Description
ಇದು ಸಿದ್ರಾಮ ಪಾಟೀಲ ಅವರ ಮೊದಲ ಕಥಾಸಂಕಲನ. ಕಥೆಗಾರನ ವಿಭಿನ್ನ ಅನುಭವದಿಂದ ಸೃಷ್ಟಿಯಾಗಿರುವ ಇಲ್ಲಿನ ಕಥೆಗಳೆಲ್ಲವನ್ನು ಓದಿ ಜೀರ್ಣಿಸಿಕೊಂಡಾಗಲೇ ಮಾತ್ರ ಅವುಗಳಲ್ಲಿ ಅಡಗಿರುವ ಸ್ವಾರಸ್ಯವು ನಮ್ಮ ಮನೋಗಮ್ಯವನ್ನು ತಲುಪಿ ಓದುವಿಕೆಯ ಸಂತೃಪ್ತಿಯನ್ನು ಉಂಟು ಮಾಡುತ್ತವೆ. ಕಥೆಗಾರರ ಕಥಾ ನಿರೂಪಣೆಯ ಶೈಲಿಯು ಕೂಡ ಓದುಗರಿಗೆ ಎಲ್ಲಿಯೂ ವಿಶ್ರಮಿಸಲು ಅವಕಾಶ ನೀಡದೆ ಸರಳವಾಗಿ ಹಾಗೂ ಸಂತೃಪ್ತಕರವಾಗಿ ಓದಿಸಿಕೊಂಡು ಹೋಗುತ್ತದೆ. ಈ ಎಲ್ಲ ಕಥೆಗಳಲ್ಲಿನ ಸಂಭಾಷಣೆಗಳನ್ನು ಗಮನಿಸಿದಾಗ ಇದರಲ್ಲಿ ಬಳಕೆಗೊಂಡ ಪದಗುಚ್ಛಗಳು ಹಾಗೂ ಸೂಚ್ಯವಾದ ನುಡಿಗಳು ಕಥೆಗಾರರ ಪ್ರಬುದ್ಧ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ.
Reviews
There are no reviews yet.