Description
ಯಶವಂತ ಚಿತ್ತಾಲರ ಅಪ್ರಕಟಿತ ಕಾದಂಬರಿ
ರಾಜೇಂದ್ರ ಚೆನ್ನಿಯವರ ಮುನ್ನುಡಿಯಿಂದ…..
ಕತೆ ತಾನೇ ಮುಕ್ತಾಯವಾಗುತ್ತದೆಯೋ ಕತೆಗಾರ ಮುಗಿಸುತ್ತಾನೆಯೋ ಎನ್ನುವ ಪ್ರಶ್ನೆಗೆ ಈ ಜಗತ್ತಿನಲ್ಲಿ ಉತ್ತರವಿಲ್ಲ. ಕೃತಿನಿಷ್ಠ ವಿಮರ್ಶಕರು ಕೃತಿಯ ಸ್ವರೂಪ, ಒಟ್ಟಂದ ಇವುಗಳ ಆಧಾರದ ಮೇಲೆ ಇಲ್ಲಿಗೆ ಈ ಕತೆ ಮುಗಿದದ್ದು ಅದು ಸಮಗ್ರವಾಗಿದೆ ಎಂದು ಸಾಬೀತು ಮಾಡಲು ಯತ್ನಿಸುತ್ತಾರೆ. ಅಥವಾ ಇನ್ನೊಂದು ಕತೆಯನ್ನು ಕತೆಗಾರ ಮುಗಿಸಿದ್ದರೂ ಅಪೂರ್ಣವಾಗಿ ಉಳಿದಿದೆ ಎಂದು ವಾದಿಸುತ್ತಾರೆ. ಏಕೆಂದರೆ ಇಂಥ ವಿಮರ್ಶಕರಿಗೆ ಶುರುವಾತು, ಮಧ್ಯಭಾಗ ಮತ್ತು ಮುಕ್ತಾಯಗಳು ಆಖೈರಾಗಿರಬೇಕು ಮತ್ತು ಎಲ್ಲ ಕತೆಗಳಿಗೆ ಇರಬೇಕು ಎನ್ನುವ ಅಗಾಧವಾದ ನಂಬಿಕೆಯಿದೆ.
ಚಿತ್ತಾಲರ ಕಾದಂಬರಿಗಳು ಕಾಳರಾತ್ರಿಯಿಂದ ಜೀವಪರವಾದ ನೆಲೆಗಳ ಕಡೆಗೆ ಚಲಿಸುತ್ತವೆ. ಇದು ‘ಶಿಕಾರಿ’ ಮತ್ತು ‘ಪುರುಷೋತ್ತಮ’ ಕಾದಂಬರಿಗಳಲ್ಲಿ ದಟ್ಟವಾಗಿ ಸಫಲವಾಗಿ ಕಂಡುಬರುತ್ತದೆ. ಈ ಅಪೂರ್ಣವಾದ ಕೃತಿಯೂ ಅಂಥದೇ ಮುಕ್ತಾಯಕ್ಕೆ ಚಲಿಸುತ್ತಿತ್ತೇನೋ ಎನ್ನಿಸುತ್ತದೆ… ಸತ್ಯವನ್ನು ಅರಿಯಲು ಊಹೆಯೊಂದೇ ಸಾಧನವಾಗಿರುವುದರಿಂದ ಸತ್ಯವೋ ಊಹೆಯೋ ಎಂದೂ ಆಖೈರಾಗಿ ಗೊತ್ತಾಗದ ಚಿತ್ತಾಲರ ಜಗತ್ತಿಗೆ ಓದುಗರನ್ನು ಪ್ರೀತಿಯಿಂದ ಆಹ್ವಾನಿಸುತ್ತೇನೆ.
Reviews
There are no reviews yet.