Sale!

ಅಜ್ಞಾತ

153.00

Add to Wishlist
Add to Wishlist
Email

Description

ಪ್ರಸ್ತುತ ಕಾದಂಬರಿಯಲ್ಲಿ ವಿವೇಕಾನಂದ ಕಾಮತ್ ರವರು ಆಧ್ಯಾತ್ಮಿಕ ಪ್ರಶ್ನೆಗಳನ್ನು ತಮ್ಮೆದುರು ಇಟ್ಟುಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ ಅತ್ಯಂತ ಸರಳ ಭಾಷೆ ನಿತ್ಯ ಕಣ್ಣೆದುರೇ ನಡೆವ ಸಂಗತಿಗಳು ತಡವರಿಸದ ನಡೆಯಲ್ಲಿ ಅವರು ಕಥೆ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಹಲವು ಕಾದಂಬರಿಗಳನ್ನು ಈಗಾಗಲೇ ಬರೆದಿರುವುದರಿಂದ ಶ್ರೀಸಾಮಾನ್ಯರು ಪುಸ್ತಕದ ಓದಿನಲ್ಲಿ ಬಯಸುವುದೇನು ಎನ್ನುವುದನ್ನು ಅವರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಓದಿನ ಓಘಕ್ಕೆ ತೊಂದರೆಯಾಗದಂತೆ ಸುಲಭವಾಗಿ ಕಥೆ ಹೇಳುವುದು ಅವರಿಗೆ ಸಿದ್ಧಿಸಿದೆ. ಅಪರಿಚಿತ ದೇಶಗಳನ್ನು ತಮ್ಮ ಕಥನಕ್ಕೆ ಒಗ್ಗಿಸಿಕೊಳ್ಳುವ ಪ್ರಬುದ್ಧತೆ ಅವರಿಗೆ ದಕ್ಕಿದೆ. ಎಲ್ಲಾ ಕಾಲಗಳಲ್ಲೂ ಮತ್ತು ಎಲ್ಲಾ ದೇಶಗಳಲ್ಲೂ ಮನುಷ್ಯರನ್ನು ಕಾಡಿದ ಈ ಪ್ರಶ್ನೆಗಳು ಕಾಮತ್ರ‌ನ್ನು ಮಾಡಿರುವುದು ಅಚ್ಚರಿಯೇನಲ್ಲ ಆದರೆ ಈ ಪ್ರಶ್ನೆಗಳಿಗೆ ಉತ್ತರಗಳು ಮಾತ್ರ ಅತ್ಯಂತ ಸಾಪೇಕ್ಷವಾದವುಗಳಾಗಿವೆ. ಎಲ್ಲಾ ಕಾಲದಲ್ಲೂ ಆ ಹೊತ್ತಿಗೆ ಸರಿಹೊಂದುವ ಉತ್ತರಗಳನ್ನು ಮನುಷ್ಯರು ಕಂಡುಕೊಂಡಿದ್ದಾರೆ ನಮ್ಮ ಈ ಸಂಕಷ್ಟದ ದಿನಗಳಲ್ಲಿ ಕಾಮತ್ ಅವರು ತಮ್ಮದೇ ಸಮಾಧಾನಗಳನ್ನು ಈ ಚಿರಂಜೀವಿ ಪ್ರಶ್ನೆಗಳಿಗೆ ಕಂಡುಕೊಂಡು ಈ ಕಾದಂಬರಿಯ ಮೂಲಕ ಅವನ್ನು ಕಲಾತ್ಮಕವಾಗಿ ದಾಖಲಿಸುತ್ತಾರೆ

Reviews

There are no reviews yet.

Be the first to review “ಅಜ್ಞಾತ”

Your email address will not be published.