Description
ಒಂದೇ ನೋಟಕ್ಕೆ ಹುಡುಗಿ ಪಾರುಲ್ಳ ಮನ ಗೆದ್ದುಬಿಟ್ಟಳು
ಜನವರಿ ತಿಂಗಳಿನÀ ತಂಪಾದ ಬೆಳಗು. ಹೊರಗಡೆ ಗಾಢವಾದ ಮಂಜು ಆವರಿಸಿರುವುದರಿಂದ ದೂರದೂರದವರೆಗೂ ಏನೂ ಕಾಣಿಸದು. ಆದರೂ ಮಕ್ಕಳು ಶಾಲೆಗೆ ಹೋಗಲೇಬೇಕು. ಮಲಗು ಕೋಣೆಯಲ್ಲಿ ಗಾಢನಿದ್ರೆಯಲ್ಲಿದ್ದ ಅಯನ್ ಶಾಯನಾರನ್ನು ಪಾರುಲ್ ಕಾಡಿಸಿ ಪೀಡಿಸಿ ಎಬ್ಬಿಸಿದಳು. ಆದರೂ ಮತ್ತೆ ಮೈತುಂಬಾ ಹೊದ್ದುಕೊಂಡು ಮಲಗಿಬಿಟ್ಟರು ಮಕ್ಕಳು. ಮತ್ತೆ ಒಳಬಂದು ಚಾದರ ಜಗ್ಗಿ “ಅಯ್ಯೋ ದೇವರೇ, ಈ ಮಕ್ಕಳನ್ನು ಹೇಗೆ ಎಬ್ಬಿಸಲಿ? ನನ್ನ ಒಂದೂ ಮಾತು ಕೇಳುವುದಿಲ್ಲ, ಇನ್ನು ಅರ್ಧಗಂಟೆಯಲ್ಲಿ ಶಾಲೆಯ ಬಸ್ಸು ಬಂದುಬಿಡುತ್ತದೆ. ಇನ್ನೂ ಮಲಗಿಬಿಟ್ಟಿವೆ ಇವು” ಎಂದು ಗೊಣಗುತ್ತಾ ಮಕ್ಕಳ ಉಪಹಾರದ ತಯಾರಿಯಲ್ಲಿ ತೊಡಗಿದಳು. ಟಿಫಿನ್ ಡಬ್ಬಿ ಸಿದ್ಧಗೊಳಿಸಿ ಮತ್ತೆ ಮಕ್ಕಳ ಕಡೆಗೆ ಹೋಗಿ ನೋಡುತ್ತಾಳೆ. ಆಗಲೇ ಅತ್ತೆ ಮೊಮ್ಮಕ್ಕಳನ್ನು ಪ್ರೀತಿಯಿಂದ “ಎದ್ದೇಳಿ, ಏಳಿ, ಬೇಗನೆ ಶಾಲೆಗೆ ಹೋಗಲು ತಯಾರಾಗಿ ಏಳಿ” ಅಂತ ಎಬ್ಬಿಸುತ್ತಿದ್ದರು. ಪಾರುಲ್ ನಸುನಗುತ್ತಾ ಮತ್ತೆ ಅಡುಗೆ ಮನೆಗೆ ತಿರುಗಿದಳು, ರಾತ್ರಿಯ ಮುಸುರೆಗಳನ್ನು ತಿಕ್ಕಲು ಆರಂಭಿಸಿದಳು.
ಇದರಲ್ಲಿ ಏನೂ ಹೊಸತಿಲ್ಲ, ನಿತ್ಯವೂ ಇದೇ ಕತೆ, ಅಯನ್ ಮತ್ತು ಶಾಯನಾ ಪ್ರತಿದಿನ ಹೋಗುವುದರಲ್ಲಿ ತಡಮಾಡಿಕೊಂಡು ತಂದೆ-ತಾಯಿಯಿಂದ ಬೈಯ್ಗುಳ, ಒಮ್ಮೊಮ್ಮೆ ಹೊಡೆತವನ್ನೂ ತಿನ್ನುತ್ತಿದ್ದರು. ಆಗ ಅವರ ಅಜ್ಜಿ ಅಡ್ಡ ಬಂದು ಎಲ್ಲವನ್ನೂ ಸಂಭಾಳಿಸುತ್ತಿದ್ದಳು. ಮೊಮ್ಮಕ್ಕಳನ್ನು ಪ್ರೀತಿಯಿಂದ ಎಬ್ಬಿಸುವುದು, ಯೂನಿಫಾರ್ಮ್ ಹಾಕಿಕೊಂಡ ಮೇಲೆ ತಟ್ಟೆಗೆ ಹಾಕಿ ಕೊಟ್ಟ ನಾಷ್ಟಾವನ್ನು ಸಂಪೂರ್ಣ ತಿನ್ನುವಂತೆ ಅಗ್ರಹಿಸುವುದು ಅಜ್ಜಿಯ ಕೆಲಸವಾಗಿತ್ತು. ಮನೆಯಲ್ಲಿದ್ದಾಗಂತೂ ಮಕ್ಕಳು ಸದಾ ಅಜ್ಜಿ ಸಂಗಡವೇ ಇರುತ್ತಾರೆ. ಒಮ್ಮೊಮ್ಮೆ ಪುಟ್ಟ ಕೈತೋಟÀದಲ್ಲಿ ತರಕಾರಿ-ಹಣ್ಣುಗಳನ್ನು ಕೀಳುವುದು, ಕೆಲವೊಮ್ಮೆ ಮಣ್ಣಿನ ಪಾತ್ರೆಯಲ್ಲಿ ಹಕ್ಕಿಗಳಿಗೆ ನೀರು ತುಂಬುವುದು, ಮತ್ತೊಮ್ಮೆ ಆಕಳಿಗೆ ರೊಟ್ಟಿಯನ್ನು ತಿನ್ನಿಸುವುದು ಹೀಗೇ ಅವರದು ಅಜ್ಜಿಯ ಒಡನಾಟ. ಆಕಳಿಗೆ ರೊಟ್ಟಿಯನ್ನು ತಿನ್ನಿಸುವಾಗಲಂತೂ ಮಕ್ಕಳಿಗೆ ರೋಮಾಂಚನ! ಅಜ್ಜಿಯ ಕೈಯಿಂದ ನಿಧಾನವಾಗಿ ರೊಟ್ಟಿಯನ್ನು ಇಸಿದುಕೊಂಡು ಮುಂದೆ ಹಿಡಿಯುವುದು, ಆಕಳು ಅದನ್ನ ಸರಕ್ಕನೆ ಕಸಿದುಕೊಡು ತಿನ್ನುವುದನ್ನು ನೋಡುವುದು ಬಲು ರೋಚಕವಾದುದು ಅವರಿಗೆ. ದೊಡ್ಡ ಬಾಯಿ ತೆರೆದು ತಿನ್ನುವುದನ್ನು ನೋಡುತ್ತಾ ಮಕ್ಕಳು ಮೈ ಮರೆತುಬಿಡುತ್ತಿದ್ದರು. ಅಜ್ಜಿಯೂ ಅಷ್ಟೇ, ಮೊಮ್ಮಕ್ಕಳನ್ನು ಬಹಳ ಹಚ್ಚಿಕೊಂಡಿದ್ದಳು. ಇದಕ್ಕಾಗಿಯೇ ಆಕೆ ತನ್ನ ಹಿರಿಯ ಮಗ ಅವಿನಾಶನ ಮನೆಯಲ್ಲಿಯೇ ಜಾಸ್ತಿ ದಿನ ಕಳೆಯುತ್ತಿದ್ದಳು. ಈಗಾಗಲೇ ಅಜ್ಜಿಗೆ ನಗರದ ರೀತಿ ರಿವಾಜುಗಳು, ಮಕ್ಕಳ ಫÀಟಾ-ಫÀಟ್ ಇಂಗ್ಲಿಷ್ ಕೂಡ ಮೆಲ್ಲಗೆ ಅಷ್ಟಿಷ್ಟೆಲ್ಲ ಅರ್ಥವಾಗತೊಡಗಿತ್ತು. ಅಜ್ಜಿಯು ಹಳ್ಳಿಯವಳು. ಆಕೆಯ ಯಜಮಾನ, ಮಕ್ಕಳ ಅಜ್ಜ ಆ ಕಾಲದಲ್ಲೇ ಮೆಟ್ರಿಕ್ ಪರೀಕ್ಷೆಯನ್ನು ತನ್ನೂರಿನಲ್ಲಿ ಮೊದಲಿಗನಾಗಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದನು. ಆದಕಾರಣ ಆತನನ್ನೇ ಗ್ರಾಮದ ಸರಪಂಚ್Àನನ್ನಾಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ತಮ್ಮ ಚಿಕ್ಕ ಮಗ ಮತ್ತು ಸೊಸೆಯ ಜೊತೆ ಹಳ್ಳಿಯಲ್ಲಿಯೇ ಇರುತ್ತಿದ್ದರು. ಆದರೆ, ಅಗತ್ಯ ಬಿದ್ದ ಕೂಡಲೇ ಮಕ್ಕಳನ್ನು ನೋಡಲು ನಗರಕ್ಕೆ ಬಂದುಬಿಡುತ್ತಿದ್ದರು.
Reviews
There are no reviews yet.