Description
ಉಡುಪಿ ಜಿಲ್ಲೆಯ ಮುಂಡ್ಕೊರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿ ಈಗ ದ.ಕ.ದ ಕಿನ್ನಿಗೋಳಿಯಲ್ಲಿ ನೆಲೆಸಿರುವ ಸಾಹಿತಿ ಉದಯಕುಮಾರ್ ಹಬ್ಬು ಅವರ ಬಾಲ್ಯಕಾಲ ಕಥನ “ಕೊಪ್ಪ ನನ್ನನ್ನು ಕ್ಷಮಿಸು” ಒಂದು ಅಪರೂಪದ ಕೃತಿ. ಅವರು ಏಳನೆಯ ತರಗತಿಯವರೆಗೆ ಬಾಲ್ಯವನ್ನು ಕಳೆದಿದ್ದು ಉತ್ತರಕನ್ನಡ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯಲ್ಲಿ. ಅವರ ಅಪ್ಪ ನಿವೃತ್ತ ಶಾನುಭೋಗ ರಾಗಿದ್ದರು ಗಾಂಧಿವಾದಿ ಯಾಗಿದ್ದು ಅಡ್ಡದಾರಿಯಲ್ಲಿ ಆಸ್ತಿಪಾಸ್ತಿ ಮಾಡದೆ ಬಾಡಿಗೆ ಮನೆಯಲ್ಲಿ ಬದುಕು ಕಳೆದವರು. ಈ ಆತ್ಮಕಥನವು ಪ್ರಚ್ಛನ್ನವಾಗಿ ಅವರ ಬದುಕಿನ ವ್ಯಾಖ್ಯಾನ ವಾಗಬಾರದು ಎಂಬ ಗೌರವದಿಂದ ಹಬ್ಬು ಅವರು ಈ ಶೀರ್ಷಿಕೆಯನ್ನಿರಿಸಿದ್ದಾರೆ.3
Reviews
There are no reviews yet.