Description
ಡಾ. ಸಿ.ಜಿ. ಲಕ್ಷ್ಮೀಪತಿಯವರ ಕ್ಯಾಸ್ಟ್ ಕೆಮಿಸ್ಟ್ರಿ ಕೃತಿ
ಕರ್ನಾಟಕದ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನ ನಿರತವಲಯದೊಳಗೆ ಬರುತ್ತಿರುವ ಹೊಸ ತಲೆಮಾರಿನ ಮುನ್ನಡೆಗೊಂದು ನಿದರ್ಶನದಂತಿದೆ. ಈ ಬೆಳವಣಿಗೆ ಆಕಸ್ಮಿಕವಾದುದಲ್ಲ ಅಥವಾ ಸಮಾಜಶಾಸ್ತ್ರದ ಕ್ಷೇತ್ರಕ್ಕೆ ಮಾತ್ರ ಪರಿಮಿತಗೊಂಡಿದ್ದೂ ಅಲ್ಲ. ಬದಲಾಗುತ್ತಿರುವ ಕಾಲಮಾನ ತನ್ನ
ಸತ್ವವನ್ನು ಹಲವು ರೂಪದಲ್ಲಿ ವ್ಯಕ್ತಗೊಳಿಸುತ್ತದೆ. ಸಾಹಿತ್ಯ, ವಿಚಾರ, ಬದುಕಿನ ಕ್ರಮ ಹಾಗೂ ಚಿಂತನಾ ವಿಧಾನಗಳು ಈ ಹೊಸತನದ ಆಗಮನವನ್ನು ಹೆಚ್ಚು ನಿರ್ದಿಷ್ಟವಾಗಿ ಸೂಚಿಸಬಲ್ಲ ಕನ್ನಡಿಗಳಾಗಿರುತ್ತವಷ್ಟೆ.
ಅವರು ಸೂಚಿಸುವ ‘ವ್ಯಕ್ತಿತ್ವದಿಂದ ಹೊರಹೊಮ್ಮುವ
ಅಭಿವ್ಯಕ್ತಿಯೇ ಜಾತಿಯಾಗಿದೆ’ ಎಂಬ ವಿಶ್ಲೇಷಣೆ
ಲೇಖಕರಿಗಿರುವ ಹೊಸ ದೃಷ್ಟಿಕೋನವನ್ನು, ಅಧ್ಯಯನ
ಮಾಡುವಾಗ ಅಳವಡಿಸಿಕೊಳ್ಳುವ ಹೊಸ ಪರಿಕರಗಳನ್ನು ನಿದರ್ಶಿಸುತ್ತಿದೆ. ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಲಕ್ಷ್ಮೀಪತಿಯವರ ಸಾಮರ್ಥ್ಯದ ಸಾಧ್ಯತೆಗಳ ಜೊತೆ ಅವರು ಮುಂದೆ ನಡೆಸಬಹುದಾಗಿರುವ ಅಧ್ಯಯನಗಳ ಹಾದಿಯನ್ನೂ ಬಿಂಬಿಸುತ್ತಿದೆ.
– ಡಾ. ಬಂಜಗೆರೆ ಜಯಪ್ರಕಾಶ್
Reviews
There are no reviews yet.