Sale!

ಹೆಸರೇ ಇಲ್ಲದ ಊರಲ್ಲಿ

200.00 180.00

Add to Wishlist
Add to Wishlist
Email

Description

ಹಾಗೇ ಹೇಳುವುದಿದ್ದರೆ ಅದು ಊರಲ್ಲ ಒಂದು ಊರಿಗೆ ಇರಬೇಕಾದ ಯಾವ ಲಕ್ಷಣವೂ ಸದ್ಯ ಅದಕ್ಕಿಲ್ಲ.ಆದರೂ ಅದು ಊರು ಎನಿಸಿಕೊಂಡಿದೆ.ಹೆಸರೇ ಇಲ್ಲದ ಊರಲ್ಲಿ ಹೆಚ್ಚೇನು ಜನರು ಇರಲಿಲ್ಲ. ಅಲ್ಲಿದ್ದದ್ದು ಬೆರಳೆಣಿಕೆಯ ಕುಟುಂಬಗಳು ಮಾತ್ರ ಹಾಗಾಗಿ ಅಲಿ ನಾಗರಿಕತೆ ಬೆಳೆದಿಲ್ಲ! ಬೆಳೆಯಬೇಕು ಎಂಬ ಮಹತ್ವಾಕಾಂಕ್ಷೆ ಕೂಡ ಯಾರಿಗೂ ಇದ್ದಂತಿಲ್ಲ. ಅದು ನದಿಯೊಂದರ ಪಕ್ಕ ಚಾಚಿಕೊಂಡಿರುವ ತಗ್ಗುಪ್ರದೇಶ ಸಹಜವಾಗಿ ಕೃಷಿಯೋಗ್ಯ ಭೂಮಿಯಾಗಿತ್ತು ಹಾಗಾಗಿ ಭತ್ತ, ತೆಂಗು, ಅಡಿಕೆ, ಬಾಳೆ,ಕೃಷಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ರಾತ್ರಿ-ಹಗಲೆನ್ನದೆ ಆ ಕುಟುಂಬಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕೃಷಿ ಅವರ ಬದುಕಾಗಿತ್ತು. ಕೃಷಿ ಅವರ ಮಂತ್ರವಾಗಿತ್ತು. ಕೃಷಿ ಅವರ ನಿತ್ಯನೂತನವಾಗಿತ್ತು, ನೀರಿಗೆ ಯಾವುದೇ ಕೊರತೆ ಇಲ್ಲದ ಕಾರಣ ಕೃಷಿ ಬೆಳೆ ನಳನಳಿಸುತ್ತಿತ್ತು. ಹೆಸರೇ ಇಲ್ಲದ ಊರಿನಲ್ಲಿ 44 ಗಂಡಸರು 32 ಹೆಂಗಸರು 11 ಮಕ್ಕಳಿದ್ದರೂ ಗಂಡಸರ ಪೈಕಿ ಮೂವರು ವಿಧುರರು ಹೆಂಗಸರ ಪೈಕಿ ಆರು ಮಂದಿ ವಿಚ್ಛೇದಿತೆ ಹಾಗೂ ಒಂಬತ್ತು ಮಂದಿ ಅವಿವಾಹಿತೆ ಯಾರಿದ್ದರು. ಇವರೆಲ್ಲಾ ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಸೋದರ ಮಾವ ಸೋದರ ಅತ್ತೆ ಚಿಕ್ಕಪ್ಪ-ಚಿಕ್ಕಮ್ಮ ಅತ್ತೆ ಮಾವ ಅಳಿಯ ಮೊಮ್ಮಗ…… ಹೀಗೆ ಸಂಬಂಧದ ಮೂಲಕವೇ ಪರಸ್ಪರ ಗುರುತಿಸಿಕೊಳ್ಳುತ್ತಿದ್ದರು. ಅವರಿಗೆ ಇವರು ಇವರಿಗೆ ಅವರು ಅಪರಿಚಿತರಲ್ಲ ರಕ್ತ ಸಂಬಂಧಗಳಿಂದ ದೂರ ಅಲ್ಲ ಇವರಿಗೆ ಹೆಸರು ಇದ್ದು ಇಲ್ಲದಂತಿತ್ತು ಹಾಗಾಗಿ ಒಬ್ಬರ ಹೆಸರು ಇನ್ನೊಬ್ಬರಿಗೆ ಅಪರಿಚಿತ ಎಂಬಂತಿತ್ತು ಅದು ಎಷ್ಟರಮಟ್ಟಿಗೆ ಎಂದರೆ ಸ್ವತಃ ತಮ್ಮ ಹೆಸರು ಮರೆತುಹೋಗುವಷ್ಟು ಹಾಗಾಗಿ ತಮಗೆ ಹೆಸರೇ ಇಲ್ಲ ಎಂಬ ಭಾವನೆ ಅವರಲ್ಲಿತ್ತು. ಅಷ್ಟೇ ಅಲ್ಲ ಅವರ್ಯಾರಿಗೂ ಹೆಸರು ಮುಖ್ಯವಾಗಿರಲಿಲ್ಲ ಎಲ್ಲರಿಗೂ ದುಡಿಮೆ ಮುಖ್ಯ ಧ್ಯೇಯವಾಗಿತ್ತು.

Reviews

There are no reviews yet.

Be the first to review “ಹೆಸರೇ ಇಲ್ಲದ ಊರಲ್ಲಿ”

Your email address will not be published. Required fields are marked *