Description
ಕಂಡದ್ದನ್ನೆಲ್ಲ ಮುಟ್ಟುತ್ತ, ಮೂಸುತ್ತ, ಮೇಯುತ್ತಾ ಒಂದು ಗಂಡಾಡಿನಂತೆ ಒಬ್ಬನೇ ಅಂಡಲೆಯುವುದು ಒಂದು ತರಹ ಚಂದ ಎನ್ನುವ ರಶೀದರು ನಿತ್ಯದ ಮನುಷ್ಯ ನ ಜಂಜಾಟದೊಳಗೇ ಅಸಾಮಾನ್ಯ ಕತೆ ಕಟ್ಟಬಲ್ಲವರು. ತಮ್ಮ ಮೊಣಚಾದ ಬರವಣಿಗೆ ಯಿಂದ ಓದುಗನನ್ನು ಬರಸೆಳೆದು ಕೊಳ್ಳುವ ಮಾಯಾವಿ. ಅವರು ಬರೆದಿರುವ ಸಾಹಿತ್ಯ ಪ್ರಕಾರಗಳೆನೇ ಇರಲಿ ಅವರೊಬ್ಬ ಅಪ್ಪಟ ಕಥೆಗಾರ. ಕಾಲು ಚಕ್ರ ಕೂಡ ಅಂಕಣ ದ ಪರದೆಯ ಹಿಂದೆ ಅಡಗಿ ಕುಳಿತಿರುವ ಕಥೆಗಳ ಗುಚ್ಛ.
ಎರಡು ಸಾವಿರದ ಎಂಟರಿಂದ ಹದಿಮೂರನೇ ಇಸವಿಯ ಕೊನೆಯವರೆಗೆ ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆ ಮತ್ತು ‘ವಿಜಯ ಕರ್ನಾಟಕ’ ದಿನಪತ್ರಿಕೆಗಳಿಗೆ ಅಬ್ದುಲ್ ರಶೀದ್ ಬರೆದ ನೂರಿಪ್ಪತ್ತೈದಕ್ಕೂ ಹೆಚ್ಚು ಅಂಕಣಗಳಿಂದ ಆಯ್ದಬರಹಗಳು ಇಲ್ಲಿವೆ.
Reviews
There are no reviews yet.