Description
ಸುಬ್ರಾಯ ಚೊಕ್ಕಾಡಿಯವರು ಕವಿಯಾಗಿಯೇ ಹೆಚ್ಚು ಪರಿಚಿತರಾಗಿದ್ದರೂ, ಅವರೊಬ್ಬ ಸಾಹಿತ್ಯ ವಿಮರ್ಶಕರೂ ಹೌದು. ಕನ್ನಡ ಸಾಹಿತ್ಯ ಪರಂಪರೆಯ ಯಾನದೊಂದಿಗೆ ಒಂದಾಗಿ ತಮ್ಮನ್ನು ತಾವು ಕಂಡುಕೊಳ್ಳುವ ಪ್ರಕ್ರಿಯೆಯ ಭಾಗವಾಗಿಯೇ ಅವರ ಸಾಹಿತ್ಯ ವಿಮರ್ಶೆಗಳೂ ಇವೆ. ಅಂದರೆ ಸೃಜನಶೀಲ ಸಾಹಿತಿಯಾಗಿ ಇನ್ನೊಬ್ಬರ ಸಾಹಿತ್ಯವನ್ನು ಪ್ರವೇಶಿಸುವ ಸುಬ್ರಾಯ ಚೊಕ್ಕಾಡಿಯವರು ವಿಮರ್ಶಕರಾಗಿ ಆ ಸಾಹಿತ್ಯವನ್ನು ಕಂಡುಕೊಳ್ಳುತ್ತಾ, ತಾನು ಕಂಡದ್ದನ್ನು ಸಹೃದಯರಿಗೆ ತಿಳಿಸುವ ವಿಧಾನದಲ್ಲಿ ಅವರ ಸಾಹಿತ್ಯ ವಿಮರ್ಶೆಗಳಿವೆ.
ಅಧ್ಯಾಪಕರೂ ಆಗಿದ್ದ ಸುಬ್ರಾಯ ಚೊಕ್ಕಾಡಿಯವರ ಸಾಹಿತ್ಯ ವಿಮರ್ಶೆಗಳು, ಸಾಹಿತ್ಯವನ್ನು ಪ್ರವೇಶಿಸಲು ಬಯಸುವವರಿಗೆ ಪ್ರಾರ್ಥಮಿಕ ಪಾಠಗಳಾಗಿಯೂ, ಸಾಹಿತ್ಯದಲ್ಲಿ ಪರಿಶ್ರಮವಿರುವವರಿಗೆ ಇದನ್ನು ಹೀಗೂ ನೋಡಬಹುದಲ್ಲವೆ? ಎಂಬ ಪ್ರಶ್ನೆಯನ್ನು ಮುಂದಿಟ್ಟು ಉತ್ತರಕ್ಕಾಗಿ ಪ್ರೇರೇಪಿಸುವ ಆಲೋಚನೆಯಾಗಿಯೂ ಕಾಣಿಸುತ್ತವೆ.
ಅರವಿಂದ ಚೊಕ್ಕಾಡಿ
ಸಂಪಾದಕರು.
Reviews
There are no reviews yet.