Description
ಬಹುಗುಣರ ಜೀವನತತ್ವವು ಸೋಲಿನಲ್ಲಿಯೂ, ಗೆಲುವಿನಲ್ಲಿಯೂ ಅವರನ್ನು ಕಾಪಾಡಿದೆ. ತಮ್ಮ ಜೀವನದುದ್ದಕ್ಕೂ ಅವರು ಜಾಗತಿಕ ಮತ್ತು ಭಾರತದ ಪರಿಸರಕ್ಕಾಗಿ ಹೋರಾಟ ನಡೆಸಿದ್ದಾರೆ. ಪರಿಸರದ ಉಳಿವಿಗಾಗಿ ಹೋರಾಡುತ್ತಿರುವ ಅನೇಕ ರಾಷ್ಟ್ರಗಳ ಜನರಿಗೆ ಅವರ ಜೀವನ ಪ್ರೇರಣೆಯಾಗಲಿದೆ ಎಂಬ ಭರವಸೆ ನನಗಿದೆ. ದೂರದೃಷ್ಟಿಯಿಲ್ಲದ ಅರಣ್ಯ ನೀತಿಗಳ ವಿರುದ್ಧದ ಪ್ರತಿಭಟನೆಯಾಗಿರಬಹುದು, ಸುತ್ತಮುತ್ತಲ ಪ್ರದೇಶಗಳ ಅನೇಕ ಪರಿಸರ ಸಮಸ್ಯೆಗಳ ಕುರಿತ ಹೋರಾಟಗಳಾಗಿರಬಹುದು, ಅವುಗಳ ಹಿಂದೆ ಇದ್ದ ಹಿಮಾಲಯದ ಪರಿಸರ ಮತ್ತು ಜನರ ಕುರಿತಾದ ಅವರ ಆಳವಾದ ಪ್ರೀತಿ ಮತ್ತು ಕಾಳಜಿಯನ್ನು ನಾನು ಕಂಡುಕೊಂಡಿದ್ದೆ. ಅವರ ಕೊನೆಯ ದಿನಗಳ ಸಮಯದಲ್ಲಿ ಅವರೊಡನೆಯ ನನ್ನ ಸಂಭಾಷಣೆಯಲ್ಲಿಯೂ ಕೂಡ ಆ ಭಾವನೆಗಳು ಅಷ್ಟೇ ಉತ್ಕಟವಾಗಿದ್ದದ್ದು ನನ್ನ ಅನುಭವಕ್ಕೆ ಬರುತ್ತಿತ್ತು.
– ಚಾರ್ಜ್ ಆಲ್ಫ್ರೆಡ್ ಜೇಮ್ಸ್
ಈ ಪುಸ್ತಕವು ನಿರ್ಜಿವ ದಾಖಲೆಗಳ ಒಣ ವಿವರಗಳಿಗೆ ಸೀಮಿತವಾಗಿರದೇ, ಬಹುಗುಣರ ಜೀವನದ ಹಲವಾರು ಪ್ರಸಂಗಗಳ ರೋಚಕ ಅನುಭವ ಮತ್ತು ಅವು ಹೇಗೆ ಅವರ ವಿಚಾರ ಮತ್ತು ಆಚಾರಕ್ಕೆ, ಸರಳ ಜೀವನಕ್ಕೆ ಅನುವು ಮಾಡಿಕೊಟ್ಟವು ಎಂಬುದನ್ನು ತೋರಿಸಿಕೊಟ್ಟಿದೆ. ಗಾಂಧೀಜಿಯವರ ಜೀವನದ ಹಾಗೆ ಬಹುಗುಣರ ಸರಳ ಜೀವನವೇ ಪರಿಸರದ ಉಳಿವಿಗೆ ಒಂದು ಮಹತ್ವದ ಸಂದೇಶ ಎನ್ನುವುದನ್ನು ಈ ಪುಸ್ತಕವು ಮನಗಾಣಿಸುತ್ತದೆ.
– ಪಾಂಡುರಂಗ ಹೆಗಡೆ
Reviews
There are no reviews yet.