ಈ ಕೃತಿ ಸ್ವಪ್ನ ಪುಸ್ತಕದ ಟಾಪ್ 10 ರಲ್ಲಿ ಮೊದಲ ಸ್ಥಾನ ಪಡೆದಿದ್ದು, ಮೊದಲ ಮುದ್ರಣದ 1000 ಪ್ರತಿಗಳೂ ಕೇವಲ 10 ದಿನಗಳಲ್ಲಿ ಮಾರಾಟವಾಗಿರುವುದು ಪುಸ್ತಕದ ಜನಪ್ರಿಯತೆಯನ್ನು ಸಾರುತ್ತದೆ. ಹಿಂದುಳಿದ ಬಿಳಿಮಲೆಯ ಸಣ್ಣ ಮನೆಯಿಂದ ದೆಹಲಿ ಜೆ ಎನ್ ಯು ಗೆ ಪುರುಷೋತ್ತಮ ಬಿಳಿಮಲೆಯವರು ಮಾಡಿದ ಸಾಹಸದ ಜೀವನ ಪ್ರಯಾಣ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮೂಡಿಬಂದಿದೆ. ಜೀವನದ ನೋವಿನ, ಗಂಭೀರ ಘಟನೆಗಳನ್ನು ನವೀರಾದ ಹಾಸ್ಯದೊಂದಿಗೆ ತಿಳಿಸುವ ಕ್ರಮ ನನ್ನನ್ನು ಬಹಳವಾಗಿ ಮೆಚ್ಚಿಸಿತು. ಹೋರಾಟದ ಅವರ ಜೀವನದಲ್ಲಿ ಮದುವೆಯ ಘಟನೆಯಲ್ಲಿ ಸಹಾಯ ಮಾಡಿದ ನಮ್ಮನ್ನು ಬೇಗನೆ ಅಗಲಿರುವ ನನ್ನ ತಮ್ಮ ಸುನಿಲ ಮಾಡಿದ ಸಹಾಯದ ಪುಟವನ್ನು ಓದಿದಾಗ ನನ್ನ ಕಣ್ಣಂಚಿನಲ್ಲಿ ಕಣ್ಣಿರು ಮೂಡಿತು.
ಮೂಡನಂಬಿಕೆಯನ್ನು ವಿರೋಧಿಸುತ್ತಾ, ಯಕ್ಷಗಾನದಲ್ಲಿ ತಮ್ಮ ಒಲವನ್ನು ತೋರಿಸುತ್ತಾ ಸಾಗಿದ ಅವರ ಪಯಣ ಓದಿಸಿಕೊಂಡು ಹೋಗುತ್ತದೆ. ಜ್ಯೋತಿಷಿಯ ಜಾತಕ ನೋಡಿ, “ಇವನಿಗೆ ವಿದ್ಯೆ ಹತ್ತುವುದಿಲ್ಲ” ಎಂಬ ಮಾತನ್ನು ಸುಳ್ಳಾಗಿಸಿದ ಅವರ ಪಯಣ ಹೋರಾಟದಿಂದ ಕೂಡಿದ್ದಾಗಿತ್ತು. ಸುಳ್ಯದ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ, ಹಂಪೆಯ ಕನ್ನಡ ವಿಶ್ವವಿದ್ಯಾಲದಲ್ಲಿ ಕಂಬಾರರೊಂದಿಗನ ಕಹಿ ನೆನಪುಗಳು, ಅಚಾನಕ್ಕಾಗಿ ದೆಹಲಿಯ ಪ್ರಯಾಣ ಓದುಗನಿಗೆ ತನ್ನೊಂದಿಗೆ ಕರೆದೊಯ್ಯುತ್ತದೆ.
ದೆಹಲಿಯಲ್ಲಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ಭಿನ್ನವಾದ ಕೆಲಸಕ್ಕೆ ಹೊಂದಿಕೊಢಿದ್ದು, ಬಿಡುವಿನ ಸಮಯದಲ್ಲಿ ದೆಹಲಿ ಕನ್ನಡ ಸಂಘದ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ನಿಂತು ಗೆದ್ದು, ಹೊಸ ಕಟ್ಟಡವನ್ನು ಕಟ್ಟಿದ ಸಾಹಸದ ಕಥೆ, ಅಲ್ಲಿಂದ ಜೆಎನ್ ಯುಗೆ ಹೋಗಿ ಕೊನೆಗೆ ಸೇರಿದ ಘಟನೆಗಳು ಓದುಗನಿಗೆ ಓದಿಸಿ ಕೊಂಡು ಹೋಗುತ್ತವೆ. ಬಿಳಿಮಲೆಯವರೊಂದಿಗೆ ನೀವು ಹಲವಾರು ದೇಶಗಳ ವಿದೇಶ ಪ್ರಯಾಣದ ಅನುಭವವನ್ನು ತಮ್ಮದಾಗಸಿಕೊಳ್ಳಬಹುದು. ಸಾವಿನ ಹತ್ತಿರಕ್ಕೆ ಹೋಗುವ ಅನಾರೋಗ್ಯ ಬಂದರೂ ಅದನ್ನು ನಗು ನಗುತ್ತಾ ಹಾಸ್ಯದೊಂದಿಗೆ ಪ್ರಸ್ತುತ ಪಡಿಸುವ ರೀತಿ ಮನಮೆಚ್ಚುವಂತದ್ದು. “ನಾನೇನೂ ಇದಕ್ಕೆ (ಸಾವಿಗೆ) ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿದೆ, ಬರೆಯಬೇಕಾದ ಪುಸ್ತಕಗಳೂ ಕೆಲವಿದೆ” ಎಂಬ ಮಾತು ಅವರ ಬದುಕಬೇಕೆಂಬ ಛಲವನ್ನು ತೋರಿಸುತ್ತದೆ.
ಶ್ರೀನಿವಾಸ ನಟೇಕರ್ (verified owner) –