Description
ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಅಂತಹ ಮಕ್ಕಳ ಕಥೆಗಳು ಹೇಗಿರಬೇಕೆಂದರೆ……
ಮಕ್ಕಳು ಓದುವ ಕಥೆಗಳಲ್ಲಿ ಜ್ಞಾನ, ವಿಜ್ಞಾನ, ವಿನೋದ, ಉತ್ಸಾಹ, ಉಲ್ಲಾಸ, ನೀತಿ ಇವುಗಳಿದ್ದರೆ ಅವು ಮಕ್ಕಳ ಮಾನಸಿಕ ಬೆಳವಣಿಗೆಗೆ ಬಹಳ ಸಹಾಯವಾಗುತ್ತವೆ. ಇಂತಹ ಕಥೆಗಳನ್ನು ಕಟ್ಟಿಕೊಡುವುದರಲ್ಲಿ ಮುಂದಿರುವುದು ಹೆಸರಾಂತ ಮಕ್ಕಳ ಪತ್ರಿಕೆ “ಚಂದಮಾಮ”.
ಚಂದಮಾಮ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಪ್ರಪಂಚದ ಪರಿಚಯವಾಗುತ್ತದೆ. ನಮ್ಮ ಸಂಪ್ರದಾಯದ ಹಿರಿಮೆ ತಿಳಿಯುತ್ತದೆ. ಅವರಲ್ಲಿ ನೀತಿ, ನಿಯಮಗಳನ್ನು ಒಳ್ಳೆಯ ಶಿಕ್ಷಣವನ್ನು ತರುತ್ತದೆ. ಅವರಲ್ಲಿ ಉತ್ಸಾಹ-ಉಲ್ಲಾಸ, ಆನಂದ ಮೂಡಿಸುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಚಂದಮಾಮ ಕಥೆಗಳೆಂದರೆ ಮಕ್ಕಳಿಗೆ ಬಹಳ ಇಷ್ಟ.
Reviews
There are no reviews yet.