾನಂದದ ಅನುಭವವಾಗುತ್ತವೆ.’
(ಮುನ್ನುಡಿಯಿಂದ ಆರಿಸಲಾಗಿದೆ)
Reviews
There are no reviews yet.