ಭೂಮಿಯ ಹಕ್ಕುದಾರರು

150.00

Add to Wishlist
Add to Wishlist
Email
SKU: B-SKN-BHO Categories: ,

Description

ಇದರೊಳಗೆ ಒಂದು ಸಣ್ಣ ಕಥೆಯಿದೆ. ಓದಿ ನೋಡಿ ತಿದ್ದಿ ಕೊಡುತ್ತೀರಾ?’ ಅಂತ ಅವಳು ಕೇಳಿದಳು. ನಾನು ಕವರ್‌ ತೆರೆದು ನೋಡಿದೆ. ‘ಬೇರೇನೂ ಇಲ್ಲ. ಹತ್ತು ರೂಪಾಯಿಯ ಐದು ನೋಟುಗಳು ಮಾತ್ರ!’

ಹೀಗೆ. ಎರಡು ಸಾಲುಗಳಲ್ಲಿ, ನೂರು ಕತೆಗಳನ್ನು ಹೇಳಬಲ್ಲ ‘ವೈಕಂ ಮಹಮ್ಮದ್‌ ಬಷೀರ್‌’ ಕನ್ನಡದ ಓದುಗರಿಗೆ ತೀರಾ ಪರಿಚಿತರು. ಪೇಪರ್‌ ಹಂಚುವವನಾಗಿ, ಪ್ರೆಸ್ಸಿನಲ್ಲಿ ಕರಡು ತಿದ್ದುವವನಾಗಿ, ಪತ್ರಿಕೆಯೊಂದರ ದನಿಯಾಗಿ, ರೇಲ್ವೆ ಸ್ಟೇಷನ್‌ ಮಾಸ್ತರನಾಗಿ, ಸನ್ಯಾಸಿಯಾಗಿ, ಭಿಕ್ಷುಕನಾಗಿ, ಕಣಿ ಹೇಳುವವನಾಗಿ, ಹಡಗಿನಲ್ಲಿ ಕೂಲಿಯಾಗಿ, ಹೋಟೆಲುಗಳಲ್ಲಿ ಗ್ಲಾಸು ತೊಳೆಯುವವನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ಅವುಗಳೆಲ್ಲದರ ಜೊತೆಗೆ ‘ನನ್ನಜ್ಜನಿಗೊಂದಾನೆಯಿತ್ತು’. ‘ಪಾತುಮ್ಮನ ಆಡು’ ಮೊದಲಾದ ಅದ್ಭುತ ಕೃತಿಗಳ ಮೂಲಕ ಮಲಯಾಳ ಸಾಹಿತ್ಯಲೋಕವನ್ನು ಸುಲ್ತಾನನಂತೆ ಆಳಿದವರು ಅವರು.

ಮಲಯಾಳಂ ಕತೆಗಳ ಮಾಂತ್ರಿಕರೆನ್ನಿಸಿದ ಪೊಟ್ಟೆಕ್ಕಾಟ್ಟ್, ಝುಹರಾ, ಮಾಧವಿಕುಟ್ಟಿ, ಸಂತೋಷ್‌ ಏಚ್ಛಿಕ್ಕಾನಂ ಮೊದಲಾದವರ ಕತೆಗಳ ಜೊತೆಯಲ್ಲಿ, ಸಚ್ಚಿದಾನಂದನ್‌, ಉಮೇಶ್‌ ಬಾಬು, ಕಲ್ಪಟ್ಟ ನಾರಾಯಣನ್‌, ಅಖಿಲ್‌ ಎಸ್‌ ಮುರಳೀಧರನ್‌, ಮುರುಗನ್‌ ಕಾಟ್ಟಾಕ್ಕಡ, ಪವಿತ್ರನ್‌, ತೀಕ್ಕುನಿ, ಬಾಲಚಂದ್ರನ್‌ ಚುಳ್ಳಿಕಾಡ್‌ ಮೊದಲಾದವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಲ್ಲದೆ, ಕುವೆಂಪು ಭಾಷಾ ಭಾರತಿಯ ಸೂಫಿ ಕಾವ್ಯ ಸಂಪುಟಕ್ಕಾಗಿ ಪರ್ಷಿಯಾದ ಸೂಫಿ ಕವಿತೆಗಳನ್ನೂ ಸಿದ್ಧಪಡಿಸಿ ಕೊಟ್ಟಿರುವ ‘ಸುನೈಫ್‌’ ಅವರೂ ಕನ್ನಡಕ್ಕೆ ಸುಪರಿಚಿತರು. ಅಂದು ಗಾಂಧಿಯನ್ನು ಮುಟ್ಟಿದ ಕೈಬೆರಳುಗಳಿಂದ ‘ವೈಕಂ’ ಬರೆದಿರಿಸಿದ್ದ ಚಿನ್ನದಂತಹ 17 ಮಲಯಾಳಂ ಕತೆಗಳಿಗೆ ಇಂದು ಬಂಗಾರದ ಒಪ್ಪ ಕೊಟ್ಟು ಕನ್ನಡದ ಓದುಗರ ಮುಂದಿಟ್ಟ ಈ ‘ಗೋಲ್ಡನ್‌ ಭಾಯಿ’ಗೆ ಅಭಿನಂದನೆಗಳು.

ಬೊಳುವಾರು ಮಹಮದ್‌ ಕುಂಞ

Reviews

There are no reviews yet.

Be the first to review “ಭೂಮಿಯ ಹಕ್ಕುದಾರರು”

Your email address will not be published.