ದೈವಿಕ ಹೂವಿನ ಸುಗಂಧ (ಭಕ್ತಿ ಲೀಲೆಯ ವಿಶ್ವರೂಪ)
₹225.00
ಸುಗಂಧ ಹೀರುವ ಮುನ್ನ
ಮಧ್ಯಯುಗದ ಭಾರತ ಉಪಖಂಡದ ಭಕ್ತಿಪಂಥದ ಕಾವ್ಯ ಮತ್ತು ಪರ್ಶಿಯನ್
ಭೂಪ್ರದೇಶದ ಸೂಫಿ ಕಾವ್ಯವನ್ನು ಒಂದು ಪುಸ್ತಕದಲ್ಲಿ ಪ್ರಕಟಿಸುತ್ತಿರುವುದು ಕನ್ನಡದಲ್ಲಿ ಹೊಸ ಪ್ರಯತ್ನ ಮಾತ್ರವಲ್ಲ, ಎರಡೂ ಧಾರೆಯ ಅಪರೂಪದ ಕವಿಗಳು ಒಂದೆಡೆ ಸೇರುತ್ತಿರುವುದು ಕೂಡ ಕನ್ನಡದಲ್ಲಿ ಮೊದಲ ಸಲವೇ. ಅನುವಾದದಲ್ಲಿ ಮೂಲಕ್ಕೆ ನಿಷ್ಠೆ ಇಟ್ಟುಕೊಂಡು, ಭಾವಾರ್ಥಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಅಲ್ಲದೆ, ಇವುಗಳಲ್ಲಿ ಬಹುಪಾಲು ಕವಿತೆಗಳ ಮೂಲಭಾಷೆ ಬೇರೆ. ಅವು ಮೊದಲು ಇಂಗ್ಲಿಶಿಗೆ, ಅಲ್ಲಿಂದ ಕನ್ನಡಕ್ಕೆ ಬರುತ್ತಿರುವಂಥವು. ಭಾರತೀಯ ಕವಿಗಳನ್ನು ಕನ್ನಡಿಸುವಾಗ ಹಲವೊಮ್ಮೆ ಗೆಳೆಯರ ಸಹಾಯದಿಂದ ಮೂಲಭಾಷೆಯಿಂದ ಅನುವಾದಿಸಲು ಪ್ರಯತ್ನಿಸಿರುವೆ.
ಬಂಗಾಳಿ, ಗುಜರಾತಿ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಭಾಷೆಯ ಕವಿತೆಗಳನ್ನು ನೇರವಾಗಿ ಅನುವಾದಿಸಿರುವೆ. ಆದರೆ, ಅವುಗಳ ಸಂಖ್ಯೆ ಬಹಳ ಕಡಿಮೆ. ಮುಖ್ಯ ಅವಲಂಬನೆ ಇಂಗ್ಲಿಶ್ ಅನುವಾದಗಳ ಮೇಲೆಯೆ.
ಎರಡೂ ಬಗೆಯ ಕಾವ್ಯಧಾರೆಗಳಲ್ಲಿ ಹಲಬಗೆಯ ಛಂದಸ್ಸನ್ನು ಕಾಣುತ್ತೇವೆ. ಆದರೆ, ಅನುವಾದದಲ್ಲಿ ಯಾವುದೇ ಛಂದಸ್ಸಿನ ನಿಯಮಗಳನ್ನು ಪಾಲಿಸಿಲ್ಲ. ಮುಕ್ತತೆಯೇ ಇಲ್ಲಿನ ಹೊಸಛಂದಸ್ಸು. ಪ್ರಾಸ, ಲಾಲಿತ್ಯ, ಆದ್ರ್ರತೆ, ನವಿರುತನ ಕಂಡರೆ ಅವು ಸಹಜವಾಗಿ ಬಂದಿರುವಂಥದ್ದೇ ಹೊರತು, ವ್ಯಾಕರಣ ಮತ್ತು ಛಂದಸ್ಸಿನ ಪಾಲನೆಯಿಂದ ಅಲ್ಲ. ಇಲ್ಲಿ ಪ್ರತಿಪದ ಅರ್ಥಕ್ಕಿಂತ ಭಾವಾರ್ಥವೇ ಮುಖ್ಯವಾಗಿದೆ. ಕವಿತೆಗಳನ್ನು ಓದಿದಾಗ ಅವುಗಳ ಮೂಲ ಆಶಯ ತುಸುವಾದರೂ ತಲುಪಿದೆ ಎಂದು ಓದುಗನಿಗೆ ಅನ್ನಿಸಿದರೆ ಅದು ಈ ಪ್ರಕ್ರಿಯೆಯಲ್ಲಿ ನಾನು ಗಳಿಸುತ್ತಿರುವ ಪುಣ್ಯ.
*
ನಮ್ಮನ್ನೆಲ್ಲ ನಿಯಂತ್ರಿಸುವ ಎರಡು ಅತ್ಯಂತ ಪ್ರಬಲ ಶಕ್ತಿಗಳೆಂದರೆ ಧರ್ಮ ಮತ್ತು ರಾಜಕಾರಣ. ಎರಡರಲ್ಲೂ ಕರ್ಮಠತೆ, ಕಬ್ಬಿಣದ ಕಾಠಿಣ್ಯವನ್ನು ಎಲ್ಲ ಕಾಲಗಳಲ್ಲೂ
ಕಾಣುವುದು ಸಾಮಾನ್ಯ. ಅವುಗಳ ಇನ್ನೊಂದು ಮಗ್ಗುಲಿಗೆ ಹೂವಿನ ಮೃದುತ್ವವನು ಗುಣವಾಗಿ ಪಡೆದ ಇನ್ನೊಂದು ಲೋಕವೂ ಇದೆ. ನಿಜ, ಹೂವಿನ ಮೃದುತ್ವಕ್ಕಿಂತ
ಸುಗಂಧ ಹೀರುವ ಮುನ್ನಕಬ್ಬಿಣದ ಕಠಿಣತೆಯ ಬಲ ಹೆಚ್ಚು. ಮೃದುತ್ವದ ಆಯುಷ್ಯ ಕಡಿಮೆ. ಆದರೆ, ಅದರ
ನವುರು ಸುಗಂಧ ನಮ್ಮ ಸ್ಮೃತಿಯಲ್ಲಿ ಉಳಿದಿರುತ್ತದೆ. ನಮ್ಮ ನಾಗರಿಕತೆಗಳು
ನಿರ್ಮಾಣಗೊಂಡಿರುವುದು ಇಂತಹ ಶ್ರುತಿ ಮತ್ತು ಸ್ಮೃತಿಗಳಿಂದಲೇ. ಸ್ಮೃತಿ ಮತ್ತು
ಶ್ರುತಿಗೆ ಸೂಫಿ ಸಂವಾದಿ ಪದ: ‘ಸಮಾ’. ಇದು ಮೋಕ್ಷ ಸಾಧನೆಯ ಹನ್ನೊಂದನೆಯ
‘ಪರದೆ’. ಆಲಿಕೆ, ಸ್ಮರಣೆ, ಮನನ ಮತ್ತು ಪರಿಷ್ಕರಣೆಗಳನ್ನು ಆಚರಣೆಗೆ ತರುತ್ತ
ಮುಂದಡಿ ಇಡುವುದು ಒಂದು ವಿಧಾನ. ಆದ್ರ್ರತೆಯ ಕಾಲಾವಧಿ ಕಡಿಮೆ. ನಿಜವೇ.
ಆದರೆ, ಕಬ್ಬುನ ಮತ್ತು ಕಲ್ಲುಗಳಿಂದ ಕಟ್ಟಿದ ಶ್ರೇಷ್ಠ ಇಮಾರತುಗಳು ಮುಂದೊಂದು
ಕಾಲಕ್ಕೆ ಪ್ರಾಚ್ಯವಸ್ತುಗಳಾಗಿ, ಪಾಳು ಕೊತ್ತಲಗಳಾಗಿ ಬದಲಾಗುವವು ಎನ್ನುವುದೂ
ನಿಜವೆ.
ದೇಹವನು ಕಾಯಕದಲಿ ಕರಗಿಸುವ ಶರಣ, ದೇಹವನು ವ್ಯೂಮದಲಿ ಸಿಲುಕಿಸಿ
ಸಿಕ್ಕುಸಿಕ್ಕಾದ ಲೋಕದ ಅರ್ಥ ಒಡೆದು ಬ್ರಹ್ಮಾಂಡದಲಿ ಲೀನನಾಗುವ ಯೋಗಿ,
ತನ್ನನ್ನು ಕನ್ನೆಯಂತೆ ಪರಮಪುರುಷನಿಗೆ ಸಮರ್ಪಸಿಕೊಳ್ಳುವ ಸೂಫಿ ಸಂತ, ಇವರೆಲ್ಲ
ನಮಗೆ ಏನನ್ನಾದರೂ ಹೇಳುತ್ತಿದ್ದಾರೆಯೆ? ನಿಸ್ವಾರ್ಥ ಪ್ರೇಮ, ತಾನು ಮಾಡುವ
ಕೆಲಸದಲಿ ತನ್ಮಯತೆ, ಸಿದ್ಧಿಸಲು ರಾಗದ್ವೇಷಗಳಿಂದ ಮುಕ್ತನಾಗಿರಬೇಕಾದ ಅಗತ್ಯ,
ಕುಹಕ, ತರತಮ, ಅವಹೇಳನ, ಶೋಷಣೆ ಮಾಡುವ, ಕೀರ್ತಿ-ಪ್ರಸಿದ್ಧಿಗಾಗಿ
ಹಾತೊರೆಯುವುದರ ಹೊರತಾಗಿಯೂ ಬೇರೊಂದು ವಿಧಾನವಿರಲು ಸಾಧ್ಯ, ಎಂದು
ಈ ಹೂವಿನ ಮೃದುತ್ವದ ಮನುಷ್ಯರು ಹೇಳುತ್ತಿದ್ದಾರೆಂದು ಅನ್ನಿಸಿದರೆ, ಅಂಥ
ನಿಷ್ಕಲ್ಮಶ ಲೋಕವನು ನಿರ್ಮಿಸಬೇಕಾದ ಹೊಣೆ ನಮ್ಮ ಮೇಲೆಯೇ ಇದೆ.
Reviews
There are no reviews yet.