ಅಲೀಸ್ ವಾಕರ್ ಕೆನ್ನೀಲಿ (ಲೇಖನ, ಪ್ರಬಂಧ, ಭಾಷಣ)

220.00

Add to Wishlist
Add to Wishlist
Email

Description

ಲೇಖಕರು: ಎಂ.ಆರ್. ಕಮಲ

ಪ್ರಕಾಶನ: ಕಥನ ಪ್ರಕಾಶನ

“Daughter is coming home”

(-Alice Walker)

ಮಗಳು ಮನೆಗೆ ಬರುತ್ತಿದ್ದಾಳೆ . . .

ಅಲೀಸ್ ವಾಕರ್: ಆಧುನಿಕ ಆಫ್ರಿಕನ್ – ಅಮೆರಿಕನ್ ಸಾಹಿತ್ಯಕ್ಕೆ ಹೊಸ ಸಂವೇದನೆ, ಹೊಸ ನೋಟ ನೀಡಿದವರು. ಮಾತ್ರವಲ್ಲ, ಸ್ತ್ರೀವಾದಿ ದೃಷ್ಟಿಕೋನವನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಿದವರು.

ಮೂರು ದಶಕಕ್ಕೂ ಹಿಂದೆ ಎಂ. ಆರ್. ಕಮಲ ಅವರು ಅನುವಾದಿಸಿದ ‘ಕತ್ತಲ ಹೂವಿನ ಹಾಡು’ ಕಾವ್ಯ ಸಂಗ್ರಹದಲ್ಲಿ ಅಲೀಸ್ ವಾಕರ್‌ರ ಕೆಲವು ಕವಿತೆಗಳು ಕನ್ನಡಕ್ಕೆ ಬಂದಿದ್ದವು. ಬಹುಶ್ರುತ ಲೇಖಕಿಯಾದ ಅಲೀಸ್ ವಾಕರ್ ಕಥೆ, ಕಾದಂಬರಿ, ವ್ಯಕ್ತಿಚಿತ್ರ, ಪ್ರಬಂಧ ಹೀಗೆ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡದಲ್ಲಿ ಅಷ್ಟೊಂದು ಅನುವಾದಗೊಂಡಿಲ್ಲ.

ಇದೀಗ, ಅಲೀಸ್‌ರ ಪ್ರಬಂಧ, ಉಪನ್ಯಾಸ, ಲೇಖನಗಳು ‘ಕೆನ್ನೀಲಿ’ ಬಣ್ಣದ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿವೆ.

ಗಾಳಿ ಎಲ್ಲಿಂದ ಬಂದರೂ ಉಸಿರಿನ ಸೊಗಸು ಹೆಚ್ಚಿಸಿ, ಜೀವಿಸಲು ಹೊಸ ಅವಕಾಶ ಒದಗಿಸುವುದು.

ಬೆಳಕು ಎಲ್ಲಿಂದಲೇ ಹಾದು ಬರಲಿ ಕಣ್ಣಿಗೆ ಹೊಸ ದಿಟ್ಟಿ, ಮೈಗೆ ನವೀನ ಮೈಕಾಂತಿ ನೀಡಬಲ್ಲುದು.

ಕಣ್ಣಿಗೆ ಕಾಣದೆ ಮೈಯೆಲ್ಲ ಆವರಿಸುವ ಇಬ್ಬನಿ ದೇಹಕೆ ಹೊಸ ಸ್ಪರ್ಶ ಸಂವೇದನೆಯನ್ನು ಪಾಲಿಸಿ, ಸಂವೇದನಾಶೀಲರನ್ನಾಗಿಸುವುದು.

ಶರದ್ರುತುವಿನ ಗಾಳಿ, ಬೆಳಕು, ಆಹ್ಲಾದಕರ ಪರಿಸರಕ್ಕೆ ವಿಶೇಷ ಮಹತ್ವ. ಇಂದು ಶರದ್ರುತುವಿನ ಹತ್ತನೆಯ ದಿವಸ.

ಮನಸಿನ ಹಳೆಯ ಕೊಳೆ ಕಳೆದು ಕಾದಿರುವ ಹೊಸ ದಿನಗಳನು ತಬ್ಬಲು ಈ ಹೊಸ ಪುಸ್ತಕವೂ ಜತೆಯಾಗಿರಲಿ.

ಶರದ್ರುತು, ಅಶ್ವಯುಜ, ದಶಮಿ. ಹಬ್ಬ ನಿಮ್ಮೆಲ್ಲರ ಮನಸ್ಸನ್ನು ಇನ್ನಷ್ಟು ನವಿರುಗೊಳಿಸಲಿ. ಮನುಷ್ಯರಲ್ಲಿ ಅಡಗಿರುವ ವಿನಾಕಾರಣ ದ್ವೇಷಾಸೂಯೆ, ಕರುಬುವಿಕೆ, ವಿಘ್ನಸಂತೋಷಿ ಗುಣ ಶರದ್ರುವಿನ ಮೃದುತ್ವದಲಿ ಕರಗಿ ಹೋಗಲಿ.

ನಿಮ್ಮ ಕುಟುಂಬದ ಮತ್ತು ಹಿತೈಷಿಗಳೊಂದಿಗೆ ಕಳೆಯುವ ಗಳಿಗೆಗಳು ಸಾರ್ಥಕಭಾವವನು

Reviews

There are no reviews yet.

Be the first to review “ಅಲೀಸ್ ವಾಕರ್ ಕೆನ್ನೀಲಿ (ಲೇಖನ, ಪ್ರಬಂಧ, ಭಾಷಣ)”

Your email address will not be published.