Description
ಕಥಾಸಂಕಲನ ಮುದ್ರಣಗೊಂಡುತ್ತಿದೆ ಎಂದು ತಿಳಿಸಲು ಶ್ರೀನಿವಾಸ್ ಪ್ರಸಾದ್ ಅವರಿಗೆ ಕರೆ ಮಾಡಿದಾಗ ಮಾತಿನ ಮಧ್ಯದಲ್ಲಿ ಅವರು ಹೇಳಿದ ಘಟನೆಯು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿದೆ ನನ್ನ ಮೊದಲ ಕಥೆ ರೆಕಾರ್ಡ್ ಆದ ದಿನ, ನನ್ನ ತಂದೆ ಜಿ.ಹೊ.ನಾರಾಯಣಸ್ವಾಮಿ ಅವರು ನನ್ನ ರೆಕಾರ್ಡಿಂಗ್ ಸ್ಟುಡಿಯೋ ಬಳಗೆ ಹೋಗಿ, ಕಥೆಯನ್ನು ಪೂರ್ಣ ಓದುವವರೆಗೂ ಸ್ಟುಡಿಯೋದ ಹೊರ ಬಾಗಿಲಲ್ಲಿ ನಿಂತು ಕೇಳಿಕೊಂಡರಂತೆ. ಇಷ್ಟು ವರ್ಷಗಳ ದೀರ್ಘ ಅವಧಿಯಲ್ಲಿ ನನ್ನ ತಂದೆಯವರ ಆಗಲಿ ಶ್ರೀನಿವಾಸ್ ಪ್ರಸಾದ್ ಅವರೇ ಆಗಲಿ ಈ ವಿಷಯವನ್ನು ನನಗೆ ಹೇಳಲಿಲ್ಲ. ಈಗ ನನಗೆ ನನ್ನ ತಂದೆ ತೀರಿ ಹೋಗಿರುವ ಹೊತ್ತಲ್ಲಿ ಅವರ ಅಂದಿನ ಈ ವರ್ತನೆಯು ನನ್ನೊಳಗೆ ಏನೇನೋ ಪ್ರಶ್ನೆ ಭಾವನೆಗಳು ಮಾಡುತ್ತಿದೆ ಪ್ರೀತಿಯ ನಾನ ಬಗೆಗಳನ್ನು ಕಾಪಿಟ್ಟುಕೊಳ್ಳುವ ಮನುಷ್ಯ ಮನಸ್ಸಿನ ಸ್ವರೂಪವೇ ಎಷ್ಟು ವಿಚಿತ್ರ ಅನಿಸುವಂತೆ ಮಾಡಿದೆ ಇದು.
-ಜ.ನಾ. ತೇಜಶ್ರೀ
Reviews
There are no reviews yet.