ಬುದ್ಧ ಬೆಳದಿಂಗಳು

65.00

Add to Wishlist
Add to Wishlist
Email

Description

ನಮ್ಮ ನಾಡಿನ ಆಳವಾದ ಮಾತಿನ ಕವಿ, ಮೂಡ್ನಾಕೂಡು ಚಿನ್ನಸ್ವಾಮಿಯವರು. ಇವರ ಕಾವ್ಯ ಕ್ರೋಧದ ನೆಲೆಯಲ್ಲಿ ಮಾತ್ರ ನಿಲ್ಲದೆ ನಮ್ಮ ಅರಿವನ್ನು ಹಿಗ್ಗಿಸುವ ದುಃಖದ ಸಂವೇದನೆಯಾಗುತ್ತದೆ. ಇವರಿಗೆ ಸಿಟ್ಟು ಸಾಧ್ಯ; ಬೆರಗು ಸಾಧ್ಯ. ಇವರ ಮಾತು ನೇರ; ಆದರೆ ಈ ನೇರವಾದ ಮಾತಿನಲ್ಲಿ ರೂಪಕಗಳು ಅಡಗಿರುತ್ತವೆ. ಮೊದಲ ಓದಿಗೇ ಅರ್ಥವಾಗುವ ಇವರ ಸರಳತೆ ಮತ್ತೊಂದು ಓದಿನಲ್ಲಿ ಗಾಢವಾದ ಅನುಭವವನ್ನು ಕೊಡುತ್ತದೆ. ಇವರು ಕನ್ನಡ ಭಾಷೆಯನ್ನು ಅದರ ಎಲ್ಲಾ ಸಂಪತ್ತಿನಲ್ಲೂ ಬಳಸಬಲ್ಲರು. ಬೌದ್ಧ ಧರ್ಮ ತನ್ನೆಲ್ಲ ಅರ್ಥಗಳನ್ನು ಸದ್ಯದ ಸಂಕಷ್ಟದಲ್ಲಿ ಬಿಚ್ಚಿಡುವಂತೆ ಬರೆಯುವ ಚಿನ್ನಸ್ವಾಮಿ ನಮ್ಮ ಮಖ್ಯ ಕವಿಗಳಲ್ಲಿ ಒಬ್ಬರು.

ಕಳಪೆ ಎನ್ನಿಸುವ ಒಂದು ಪದ್ಯವೂ ಇಲ್ಲದ ಈ ಸಂಕಲನ ದಲಿತಸ್ಥಿತಿಗೆ ಮಿಡಿಯುತ್ತಲೇ ಮಾನವ ಅಂತಃಕರಣವನ್ನು ಹಿಗ್ಗಿಸಿ ಅಸ್ಪೃಶ್ಯತೆಯ ಚಾರಿತ್ರಿಕ ಅವಮಾನದಿಂದ ನಮ್ಮನ್ನು ಬಿಡುಗಡೆ ಮಾಡಬಲ್ಲ ಈ ಕಾಲದ ಮುಖ್ಯ ಕೃತಿಗಳಲ್ಲಿ ಒಂದೆಂದು ನಾನು ತಿಳಿದಿದ್ದೇನೆ.

-ಯು. ಆರ್. ಅನಂತಮೂರ್ತಿ

Reviews

There are no reviews yet.

Be the first to review “ಬುದ್ಧ ಬೆಳದಿಂಗಳು”

Your email address will not be published.