Description
ಅಲೆನ್ಬಿ ಬ್ರಿಡ್ಜ್ , ರಾಮಲ್ಲಾಹ್ ನಿಂದ ಜೆರುಸಲೇಮ್ ಮತ್ತು ಗಾಜಾ ದ ವರಗೆ ಲೇಖಕ ಮಾರ್ಸೆಲೋ ಡಿ ಸಿಲಿಯೋ ಪ್ಯಾಲೆಸ್ಟೀನಿನಾದ್ಯಂತ ಬರಹಗಾರರು, ಕವಿಗಳು, ಗ್ರಂಥಪಾಲಕರು, ಪುಸ್ತಕ ಮಾರಾಟಗಾರರು ಮತ್ತು ಓದುಗರನ್ನು ಭೇಟಿಯಿತ್ತು ಪ್ರತಿ ಮೂಲೆಯಿಂದಲೂ ಅಸಾಧಾರಣ ಕಥೆಗಳನ್ನು ಕಂಡುಕೊಂಡರು ಅದರ ನಿರೂಪಣೆಯೇ ಈ ಪುಸ್ತಕ .
ಪ್ಯಾಲೆಸ್ತೀನ್ ಎನ್ನುವುದು ಬರಿಯ ಶಬ್ದವೇ, ಒಂದು ಭೌಗೋಳಿಕ ಸ್ಥಳವೇ ಅಥವಾ ತಲೆಮಾರುಗಳು ತಮ್ಮ ನೆನಪಿನಲ್ಲಿ ಹುಗಿದಿಟ್ಟುಕೊಂಡ ಕಹಿ ನೆನಪಿನ ಸಂಚಯವೇ?
ಈ ನೆನಪಿನ ಗಂಟಿನಲಿ ನೆಲವಿಲ್ಲದವರ ಬದುಕಿನ ಬವಣೆಗಳಿವೆ, ಪ್ರೇಮ-ಗೆಳೆತನ, ಕುಡಿದು ಖಾಲಿಯಾದ ಚಹಾ-ಕಾಫಿಗಳ ಪರಿಮಳ, ಕ್ರಾಂತಿಯ ಕಿಚ್ಚುಗಳು ಅಡಗಿವೆ. ಹಾರಿ ಹೋದ ಹೂಗಳ ಸುಗಂಧವಿದೆ. ಅಂತೆಯೇ, ಪಥಭ್ರಾಂತರಾಗಿ ಮರೆಯಾದ, ಹುತಾತ್ಮರಾದ ಪ್ರೀತಿಪಾತ್ರರ ಮುಖಗಳಿವೆ. ಘಸ್ಸಾನ್ ಕನಫಾನಿಯಂಥ ಲೇಖಕರಿದ್ದಾರೆ. ಮಹಮೂದ್ ದರ್ವಿಶ್‍ರಂಥ ಕವಿಗಳು ಕೆತ್ತಿದ ಶಾಸನದಂತಹ ಕವಿತೆಗಳಿವೆ. ಈ ಕವಿತೆಗಳು ಕೆಚ್ಚೆದೆಯ ಹೋರಾಟಗಾರರಿಗೆ ಬೆಳಕು-ಭರವಸೆಯನ್ನು, ಮುಂದಣ ಕವಿಗಳಿಗೆ ಕಾವ್ಯದುಸಿರನ್ನು ತುಂಬುತ್ತವೆ.
ಈ ಪುಸ್ತಕವು ಗತ-ವರ್ತಮಾನಗಳನ್ನು ಮುಖಾಮುಖಿಯಾಗಿಸುತ್ತ ಭವಿಷ್ಯವನ್ನು ಕನಸುತ್ತದೆ. ಕನ್ನಡದ ಓದುಗರಿಗೆ ಪ್ಯಾಲೆಸ್ತೀನಿನ ಕಾವ್ಯ, ಕಾವು, ಕನಸುಗಳನ್ನು ಪರಿಚಯಿಸುತ್ತದೆ
Reviews
There are no reviews yet.