Sale!

ಅಕಾಕಿ ಕೋಟು

203.00

Add to Wishlist
Add to Wishlist
Email

Description

ಚನ್ನಕೇಶವ ಬರಿದೆ ಮನರಂಜನೆಯನ್ನು ನೀಡುವ ನಾಟಕಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಎಲ್ಲವೂ ಆಂತರ್ಯದಲ್ಲಿ ಆಯಾ ಕಾಲದ ಏರಿಳಿತಗಳನ್ನು ಧ್ವನಿಸುವಂತಹ ನಾಟಕಗಳನ್ನೇ ಆರಿಸಿಕೊಂಡು ಬರೆದುಕೊಂಡಿದ್ದಾರೆ ಮತ್ತು ಈ ಎಲ್ಲಾ ನಾಟಕಗಳಲ್ಲಿ ಬರೀ ನಟರೇ ಮುಖ್ಯವಾಗಿರದೆ ನಾಟಕೀಯತೆಯೇ ಪ್ರಧಾನವಾಗಿವೆ. ಸಂಗೀತ, ಸಂಗೀತದ ಮೇಳ, ಸೂತ್ರಧಾರ, ಅವರ ಹಿಮ್ಮೇಳ, ಇವೆಲ್ಲವೂ ಗ್ರೀಕ್ ನಾಟಕಗಳಲ್ಲಿ ಹಾಗೂ ನಮ್ಮ ಜನಪದ ನಾಟಕಗಳಲ್ಲಿ ಕಾಣಬಹುದಾದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಯಶಸ್ವೀ ನಾಟಕೀಯ ತಂತ್ರಗಳಾಗಿವೆ. ಈ ತಂತ್ರಗಳನ್ನು ಚನ್ನಕೇಶವ ಅವರು ತಮ್ಮ ಬಹುತೇಕ ನಾಟಕಗಳಿಗೆ ಬಹಳ ಯಶಸ್ವಿಯಾಗಿ ಕಸಿಮಾಡಿಕೊಂಡಿದ್ದಾರೆ.

ಮೌನೇಶ ಬಡಿಗೇರ

(ಮುನ್ನುಡಿಯಿಂದ)
===========================================

ಚನ್ನಕೇಶವ ಜಿ. ಅವರು ಚಿತ್ರಕಲೆ ಮತ್ತು ರಂಗಭೂಮಿಯ ಪದವೀಧರರು. ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಸ್ವತಃ ತಮ್ಮನ್ನು ತೊಡಗಿಸಿಕೊಂಡು, ಅಭಿನಯ, ನಿರ್ದೇಶನ, ನಾಟಕ ರಚನೆಯ ಜೊತೆಗೆ ಹವ್ಯಾಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಂಗ-ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದರು.

೨೦೦೩ರಲ್ಲಿ ಅಮೇರಿಕಾದ `ಬ್ರೆಡ್ ಆಂಡ್ ಪಪೆಟ್’ ಸಂಸ್ಥೆಯ ಎರಡು ತಿಂಗಳ ಕಾರ್ಯಾಗಾರಕ್ಕೆ ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದರು. ೨೦೦೯ರಲ್ಲಿ ಬ್ರಿಟಿಷ್ ಕೌನ್ಸಿಲ್ ಏರ್ಪಡಿಸಿದ್ದ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರೋದಲ್ಲಿ ನಡೆದ `ಥಿಯೇಟರ್ ಸೂತ್ರ’ ರಂಗ ಸಮ್ಮೇಳನಕ್ಕೆ ಭಾರತದ ಒಬ್ಬ ರಾಯಭಾರಿಯಾಗಿದ್ದರು. ೨೦೧೬ರಲ್ಲಿ ಅಮೇರಿಕಾದ ದಕ್ಷಿಣ ಕರೋಲಿನಾದ ವಿಶ್ವವಿದ್ಯಾಲಯದಲ್ಲಿ ನಡೆದ ಜಗತ್ತಿನಾದ್ಯಂತ ಚದುರಿರುವ ಆಫ್ರಿಕಾ ಜನಾಂಗದವರ `ಮಹಿಳಾ ಕಲಾ ಸಮ್ಮೇಳನ’ಕ್ಕೆ ಸಿದ್ದಿ ಜನಾಂಗದ ಪ್ರತಿನಿಧಿಯಾಗಿ, ಸಿದ್ದಿ ಕಲಾವಿದೆಯರೊಡನೆ ವಿಶೇಷ ಆಹ್ವಾನಿತರಾಗಿದ್ದರು.

ದೇಶಕಾಲ ಸಾಹಿತ್ಯ ಪತ್ರಿಕೆಯ ವಿನ್ಯಾಸಕರಾಗಿದ್ದ ಇವರು ೩೦೦ಕ್ಕೂ ಹೆಚ್ಚು ಪುಸ್ತಕ ವಿನ್ಯಾಸ ಮಾಡಿದ್ದಾರೆ. ಮಂಚೀಕೇರಿಯ `ಸಿದ್ದಿ ಟ್ರಸ್ಟ್’ ಮತ್ತು ಬೆಂಗಳೂರಿನ `ಲೋಕಚರಿತ ಟ್ರಸ್ಟ್’ ಇವುಗಳ ಸ್ಥಾಪಕ ಸದಸ್ಯರಾದ ಇವರು, ಸಿದ್ದಿ ಸಮುದಾಯದೊಟ್ಟಿಗೆ ಮತ್ತು ಬೆಂಗಳೂರಿನಲ್ಲಿ ಯುವ ಕಲಾಸಕ್ತ ವಿದ್ಯಾರ್ಥಿಗಳೊಡನೆ ಕಲಾ ಸಂಸ್ಕೃತಿಯನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು.

Reviews

There are no reviews yet.

Be the first to review “ಅಕಾಕಿ ಕೋಟು”

Your email address will not be published.