ಜಗದ ಜತೆ ಮಾತುಕತೆ

80.00

Add to Wishlist
Add to Wishlist
Email

Description

ಕಮಲಾಕರರದು ನವೋದಯದ ಈಚೆಗಿನ ಓದು ಮತ್ತು ಪ್ರಭಾವಗಳಿಂದ ತಯಾರಾದ ಒಂದು ಸ್ಪಷ್ಟ ಮತ್ತು ವಿಶಿಷ್ಟ ಸಂವೇದನೆ. ಆ ಸಂವೇದನೆಯಲ್ಲಿ ನವೋದಯದ ಭೌಮದ, ಅತೀತದ ಆವೇಶ, ಆಟಾಟೋಪಗಳಿಲ್ಲ. ನವ್ಯದ ನವಿರಾದ ವ್ಯಂಗ್ಯವಿಲ್ಲ. ತದನಂತರದ ಬಂಡಾಯದ ಕೂಗಾಟ, ರೇಗಾಟಗಳಿಲ್ಲ. ಮರ್ತ್ಯದ ಪರಿಧಿಯೊಳಗೆ, ಕ್ಷಣಭಂಗುರತೆಯ ಅವಧಿಯೊಳಗೆ ಹಾದು ಹೋಗುತ್ತಿರುವ ಜೀವಜಾತಗಳ ಲೋಕದ ಧ್ಯಾನದಿಂದೊದಗಿದ ಅನಿರೀಕ್ಷಿತ ಹೊಳಹುಗಳ, ಅಪರಿಚಿತ ಕೌತುಕಗಳ ಸೂಕ್ಷ್ಮ ನೋಟಗಳು ಈ ಕವಿತೆಗಳ ಮುಖ್ಯಪ್ರಾಣ.

ಇದರ ಜೊತೆಗೆ ಜೀವಜಗತ್ತು, ಸಂಬಂಧಗಳ ಜೋಡಿ ಸದಾ ಸಂವಾದ ನಿರತವಾಗಿ ಹೊಸ ಅರ್ಥಗಳನ್ನು ಕಟ್ಟಿಕೊಳ್ಳುತ್ತಿದ್ದರೂ ತನ್ನ ವ್ಯಕ್ತಿತ್ವದ ಖಾಸಗಿತನವನ್ನೂ ಸ್ಲೋಗನ್ನುಗಳಿಗೆ ಮಣಿಯದ ಅಧಿಕೃತತೆಯನ್ನು ಕಾಪಾಡಿಕೊಳ್ಳುವ ಕಾರಣ ಕಮಲಾಕರರ ಕಾವ್ಯ ಹಿಂಸೆ ಮತ್ತು ಮೃತ್ಯು ಪರವಾಗಿ ಎಕ್ಕುಟ್ಟಿ ಹೋಗುತ್ತಿರುವ ನಮ್ಮ ಹೊತ್ತುಗೊತ್ತುಗಳಲ್ಲಿ ಬಾಳಿನಾಸೆಗೆ ಹಾಲನೆರೆಯುವ ಸಾರ್ಥಕ ಕೆಲಸ ಮಾಡುತ್ತಿದೆ.

ದಿನೇದಿನೇ ಹೆಚ್ಚುಹೆಚ್ಚು ಉದಾಸೀನಕ್ಕೆ ಒಳಗಾಗುತ್ತಿರುವ ಕವಿತೆ ಇದಕ್ಕಿಂತಾ ಹೆಚ್ಚಿನ ಇನ್ನು ಏನನ್ನು ತಾನೇ ಲೋಕಕ್ಕಾಗಿ ಮಾಡಬಲ್ಲದು?

ಕಮಲಾಕರರ ಕವಿತೆಗಳು ನನ್ನೊಳಗೆ ಅಣುರಣಿಸುತ್ತಿರುವ ಹಾಗೇ ಸಹೃದಯರ ಮನಸುಗಳಲ್ಲೂ ನಿಡುಗಾಲ ಮಾರ್ದನಿಸಲಿ.

– ಎಚ್.ಎಸ್. ಶಿವಪ್ರಕಾಶ್
(ಮುನ್ನುಡಿಯಲ್ಲಿ)

Reviews

There are no reviews yet.

Be the first to review “ಜಗದ ಜತೆ ಮಾತುಕತೆ”

Your email address will not be published.