Description
ನದೀಮ ಸನದಿ ಅವರ ಮೊದಲ ಕವನ ಸಂಕಲನ ‘ಹುಲಿಯ ನೆತ್ತಿಗೆ ನೆರಳು’. ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ.
‘ನದೀಮ ಸನದಿಯವರ ಕವನಗಳ ವಿಶಿಷ್ಟತೆಯನ್ನು ಸರಳತೆ ಆಪ್ತತೆ ಮಾನವೀಯತೆ ಎಂಬ ಮೂರು ಪದಗಳಲ್ಲಿ ಹಿಡಿಯಬಹುದು. ನಮ್ಮ ಕಾಲದ ಆರೋಗ್ಯವಂತ ಮನಸ್ಸೊಂದು ಲೋಕಕ್ಕೆ ಮಿಡಿದ ಸಾಕ್ಷ್ಯದಂತಿರುವ ಇಲ್ಲಿನ ಕವನಗಳು, ದ್ವೇಷದ ಗೋಡೆಗಳನ್ನು ಕಟ್ಟುವ ಸಮಾಜದೊಳಗೆ ನಿಂತು ಜಾತಿಮತಗಳಾಚೆಗಿನ ದೇವರುಧರ್ಮಗಳಾಚೆ ಮನುಷ್ಯ ಪ್ರೀತಿಯನ್ನು ಹಾರೈಸುತ್ತವೆ. ಈ ಪ್ರೀತಿಯು ಮನುಷ್ಯ ಮತ್ತು ನಿಸರ್ಗಗಳ ನಡುವಿನದು ಕೂಡ. ಆಳವಾದ ಶ್ರದ್ಧೆಯಿಂದ ವ್ಯಕ್ತವಾಗುವ ಖಾಸಗಿಭಾವವು ನಾಡಿನ ರಾಜಕೀಯ ಕಾವ್ಯವೂ ಆಗಬಲ್ಲದು. ಸ್ವಂತಿಕೆಯು ಸಾರ್ವಜನಿಕವೂ ಆಗಬಲ್ಲದು ಎಂಬಂತೆ ಇಲ್ಲಿನ ಪ್ರೇಮಪದ್ಯಗಳಿವೆ. ಕವಿಗೆ ಸಮಾಜದಲ್ಲಿರುವ ವೈರುಧ್ಯಗಳು ಬಹಳ ಕಾಡಿಸಿದಂತಿದೆ. ಚರಿತ್ರೆಯು ವರ್ತಮಾನದಲ್ಲಿ ಪಡೆಯುವ ಊಹಾತೀತ ರೂಪಾಂತರಗಳ ಬಗ್ಗೆ ಇಲ್ಲಿ ವಿಸ್ಮಯವಿದೆ. ಇದನ್ನು ಕವನಗಳು ಚುರುಕಾದ ವಿಷಾದ ವ್ಯಂಗ್ಯಗಳಲ್ಲಿ ಕಾಣಿಸುತ್ತದೆ. ಕಷ್ಟವಿಲ್ಲದ ಭಾರವಿಲ್ಲದೆ ಲವಲವಿಕೆಯಿಂದ ಎದುರಿಗೆ ಒಬ್ಬರನ್ನು ಕೂರಿಸಿಕೊಂಡು ಆಡಿದ ಸಹಜ ಮಾತುಕತೆಯಂತಿವೆ’.
– ರೆಹಮತ್ ತರೀಕೆರೆ (ಬೆನ್ನುಡಿ)
Reviews
There are no reviews yet.