ಬುನಿನ್ ಕತೆಗಳು

180.00

Add to Wishlist
Add to Wishlist
Email

Description

ನೊಬೆಲ್ ಪ್ರಶಸ್ತಿ ಪಡೆದ ರಷ್ಯಾದ ಮೊದಲ ಲೇಖಕ

ಅನುವಾದ ಎಸ್. ಗಂಗಾಧರಯ್ಯ

ಪ್ರಕಾಶನ: ಬಿಸಲ ಕೋಲು ಪ್ರಕಾಶನ

***************

‘ಇವಾನ್ ಬುನಿನ್: ಭೌತ ವಸ್ತುಗಳ ಭಾವಗೀತಕಾರ’

1891ರ ಜನವರಿ ತಿಂಗಳಿನ ಅದೊಂದು ದಿನ ರಷ್ಯಾದ ಹೆಸರಾಂತ ಲೇಖಕ ಆಂಟನ್ ಚೆಕಾಫ್‌ಗೆ ತನ್ನದೇ ಪ್ರಾಂತ್ಯದ ಯುವ ಪತ್ರಿಕೋದ್ಯಮಿಯೊಬ್ಬನಿಂದ ಪತ್ರವೊಂದು ಬರುತ್ತದೆ. ಅದರಲ್ಲಿ, ‘ನೀವು ನನ್ನ ಇಷ್ಟದ ಲೇಖಕರು. ನೇರ ನಡೆನುಡಿಯವರೂ ತುಂಬಾ ಒಳ್ಳೆಯವರೂ ಅಂತ ನನ್ನ ಕೆಲ ಸ್ನೇಹಿತರು ನಿಮ್ಮ ಬಗ್ಗೆ ಹೇಳಿದ್ದಾರೆ. ಹಾಗಾಗಿ ನನ್ನ ಆಯ್ಕೆ ನೀವಾಗಿದ್ದೀರಿ. ನಿಮಗೆ ಬಿಡುವಿದ್ದಲ್ಲಿ, ನನ್ನಂಥವನ ಕೆಲವು ಬರವಣಿಗೆಗಳನ್ನು ಕಣ್ಣಾಡಿಸಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವ ಮನಸಿದ್ದಲ್ಲಿ ದಯಮಾಡಿ ತಿಳಿಸಿ, ನಾನು ನನ್ನ ಕೆಲವು ಕಥೆಗಳನ್ನು ನಿಮಗೆ ಕಳಿಸುತ್ತೇನೆ. ಹಾಗೆಯೇ ನಿಮ್ಮಿಂದ ಅವುಗಳ ಬಗ್ಗೆ ಒಂದೆರಡು ವಿಮರ್ಶಾತ್ಮಕ ಮಾತುಗಳನ್ನು ಕೇಳಲು ಇಚ್ಛಿಸುತ್ತೇನೆ. ಅಂತೆಯೇ ಇಂಥದೊಂದು ಒತ್ತಾಯಪೂರ್ವಕ ಅಂಗಲಾಚಿಕೆಗಾಗಿ ಕ್ಷಮೆ ಯಾಚಿಸುತ್ತೇನೆ,’ ಎಂಬುದಾಗಿ ಬರೆಯಲ್ಪಟ್ಟಿರುತ್ತದೆ. ಆ ನಂತರ ಆ ಪತ್ರವನ್ನು ಬರೆದವನು ಹಾಗೂ ಬರೆಸಿಕೊಂಡವರು ಇಬ್ಬರೂ ಜೀವಮಾನವಿಡೀ ಒಳ್ಳೆಯ ಗೆಳೆಯರಾಗಿಬಿಡುತ್ತಾರೆ. ಅದೇರೀತಿ, ಚೆಕಾಫ್‌ನ ಪ್ರಭಾವದಿಂದಾಗಿ ಅವನು ಮುಂದೆ ಒಳ್ಳೆಯ ಲೇಖಕನಾಗಿ, ರಷ್ಯಾಕ್ಕೆ ಸಾಹಿತ್ಯಕ್ಕಾಗಿ ಮೊಟ್ಟ ಮೊದಲ ನೊಬೆಲ್ ಬಹುಮಾನವನ್ನೂ ತಂದುಕೊಡುತ್ತಾನೆ. ಆ ಲೇಖಕ
ಬೇರಾರೂ ಅಲ್ಲ, ನೊಬೆಲ್ ಪ್ರಶಸ್ತಿ ಪಡೆದ ರಷ್ಯಾದ ಮೊದಲ ಲೇಖಕ

ಬೇರಾರೂ ಅಲ್ಲ, ಅವನೇ ಇವಾನ್ ಅಲೆಕ್ಸಿವೀಚ್ ಬುನಿನ್.

(-ಒಳಪುಟಗಳಿಂದ)

Reviews

There are no reviews yet.

Be the first to review “ಬುನಿನ್ ಕತೆಗಳು”

Your email address will not be published.