Sale!

ಅರಸು ಕುರನ್ಗರಾಯ

225.00

Add to Wishlist
Add to Wishlist
Email

Description

ಮಾದಿಗ ಸಮುದಾಯದ ವ್ಯಕ್ತಿ ರಾಜನಾದದ್ದು…..

ದೇಶದಲ್ಲಿ ದಲಿತರು ರಾಜರಾದ ಸಂಗತಿ ಇತಿಹಾಸದಲ್ಲಿ ಕಾಣುವುದಿಲ್ಲ, ಜಾತಿಯ ಕಾರಣಕ್ಕೆ ಇತಿಹಾಸಕಾರರೂ ಅವರನ್ನು ಅಲಕ್ಷಿಸಿದ್ದಾರೆ ಎಂಬ ವಾದವೂ ಇದೆ. ಆದರೆ ಈಗಿನ ತುಮಕೂರು ಜಿಲ್ಲೆ ಸಿದ್ದರಬೆಟ್ಟ ಹಿಂದಿನ ಸುವರ್ಣ ಗಿರಿ ಸಂಸ್ಥಾನದಲ್ಲಿ ಮಣೆಗಾರ ಸಮುದಾಯದ ಕುರಂಗರಾಯ ರಾಜನಾಗಿ ಆಳ್ವಿಕೆ ನಡೆಸಿದ್ದ ಎಂಬ ಬಗ್ಗೆ ಚರ್ಚೆ ನಡೆದಿದೆ. ಜಿಂಕೆ ರಂಗರಾಯನಾಗಿದ್ದ ಕುರಂಗರಾಯ 16 ಮತ್ತು 17 ನೇ ಶತಮಾನದಲ್ಲಿ ರಾಜನಾಗಿದ್ದ. ಲಿಖಿತವಾಗಿ ಕುರಂಗರಾಜನ ಬಗ್ಗೆ ಮಾಹಿತಿ ಸಿಗದೇ ಇದ್ದರೂ ಮೌಖಿಕವಾಗಿ ಈತ ರಾಜನೆಂದೆ ಜನಜನಿತನಾಗಿದ್ದಾನೆ. ಸಿದ್ದರಬೆಟ್ಟದಲ್ಲಿ ಇರುವ ಗಲ್ಲೆಬಾನಿ, ಕುಲುಮೆಬಾರೆ, ವಾಲಗರ ಬಂಡೆ ಮುಂತಾದವು ದಲಿತ ವ್ಯಕ್ತಿ ರಾಜನಾಗಿದ್ದ ಎಂದು ಹೇಳುತ್ತದೆ. ಕುರಂಗರಾಜನ ಬಗ್ಗೆ ಈ ಹಿಂದೆ ತುಮಕೂರಿನ ಡಾ. ಓ. ನಾಗರಾಜ್ ಪುಸ್ತಕ ಬರೆದಿದ್ದರು. ನಾನು ಕೂಡ ಕನ್ನಡಪ್ರಭ ದಲ್ಲಿ‌ ಲೇಖನ ಬರೆದಿದ್ದೆ. ಈಗ ಗೆಳೆಯ ಹಾಗೂ ಸಂಸ್ಕೃತಿ ಚಿಂತಕ ರವಿಕುಮಾರ ನೀಹ ಅರಸು ಕುರನ್ಗರಾಯ ಎಂಬ ಪುಸ್ತಕವನ್ನು ತಳಸ್ಪರ್ಶಿಯಾಗಿ ಬರೆದಿದ್ದಾರೆ.

-ಉಗಮ ಶ್ರೀನಿವಾಸ

Reviews

There are no reviews yet.

Be the first to review “ಅರಸು ಕುರನ್ಗರಾಯ”

Your email address will not be published.