Description
ಯಾವುದೇ ಒಂದು ಕೃತಿಯನ್ನು ಓದುವಾಗ ಮೊದಲ ಓದಿಗೆ ಇಂಥದ್ದೊಂದು ಕೃತಿ ಬೇಕಿತ್ತು ಎಂದು ಅನಿಸಬೇಕು. ಇದು ಅದೇ ಹಳೆಯ ಜಾಡು ಎಂದು ಅನಿಸಬಾರದು ದೊಡ್ಡದೊಂದು ಪರಂಪರೆಯೇ ಇರುವಾಗ ಜಾಡಿಗೆ ಬಿಡುವುದು ಸುಲಭ. ಕೃತ್ಯ ಕೃತ್ಯ ನೆನೆಸುವುದು ಸುಲಭ. ಭಾಷೆಯಲ್ಲಿಯೇ ಸಂಭವಿಸುವ ಸಂಭವಿಸುವ ಲೌಕಿಕ ಸಾಹಿತ್ಯಕ್ಕೆ ಮೌನ ಮತ್ತು ಮಾತುಗಳ ನಡುವಣ ಕಷ್ಟದಿಂದಲೇ ಮೈ ಪಡೆಯುವ ಅನುಭವದ ನುಡಿಕಿಡಿಗಳ ಭಿತ್ತಿಯೊಂದು ಹಿನ್ನಲೆಯಾಗಿ ಇದ್ದಾಗ ಲೌಕಿಕವು ಅನುಭಾವದ ವೈಖರಿಗಳಿಂದ ಕಾಣ್ಕಿಗಳಿಂದ ಪ್ರಭಾವಿತವಾಗಿಯೂ ತಾನು ಸ್ವೋಪಜ್ಞವಾಗುವುದು ಅನಿವಾರ್ಯ.
ಅಂತಹ ಸ್ವೋಪಜ್ಞ ಲೌಕಿಕ ನಿರೂಪಣೆಯೊಂದನ್ನು ಮಿತ್ರ ಪ್ರೊ.ಎಚ್. ಎನ್ ಮುರಳೀಧರ ಅವರು ಇಂಥದ್ದೊಂದು ನಿರೂಪಣೆಯ ಅಗತ್ಯವಿತ್ತು ಎಂದು ಮನಗಾಣಿಸುವಂತೆ ಈ ಕೃತಿಯಲ್ಲಿ ನೀಡಿದ್ದಾರೆ. ಈ ಪ್ರಸ್ತುತ ಪುಸ್ತಕದ ಪ್ರಕಾಶನ ಪರಸ್ಪರ ಪ್ರಕಾಶನ.
Reviews
There are no reviews yet.