Description
ಮೂಲ: ಸೈರಸ್ ಮಿಸ್ತ್ರಿ
ಕನ್ನಡಕ್ಕೆ: ಬಿ.ಆರ್. ಜಯರಾಮರಾಜೇ ಅರಸ್
********
ಪಾರ್ಸಿ ಉಪಜಾತಿಗೆ ಸೇರಿದ ಅಸ್ಪೃಶ್ಯರಾದ ಹೆಣ ಹೊರುವವರ ಶೋಚನೀಯ ಬದುಕಿನ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ. ಕಥಾನಾಯಕ ಫಿರೋಜ್ ಎಲ್ಚಿದಾನ ಸಮಾಜದ ಮೇಲ್ವರ್ಗಕ್ಕೆ ಸೇರಿದ ಪುರೋಹಿತರೊಬ್ಬರ ಮಗ. ಹೆಣ ಹೊರುವವನ ಮಗಳು ಸೆಪಿಡೆಹಳನ್ನು ಪ್ರೀತಿಸುತ್ತಾನೆ. ಅವಳ ತಂದೆ ಅವಳನ್ನು ಮದುವೆಯಾಗಬೇಕಾದರೆ ಅವನು ಹೆಣ ಹೊರುವ ವೃತ್ತಿಯನ್ನು ಸ್ವೀಕರಿಸಬೇಕು ಮತ್ತು ಅವರೊಂದಿಗೆ ಬದುಕಬೇಕು ಎಂಬ ಷರತ್ತುಗಳನ್ನು ಹಾಕುತ್ತಾನೆ. ಸೆಪಿಡೆಹ್ ಳಿಗಾಗಿ ಪ್ರೀತಿಯ ತಂದೆ, ತಾಯಿ, ಕುಟುಂಬ ವಂಶಪಾರಂಪರ್ಯವಾಗಿ ಬಂದ ಪೌರೋಹಿತ್ಯ ಮತ್ತು ಸಮಾಜ ಎಲ್ಲವನ್ನು ತೊರೆಯಬೇಕಾಗುತ್ತದೆ. ಬಹಿಷ್ಕೃತ ‘ಖಾಂಧಿಯಾ’ (ಹೆಣ ಹೊರುವವರು) ಜಾತಿಗೆ ಸೇರಿಕೊಳ್ಳಬೇಕಾಗುತ್ತದೆ. ದುರದೃಷ್ಟವೆನ್ನುವಂತೆ ಅವನು ಪ್ರೀತಿಸಿ ಮದುವೆಯಾದ ಸೆಪಿಡೆಹ್ ಳು ಬಹುಬೇಗನೆ ಸಾಯುತ್ತಾಳೆ. ಫಿರೋಜ್ ಎಲ್ಚಿದಾನ ತನ್ನ ವೈಯಕ್ತಿಕ ನೋವಿನೊಂದಿಗೆ ಬಹಿಷ್ಕೃತಗೊಂಡ ಹೆಣ ಹೊರುವವರ ಬದುಕಿನಲ್ಲಿ ಸುಧಾರಣೆ ತರಲು ಹಾಗೂ ಅವರ ಬದುಕು ಇನ್ನು ಸಹನೀಯವಾಗಲು ಶ್ರಮಿಸುತ್ತಾನೆ.
-(ಬೆನ್ನುಡಿಯಿಂದ)
Reviews
There are no reviews yet.