Description
ಅಧ್ಯಾತ್ಮದ ನೆಲೆಯಲ್ಲಿ ಇಹದ ಗೊಡವೆಗಳನ್ನು ಪರಿಶೀಲಿಸುವ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಭಕ್ತಿಯ ಕುರಿತು ಹರಿಸಿದ ಚಿಂತನೆಗಳ ಮೊತ್ತ ಈ ಕೃತಿ. ಯಾವ ಸಂಬಂಧವನ್ನೂ ಕೆಡಿಸದೇ ಉಳಿಸುತ್ತಾ ಬೆಳೆಸುತ್ತಾ ಹೋಗುವುದೇ ಭಕ್ತಿ ಎನ್ನುವ ಅವರ ಮಾತು ಬಹಳ ವಿಶಿಷ್ಟವಾದುದು. ಅಮೆರಿಕ ಪ್ರವಾಸದ ವಿವರಗಳು, ರಾಮಾನುಜ, ಕನಕದಾಸರ ಬಗೆಗಿನ ಭಿನ್ನ ವಿವರಗಳಿಂದ ಕಂಗೊಳಿಸುತ್ತದೆ ಗ್ರಂಥ.
….ಬದುಕಿನಲ್ಲಿ ಅಗಲುವಿಕೆ ಅನಿವಾರ್ಯವೆನ್ನಬಹುದು. ಅಥವಾ ಬದುಕೆಂದರೆ ಆಗಲಿ ಎನ್ನಬಹುದು. ಹೊಕ್ಕುಳ ಬಳ್ಳಿ ತುಂಡರಿಸಿ ಮಗು ಬೇರ್ಪಡಲೇಬೇಕು. ಬೇರ್ಪಟ್ಟು ತನ್ನ ಪ್ರತ್ಯೇಕ ಅಸ್ತಿತ್ವವನ್ನೂ, ಅದರ ಯಾತನೆಯನ್ನೂ ಅನುಭವಿಸಲೇಬೇಕು. ಯಾತನೆಯ ಕಾರಣದಿಂದಲೇ ಈ ಅನುಭವವು ಸಂದೇಹಾಸ್ಪದವಾಗಿಯೂ ಪ್ರಶ್ನಾರ್ಹವಾಗಿಯೂ, ಜಿಜ್ಞಾಸೆಗೆ ಯೋಗ್ಯವಾಗಿಯೂ ಕಾಣಿಸುವುದು, ಅಗಲಿಕೆಯ ನೋವು ತೀವ್ರವಾದಂತೆ ತಾನು ಯಾವುದರಿಂದ ಆಗಲಿ ಬಂದೆನೋ ಅದರ ನೆನಪೂ ಅಷ್ಟೇ ತೀವ್ರವಾಗಿ ಮೇಲೇಳುವುದು, ಇದೊಂದು ಸೋಜಿಗ! ಅಗಲಿಕೆಯ ನೋವು ಆಗಲಿ ಬಂದುದರ ನೆನಪನ್ನು ಉದ್ದುದ್ದಗೊಳಿಸುವ ಸೋಜಿಗ! ನಮ್ಮೊಳಗೇ ನಡೆಯುವ ಈ ಸೋಜಿಗವನ್ನು ‘ಭಕ್ತಿ’ ಎನ್ನುವೆವು’ ಎನ್ನುತ್ತಾರೆ ಲಕ್ಷ್ಮೀಶ ತೋಳ್ವಾಡಿ
Reviews
There are no reviews yet.