ಜೋತಯ್ಯನ ಬಿದಿರು ಬುಟ್ಟಿ (ಕತೆಗಳು)ornage

120.00

Add to Wishlist
Add to Wishlist
Email

Description

ಲೇಖಕರು: ತೇಜಸ್ವಿನಿ ಹೆಗಡೆ

ಪ್ರಕಾಶನ: ತೇಜು ಪಬ್ಲಿಕೇಷನ್ಸ್

***********************

ಬದುಕಿನ ಕಷ್ಟ ಸುಖಗಳ ಬಗ್ಗೆ ಬರೆಯುತ್ತಲೇ ಲೇಖಕರು, ನಾನು ಬರೆಯಬಲ್ಲೆ. ಬರೆಯುತ್ತಿದ್ದೇನೆ ಎಂಬ ಅಹಂಕಾರ ಜನ್ಯ ಧೋರಣೆಯನ್ನು ರೂಢಿಸಿಕೊಂಡು ಸ್ವಕೇಂದ್ರಿತರಾಗಬಹುದು. ತೇಜಸ್ವಿನಿಯವರ ಮನೋಧರ್ಮ ಇದಲ್ಲ. ಮನುಷ್ಯರ ಕಷ್ಟ ಸುಖಗಳ ಬಗ್ಗೆ ಅವರಿಗೆ ವ್ಯಾಕುಲತೆಯಿದೆ, ವಿಶಾದವಿದೆ, ಅಸಹಾಯಕತೆಯಿದೆ. ಇದೆಲ್ಲದರಿಂದ ಮೂಡುವ ವಿನಯ ಮತ್ತು ತಿಳುವಳಕ ಅವರ ಮನೋಧರ್ಮದ ಮುಖ್ಯ ಭಾಗ.

ಕಷ್ಟಸುಖಗಳ ಬಗ್ಗೆ ತುಂಬಾ ಮನಸ್ಸಿಗೆ ಹಚ್ಚಿಕೊಂಡು ಮನದುಂಬಿ ಬರೆಯುವ ತೇಜಸ್ವಿನಿ ಬದುಕಿನ ಮನುಷ್ಯರ ಸಾಧ್ಯತೆ-ಕನಸುಗಳ ಬಗ್ಗೆ ಆಶಾವಾದಿ, ಎಂತಹ ಕಗ್ಗಂಟರುವ ಬದುಕಿನ ಸನ್ನಿವೇಶದಲ್ಲೂ ಒಂದು ಭರವಸೆಯ ಎಳೆಯನ್ನು ಓದುಗರಿಗೆ ಕಾಣಿಸುತ್ತಾರೆ.

ತೇಜಸ್ವಿನಿಯವರ ವಿಶಿಷ್ಟತೆಯಿರುವುದು ಅವರ ಹೆಣ್ಣು ಕತೆಗಳಲ್ಲಿ. ಇಲ್ಲಿಯ ಬಹುಪಾಲು ಕತೆಗಳಲ್ಲ ಹೆಂಗಸರೇ ಕತೆಗಳನ್ನು ಹೇಳುವವರು, ಕೇಳಸಿಕೊಳ್ಳುವವರು, ಬರೆಯುವವರು, ನಿರೂಪಿಸುವವರು, ದಿಕ್ಕು ತೋರಿಸುವವರು – ಎಲ್ಲರೂ ಎಲ್ಲವೂ ಆಗಿದ್ದಾರೆ. ಬಾಲ್ಯದ ಗುಟ್ಟುಗಳು, ಕೌಟುಂಬಿಕ ಗುಟ್ಟುಗಳು, ದಾಂಪತ್ಯದ ಅಸಹಾಯಕತೆ, ಅಪೂರ್ಣತೆ – ಇಲ್ಲಿನ ದಿನನಿತ್ಯದ ತೋಡುಕೊಳ್ಳುವಿಕೆಯ ಮೂಲಕ ಪ್ರಶಾಂತವಾಗಿ ಆದರೆ ನಿರ್ಣಾಯಕವಾಗಿ ಸ್ಫೋಟಗೊಳ್ಳಲು ಕಾದಿವೆ.

ಎಲ್ಲ ಲೇಖಕಿಯರು ಬರೆಯುವುದು ಹೆಣ್ಣು ಕತೆಗಳನ್ನೇ ಆದರೂ ತೇಜಸ್ವಿನಿಯಂತಹ ಕೆಲವರದು ವಿಶಿಷ್ಟ ಹಾದಿ, ಹೆಂಗಸರು ಬರೆದ ಎಲ್ಲ ಬರವಣಿಗೆಯನ್ನು ಒಂದೇ ಎರಕವೆಂಬಂತೆ, ಏಕಶಿಲಾ ಆಕೃತಿಯೆಂಬಂತೆ ನೋಡಬೇಡಿ ಎಂದು ತೇಜಸ್ವಿನಿ ಓದುಗರನ್ನು ಒತ್ತಾಯಿಸುತ್ತಿದ್ದಾರೆ, ಕಣಕುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು.

-ಕೆ. ಸತ್ಯನಾರಾಯಣ

(ಬೆನ್ನುಡಿಯಿಂದ)

– See more at: https://amulyapustaka.myinstamojo.com/-39498/p3453725/#sthash.TLz1nYfn.dpuf

Reviews

There are no reviews yet.

Be the first to review “ಜೋತಯ್ಯನ ಬಿದಿರು ಬುಟ್ಟಿ (ಕತೆಗಳು)ornage”

Your email address will not be published.