Description
DESCRIPTION
ಲೇಖಕರು: ಎಚ್.ಎಸ್. ರಾಘವೇಂದ್ರರಾವ್
ಪ್ರಕಾಶನ: ಕನ್ನಡ ಸಂಘ, ಬೆಂಗಳೂರು
**************************
ಸಾಹಿತ್ಯ ಕೃತಿಯು ಒಂದು ನಿರ್ದಿಷ್ಟ ಸ್ಥಿತಿಯಲ್ಲಿ ಮಾತ್ರ ಜೀವಂತವಾಗಿರುವ ವಿಚಿತ್ರ ವಸ್ತು ಅದು ಬುಗುರಿಯ ಹಾಗೆ, ಬುಗುರಿಯ ನಿಜವಾದ ಸ್ವಭಾವ ಗೊತ್ತಾಗುವುದು ಅದು ತಿರುಗುತ್ತಿರುವಾಗ ಮಾತ್ರ, ಇಲ್ಲದಿದ್ದರೆ ಅದೊಂದು ಮರದ ತುಂಡು, ಹೀಗೆ ಸಾಹಿತ್ಯಕೃತಿಯ ಅಸ್ತಿತ್ವಕ್ಕೆ, ಜೀವಂತಿಕೆಗೆ ಕಾರಣವಾಗುವ ಸಂಗತಿಯನ್ನು ‘ಓದುವಿಕೆ’ಯೆಂದು ಕರೆಯುತ್ತಾರೆ. ಓದದೆ ಇರುವಾಗ ಅದು ಬಿಳಿಯ ಕಾಗದದ ಮೇಲೆ ಮಾಡಿದ ಕರಿಯ ಗುರುತುಗಳು ಮಾತ್ರ
ಜೀನ್ ಪಾಲ್ ಸಾರ್ತ್
“ದಾರಿ ನೂರಾರಿವೆ ಬೆಳಕಿನರಮನೆಗೆ”
*-ಜಿ.ಎಸ್. ಶಿವರುದ್ರಪ್ಪ*
ನಾನು ಸುಮಾರು ನಲವತ್ತು ವರ್ಷಗಳ ಅವಧಿಯಲ್ಲಿ ಕನ್ನಡಕ್ಕೆ ತಂದ ಅನೇಕ ಬರಹಗಳಲ್ಲಿ, ಕೆಲವನ್ನು ಇಲ್ಲಿ ಒಟ್ಟುಗೂಡಿಸಿದ್ದೇನೆ. ಇವುಗಳನ್ನು ಹೀಗೆ ತರಲು ಇರುವ ಕಾರಣಗಳು ಮತ್ತು ಇವುಗಳಿಂದ ಇರುವ ಇಲ್ಲದ ಪ್ರಯೋಜನಗಳು ನನ್ನ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟಿಸಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಸಹಜವಾಗಿಯೇ ಈ ಅನಿಸಿಕೆಗಳು ನಮ್ಮ ಈ ಕಾಲದ ಓದು-ಬರಹಗಳು ನಿಂತಿರುವ ನೆಲೆಗಟ್ಟಿನ ಜೊತೆಗೆ ನಿಕಟವಾದ ನಂಟನ್ನು ಪಡೆದಿರುತ್ತವೆ.
ಈ ಹೊತ್ತಿಗೆಗೆ ‘ಹತ್ತು ದಿಕ್ಕಿನ ಬೆಳಕು’ ಎಂಬ ಹೆಸರನ್ನು ಕೊಟ್ಟಿದ್ದೇನೆ. ಬೇರೆ ದೇಶ, ಬೇರೆ ಕಾಲ ಮತ್ತು ಬೇರೆ ಭಾಷೆಗಳಿಂದ ಮಾಡಿಕೊಳ್ಳುವ ಇಂಥ ಆಮದುಗಳು ಬೆಳಕೋ, ಕತ್ತಲೆಯೋ ಅಥವಾ ಎರಡೂ ಅಲ್ಲದ ಅನುಪಯುಕ್ತ ಸರಕೋ ಎಂಬ ವಿಷಯವನ್ನು ಕುರಿತಂತೆಯೇ ಈಚೆಗೆ ಅನುಮಾನಗಳು ತಲೆದೋರಿವೆ. ಕರ್ನಾಟಕಕ್ಕೆ, ಕನ್ನಡಕ್ಕೆ ಅನನ್ಯವಾದುದನ್ನು, ಅದರದೇ ಆದ ಭೂಗೋಳಗಳ/ಚರಿತ್ರೆಗಳ ನೆರವಿನಿಂದ ಕಂಡುಕೊಳ್ಳಬೇಕೆಂಬ ವಾದವನ್ನು ಹಲವು ಗೆಳೆಯರು ಗಟ್ಟಿ ದನಿಯಲ್ಲಿ ಹೇಳುತ್ತಿದ್ದಾರೆ. ಸಮುದಾಯಗಳ ಬದುಕು, ನಡಾವಳಿಗಳು ಮತ್ತು ನಂಬಿಕೆಗಳಿಗೆ ಅಗತ್ಯವಾದ ಸಂಗತಿಗಳು ಅದರ ಒಳಗಡೆಯೇ ಅಡಗಿರುತ್ತವೆ ಮತ್ತು ಅದರಾಚೆಗಿನದೇನೂ ನಮಗೆ ಬೇಡವೆಂಬ ಈ ನಿಲುವುಗಳು ಅನುವಾದವೆಂಬ ಪ್ರಕ್ರಿಯೆಯ ಹಿಂದಿನ ರಾಜಕೀಯವನ್ನು ಕೂಡ ವಿವರಿಸುತ್ತವೆ. ಹಾಗೆ ನೋಡಿದರೆ, ಈ ಪುಸ್ತಕದಲ್ಲಿಯೇ ಅಂತಹ ವಿಷಯವನ್ನು ಚರ್ಚಿಸುವ ಲೇಖನಗಳಿವೆ. ಭಾಷಾಂತರವು, ಬಹಳ ನಿರಪಾಯಕಾರಿಯಾದ, ಸೌಂದರ್ಯವನ್ನು ಮಾತ್ರ ಮೂಲನೆಲೆಯಾಗಿ ಹೊಂದಿರುವ ಕೆಲಸವಲ್ಲವೆಂಬ ದಿಟವು ನಮಗೆ ಚೆನ್ನಾಗಿಯೇ ಮನದಟ್ಟಾಗಿದೆ. ಆದರೆ, ಒಳಬರುವ ಮತ್ತು ಹೊರಗೆ ಹೋಗುವ ಎಲ್ಲ ಬಾಗಿಲುಗಳನ್ನೂ ಮುಚ್ಚಿಕೊಂಡ ಕತ್ತಲೆಕೋಣೆಗಳಲ್ಲಿ ನನಗೆ ಆಸಕ್ತಿಯಿಲ್ಲ.
-ಎಚ್.ಎಸ್. ರಾಘವೇಂದ್ರ ರಾವ್
(ಲೇಖಕರ ಮಾತುಗಳಿಂದ)
ಅಮೂಲ್ಯ ಪುಸ್ತಕ
Joined Jul 8, 2020
380 PRODUCTS ON STORE
– See more at: https://amulyapustaka.myinstamojo.com/-fedc1/p3469571/#sthash.ofloSkMp.dpuf
Reviews
There are no reviews yet.