Description
ಹಿರಿಯ ಲೇಖಕರಾದ ನಟರಾಜ್ ಹುಳಿಯಾರ್ ಅವರು ಸಂಪಾದಿಸಿರುವ ‘ಎಲ್ಲರ ಗಾಂಧೀಜಿ’ (ಮಹಾತ್ಮ ಗಾಂಧೀಜಿಯವರ ಮಾತು-ಬರಹ-ಚಿಂತನೆ)
**************
‘ನನ್ನ ಜೀವನವೇ ನನ್ನ ಸಂದೇಶ’ ಎಂದು ಗಾಂಧೀಜಿ ಥಟ್ಟನೆ ಹೇಳಿದ್ದು ಅವರೊಳಗಿನ ತತ್ವಜ್ಞಾನಿ ಕಂಡುಕೊಂಡ ವಿನಮ್ರ ಸತ್ಯವಾಗಿತ್ತು.
ತಮ್ಮ ಜೀವನದುದ್ದಕ್ಕೂ ಒಳಿತನ್ನೇ ಹುಡುಕಿ, ಒಳತನ್ನೇ ರೂಪಿಸಲೆತ್ನಿಸಿದ ಗಾಂಧೀಜಿಯವರ ಧ್ಯಾನಸ್ಥ ಮಾತು, ಬರಹಗಳ ಪ್ರಾತಿನಿಧಿಕ ಸಂಕಲನ ಇದು. ಗಾಂಧೀಜಿ ಓದುಗರೊಡನೆ ನೇರವಾಗಿ ಮಾತಾಡಿರುವ ಸಾವಿರಾರು ಜೀವಂತ ಕಾಣ್ಕೆಗಳ ಈ ಬರಹಗಳು ನಮ್ಮ ಸ್ಥಗಿತ ಆಲೋಚನೆಗಳ ದಿಕ್ಕನ್ನೇ ಬದಲಾಯಿಸಬಲ್ಲವು.
ಗಾಂಧೀ ಚಿಂತನಾಲೋಕದ ಅಪೂರ್ವ ಮಿಂಚು, ಮಿನುಗು, ಆಳ, ಗಾಂಭೀರ್ಯಗಳ ಸಂಕೀರ್ಣ ಮುಖಗಳನ್ನು ಕಾಣಿಸುವ ಇಷ್ಟೊಂದು ವೈವಿಧ್ಯಮಯ ಗಾಂಧೀ ಬರಹಗಳ ಪುಸ್ತಕವೊಂದು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟವಾಗುತ್ತಿದೆ.
-(ಬೆನ್ನುಡಿಯಿಂದ)
Reviews
There are no reviews yet.