Sale!

ಹಾದಿಗಲ್ಲು

225.00

Add to Wishlist
Add to Wishlist
Email
SKU: B-SMV-HGL Categories: ,

Description

ಅಪರೂಪದ ಐಎಎಸ್‌ ಅಧಿಕಾರಿ ಕೆ.ಎ. ದಯಾನಂದ್‌ ಆತ್ಮಕಥೆ.

ಪತ್ರಕರ್ತ ನಾಗೇಶ್ ಹೆಗಡೆ ದಯಾನಂದ್ ಬಗ್ಗೆ ಆಡಿರುವ ಮಾತುಗಳು –

ಕೆ.ಎ. ದಯಾನಂದ್‌ ನಾನು ಮೆಚ್ಚಿದ ಅಪರೂಪದ ಸರಕಾರಿ ಅಧಿಕಾರಿ. ಇಲಾಖೆಯ ಕಡತಗಳನ್ನು ಡಿಜಿಟೈಸ್‌ ಮಾಡಿ, ಅಲ್ಲಿ ಮೊದಲೇ ಬಿಲತೋಡಿ ಠಿಕಾಣಿ ಹೂಡಿದ್ದ ಹೆಗ್ಗಣಗಳಿಗೆ ಹೊಗೆ ಹಾಕಿದವರು ಇವರು. ನಂತರ ಪತ್ರಾಗಾರ ವಿಭಾಗಕ್ಕೆ ಸ್ವತಃ ಎತ್ತಂಗಡಿಯಾಗಿ ಅಲ್ಲೂ ದೂಳು ಝಾಡಿಸಲು ವಿದ್ಯುನ್ಮಾನ ಪೊರಕೆಯನ್ನು ಬಳಸಿದವರು. ಆಮೇಲೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಹೋಗಿ, ರಜಾದಿನಗಳಲ್ಲಿ ಹಿಂದುಳಿದ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಮಂಗನಕಾಯಿಲೆ ಹಾವಳಿಯಿಂದ ಹಳ್ಳಿಗರು ಭಯಗ್ರಸ್ಥರಾಗಿದ್ದಾಗ ತಾನು ಆ ಹಳ್ಳಿಗಳಲ್ಲೇ ವಾಸ್ತವ್ಯ ಹೂಡಿ ಧೈರ್ಯ ತುಂಬಿದವರು.

ಗ್ರಾಮೀಣ ಹಿನ್ನೆಲೆಯಲ್ಲಿ ಜನಿಸಿ, ಬಡತನವನ್ನೇ ಹೆಗಲಿಗೇರಿಸಿಕೊಂಡು ಓದು ಮುಗಿಸಿ, ಕಾಲೇಜಿನಲ್ಲಿ ಗುಮಾಸ್ತನಾಗಿ, ಹೈಸ್ಕೂಲ್‌ ಶಿಕ್ಷಕನಾಗಿ ತನ್ನ ಛಲ ಮತ್ತು ಪರಿಶ್ರಮದ ಮೂಲಕ ಕೆ.ಎ.ಎಸ್‌, ನಂತರ ಐಎಎಸ್‌ ಪದೋನ್ನತಿ ಪಡೆದವರು ಅಧಿಕಾರಿಯಾದವರು. ಪ್ರಾಮಾಣಿಕ, ಜನಸ್ನೇಹಿ ಅಧಿಕಾರಿಯೆಂದು ಹೆಸರು ಗಳಿಸಿದವರು ಇವರು.

Reviews

There are no reviews yet.

Be the first to review “ಹಾದಿಗಲ್ಲು”

Your email address will not be published.