Description
ಎಪ್ಪತ್ತು- ಎಂಬತ್ತರ ದಶಕ… ಕರ್ನಾಟಕ ಕುದಿವ ಪಾತ್ರೆಯಂತಿದ್ದ ಕಾಲ. ಸಾಮಾಜಿಕ- ಸಾಹಿತ್ಯಕ ಚಳವಳಿಗಳು ಜನರನ್ನು ಬಡಿದೆಬ್ಬಿಸಿದ್ದವು. ನೆಲದ ತುಂಬಾ ಹೋರಾಟದ ಕಾವು. ಅನೇಕ ಲೇಖಕರು, ಪತ್ರಕರ್ತರು, ಚಿಂತಕರು, ಸಾಮಾಜಿಕ ಕಾರ್ಯಕರ್ತರಿಗೆ ಬಹುದೊಡ್ಡ ಭೂಮಿಕೆ ಒದಗಿಸಿದ್ದು ಆ ಕಾಲಘಟ್ಟವೇ. ಸಾಮಾಜಿಕ ಹೋರಾಟಗಳಲ್ಲಿ ರೈತ ಚಳವಳಿ, ದಲಿತ ಚಳವಳಿಗಳ ಭೋರ್ಗರೆತ ಒಂದೆಡೆಯಾದರೆ ಸಾಹಿತ್ಯದಲ್ಲಿ ದಲಿತ- ಬಂಡಾಯದ ದನಿ ಮೂಡಿದ್ದ ಹೊತ್ತು ಅದು. ಅಂತಹ ಸಂಕ್ರಮಣ ಸಮಯದಲ್ಲಿ ಒಡಮೂಡಿದವರು ಬಾನು ಮುಷ್ತಾಕ್.
Reviews
There are no reviews yet.