Description
ಕನ್ನಡಕ್ಕೆ: ಚೆನ್ನಪ್ಪ ಕಟ್ಟಿ
ಪ್ರಕಾಶನ: ನೆಲೆ ಪ್ರಕಾಶನ
*****************
The Girls at War ಚಿನುವಾ ಅಚಿಬೆಯ ಏಕೈಕ ಕಥಾಸಂಕಲನ. ಈ ಸಂಕಲನದಲ್ಲಿ ಅಚಿಬೆ ಬಳಸಿರುವ ವ್ಯಕ್ತಿಭಾಷೆಯ ರೂಪುರೇಷೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಂವೇದನಾಶೀಲ ತರ್ಜುಮೆದಾರ ಚನ್ನಪ್ಪ ಕಟ್ಟಿ ಅವರು ಅಚಿಬೆಯ ವ್ಯಕ್ತಿಭಾಷೆಗೆ ಹತ್ತಿರವಾದ ನುಡಿಗಟ್ಟಿನಲ್ಲಿ ಈ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅವರು ಅನುವಾದಕ್ಕಾಗಿ ಎತ್ತಿಕೊಂಡಿರುವ ಈ ಕಥಾ ಸಂಕಲನದ ಪ್ರತಿಯೊಂದು ಕತೆಯೂ ವಿಶಿಷ್ಟ, ‘ಹುಚ್ಚ’, ‘ಅಕೆಕ’, ‘ಅಂಕಲ್ ಬೆನ್ನ ಆಯ್ಕೆ’, ‘ಯುದ್ಧಕಾಲದ ಹುಡುಗಿಯರು’ ಮುಂತಾದ ಕತೆಗಳು ಮಾಮೂಲಿನ ಘಟನೆಗಳ ನಿರೂಪಣೆಯಂತೆ ಹೊರಟು ಅವು ನಮಗರಿವಿರದಂತೆ ಹಠಾತ್ತನೆ ನಮ್ಮನ್ನು ನರಳಿಕೆಯ ನರಕಗಳ ಪಾತಾಳಕ್ಕೆ ದೂಡಿ ತಡವರಿಸುವಂತೆ ಮಾಡುತ್ತವೆ. ಅಚಿಬೆಯ ಕತೆಗಳು ಅನುಭವದ್ರವ್ಯದಲ್ಲಿ ದಸ್ತೆಯೇ, ನಿರ್ಮಿಸುವಂತಹ ಅಧೋಲೋಕಗಳಿಗೆ ನಮ್ಮನ್ನೊಯ್ದರೂ ಅದನ್ನು ಸಾಧಿಸುವ ಈ ಕತೆಗಳ ಭಾಷೆ ತೊಲ್ಪಾಯನ ಭಾಷೆಯಂತೆ ಅಚ್ಚುಕಟ್ಟುತನದಿಂದ ಕೂಡಿದ್ದು ಅನುಭವದ ಬರ್ಬರ ಬೆರಳುಗಳು ತಣ್ಣಗೆ ನಮ್ಮನ್ನು ಸೋಕುವಂತೆ ಮಾಡುತ್ತದೆ.
ಮೂಲಕ್ಕೂ ಅನುವಾದಕ್ಕೂ ನಡುವಣ ಗರಿಷ್ಟ ಸಾಮಿಪ್ಯ ಮತ್ತು ಅಂತರಗಳ ಕುರಿತು ಅನುವಾದ ಸಿದ್ಧಾಂತದಲ್ಲಿ ಗಾಢ ಚರ್ಚೆ ನಡೆದಿದೆ. ನನ್ನ ಪ್ರಕಾರ ಇದು ಸಿದ್ಧಾಂತವಲ್ಲ, ಸ್ವಂತ ಅನುಭವದ ಮಾತು. ಅನುವಾದದ ಯಶಸ್ಸಿರುವುದು ಮೂಲಕೃತಿಯ ನಾಡಿಮಿಡಿತವನ್ನು ಹಿಡಿದಿಡುವ ನುಡಿಗಟ್ಟನ್ನು ಇನ್ನೊಂದು ಭಾಷೆಯಲ್ಲಿ ಕಂಡುಕೊಂಡಾಗ, ಅನುವಾದ ತತ್ತ್ವದ ಈ ಕಾಣೆಯಿಂದ ರೂಪಿತವಾಗಿರುವ ಚನ್ನಪ್ಪ ಕಟ್ಟಿ ಅವರ ‘ಯುದ್ಧ ಕಾಲದ ಹುಡುಗಿಯರು’ ಅನುವಾದ ಕೃತಿ ಅಭಿನಂದನೀಯವೂ ಅನುಕರಣೀಯವೂ ಆಗಿದೆ.
-ಪ್ರೊ. ಎಚ್.ಎಸ್. ಶಿವಪ್ರಕಾಶ್
(ಮುನ್ನುಡಿಯಿಂದ)
Reviews
There are no reviews yet.