Sale!

ಚಿಟ್ಟೆ ರೆಕ್ಕೆಯ ರೇಟು

100.00 90.00

Add to Wishlist
Add to Wishlist
Email

Description

ಚಿಟ್ಟೆ ರೆಕ್ಕೆಯ ರೇಟು- ಕವಿ ರಾಜಶೇಖರ ಬಂಡೆ ಅವರ ಮೊದಲ ಕವನ ಸಂಕಲನ. ಸದಾ ಅಮಲಿನಲ್ಲಿರು ಎನ್ನುವ ಫ್ರೆಂಚ್ ನವ್ಯ ಕವಿ ಬೋದಿಲೇರ್ ಅವರ ಪ್ರಭಾವಕ್ಕೆ ಒಳಗಾಗಿ, ಕಾವ್ಯದ ಅಮಲತ್ತಿಸಿಕೊಂಡ ವಿಶಿಷ್ಟ ಕವಿ ಬಂಡೆ. ತೀವ್ರವಾಗಿ ಬದುಕುತ್ತಾ, ಬದುಕಿದಷ್ಟೇ ತೀವ್ರವಾಗಿ ಬರೆಯುತ್ತಾ, ಮಹಾನಗರದ ಬೆರಗಿಗೆ ದಂಗಾಗುತ್ತಲೇ, ತನ್ನ ಒದ್ದಾಟಗಳನ್ನೂ ಕವಿತೆಯಾಗಿಸಿಬಿಡುವ ರಾಜಶೇಖರ ಅವರ ಕಾವ್ಯ ಶೈಲಿಗೆ ಮಾರುಹೋಗದವರಿಲ್ಲ. ಓದುಗರ ಒತ್ತಡದಲ್ಲಿ ರೂಪುಗೊಂಡ ರಾಜಶೇಖರ ಬಂಡೆಯವರ ಮೊದಲ ಕವನ ಸಂಕಲನವಿದು. ಈ ಪುಸ್ತಕಕ್ಕೆ ಹಿರಿಯ ಲೇಖಕಿ ಪ್ರತಿಭಾ ನಂದಕುಮಾರ್ ಮುನ್ನುಡಿ ಬರೆದಿದ್ದಾರೆ.

‘ಕೂಡಿಟ್ಟ ಕವಿತೆಗಳಲ್ಲಿ ಜೀವನ್ಮರಣದ

ಕುರಿತಾಗಿ ಏನೂ ಇಲ್ಲ.

ತೇಯ್ದ ಪದಗಳು ಪುಸ್ತಕದ ಪೇಜು ಪೇಜಿಗೂ

ಸಾಲಲ್ಲಿ ನಿಂತು ಚಿಕ್ಕ ಮಕ್ಕಳ ಹಾಗೆ

ಮೂಲಕ್ಕೆ ಮೂತ್ರಮಾಡುತ್ತಿವೆ…

ಕವಿತೆಗೆ ಕೈಬೆರಳಿನ ಸಲಿಗೆ ಒಳ್ಳೆಯದಲ್ಲ..’

ಎಂದು ಬರೆದ ಕವಿಯ ಕಾವ್ಯ ಸೆಲೆಯ ಬಗ್ಗೆ ಏನು ಬರೆಯುವುದು ಎಂದು ಪ್ರಶ್ನಿಸಿಕೊಳ್ಳುತ್ತಾರೆ ಲೇಖಕಿ ಪ್ರತಿಭಾ ನಂದಕುಮಾರ್. ಬಂಡೆ ಬರೆಯುವುದೆಲ್ಲಾ ಉತ್ಕಟ ಅಭಿವ್ಯಕ್ತಿಯೇ. ಅದರಲ್ಲಿ ನೀರು ಬೆರೆಸಿದ ತೆಳುತನ ಖಂಡಿತಾ ಇರುವುದಿಲ್ಲ ಎಂಬುದು ಅವರ ಅಭಿಪ್ರಾಯ. ಮಿಲನದ ಉತ್ಕಟ ಗಳಿಗೆಯಲ್ಲೂ ಅಗಲಿಕೆಯನ್ನು ಮರೆಯಲಾಗದ ಮಹಾನುಭಾವ ಈತ. ಅದಕ್ಕೆ ಬಂಡೆಯ ಕವನಗಳನ್ನು ತಿದ್ದುವ ಧೀರರು ಯಾರೂ ಇಲ್ಲ. ಕಾಮ, ಪ್ರೇಮ, ಬದುಕು, ಜಗತ್ತು, ಹೆಣ್ಣು, ಗಂಡು, ಪ್ರಕೃತಿ ಎಲ್ಲವನ್ನೂ ಅನುಭವಿಸುವ ಒಂದು ರೀತಿಯ ಶಾಪಗ್ರಸ್ಥ ಜೀವ ಅದು. ಓದುಗರ ಗ್ರಹಿಕೆಯಲ್ಲಿ ಕವಿತೆಯ ಪ್ರತಿಮೆಗಳನ್ನು ಶಿಲ್ಪಗಳಂತೆ ಕಾಣುವರೀತಿ ಬರೆಯುವುದು ಸವಾಲಿನದು. ಕವಿತೆಗೆ ಅಂತಹ ಶಕ್ತಿ ದಕ್ಕಲು ಹೊಸನುಡಿಗಟ್ಟಿನ ಶೋಧ ಮತ್ತು ತೀವ್ರತೆರನಾದ ಅನುಭವಿಸುವಿಕೆಯ ಒಡಲಲ್ಲಿ ಕವಿತೆ ಜೀವತಳೆದಿದ್ದರೆ ಮಾತ್ರ ಸಾಧ್ಯ. ಅಂತಹ ಶಕ್ತಿ ಕವಿ ರಾಜಶೇಖರ ಬಂಡೆಗ ದಕ್ಕಿದೆ ಎಂಬುದಕ್ಕೆ ಸಾಕ್ಷಿ ಚಿಟ್ಟೆ ರೆಕ್ಕೆಯ ರೇಟು.

Reviews

There are no reviews yet.

Be the first to review “ಚಿಟ್ಟೆ ರೆಕ್ಕೆಯ ರೇಟು”

Your email address will not be published. Required fields are marked *