Description
ನಡೆ ನುಡಿ ಒಂದಾದ ಭಕ್ತರಿರುವ ಊರಾವುದು ಎಂದು ಹುಡುಕುತ್ತಾ ಬಂದವರ ಕತೆಗಳಿವು.ಇತಿಹಾಸವನ್ನು ತಿಳಿಸುವ ಅತ್ಯಂತ ಹಳೆಯ ರೂಪಗಳಲ್ಲಿ ಕಥೆಯೂ ಒಂದು.ಶರಣರ ಕತೆ ಹೇಳುವುದೆಂದರೆ ಒಂಬತ್ತು ಶತಮಾನಗಳಾಚೆ ಸಾಗಬೇಕು. ಕಲ್ಯಾಣವ ಹೊಕ್ಕಬೇಕು.ಅಲ್ಲಿ ಆಕಾಶಕ್ಕೆ ಪ್ರತಿಯೆಂಬಂತೆ ನಿರ್ಭಿಡೆಯಾಗಿ ಬದುಕುತ್ತಿರುವ ಸಜ್ಜನರ ಮನೆಯ ಹೊಸ್ತಿಲಲ್ಲಿ ನಿಲ್ಲಬೇಕು.ಆಸೆ-ಆಮಿಶಗಳನ್ನಳಿದ ಅವರ ಮನೆ ಮನ ಪ್ರವೇಶಿಸಬೇಕು ಅದು ಒಳಗೂ ಹೊರಗೂ ಶುದ್ಧವಾದವರ ಪ್ರಪಂಚ.ಅಲ್ಲಿ ರಮ್ಯತೆಗೆ ಜಾಗವಿಲ್ಲ ಅದು ಸಹಜ ಸುಂದರ ನೈಜ ಅನಾವರಣ.”ಲೇಖಕರು ಬರೆಯಲಿಕ್ಕೆ ಕತೆಗಳನ್ನು ಆರಿಸಿಕೊಳ್ಳುವುದಿಲ್ಲ.ಕತೆಗಳೇ ಕತೆಗಾರನನ್ನು ಆಯ್ಕೆ ಮಾಡಿಕೊಳ್ಳುತ್ತದೆ.”ಎನ್ನುವ ಮಾತಿದೆ.ಇಲ್ಲಿನ ಕತೆಗಳು ಮಹಾದೇವ ಹಡಪದರನ್ನು ಅಯ್ಕೆಮಾಡಿಕೊಂಡಿವೆ.ತಮ್ಮ ವಿಶಿಷ್ಟ ಭಾವಾಭಿನಯದಿಂದ ಗಮನ ಸಳೆದ ರಂಗಭೂಮಿ ಕಲಾವಿದರಾದ ಹಡಪದ ಅವರೊಳಗೆ ಒಬ್ಬ ಕತೆಗಾರನಿದ್ದಾನೆ. ಇಲ್ಲಿ ಅರಗಿಣಿಗಳು ಮಾತಾಡುತ್ತವೆ.ಕನಸುಗಳು ಮನದ ಕದ ತೆರೆದು ನಡೆಯಬೇಕಾದ ದಾರಿ ತೋರುತ್ತವೆ.ಮನದ ಹಕ್ಕಿ ಒಳಮಾತಿಗೆ ಕಿವಿಕೊಡುವುದನ್ನು ಕಲಿಸುತ್ತದೆ.
Reviews
There are no reviews yet.