Description
ಮೂಲ ಲೇಖಕರು: ಎಂ.ವೈ. ಘೋರ್ಪಡೆ
ಅನುವಾದ: ಎಸ್.ಆರ್. ರೋಹಿಡೇಕರ್
ಮೊದಲಮುದ್ರಣ: 1998
ಎರಡನೆಯ ಮುದ್ರಣ: 2011
ಮೂರನೆಯ ಮುದ್ರಣ: 2021
…………………….
ಪವಿತ್ರ ಸಾನಿಧ್ಯದಲ್ಲಿ ಮಾತು ಮೂಕವಾಗುತ್ತದೆ. ಅನುಭವವೇದ್ಯವಾದ ವ್ಯಕ್ತಿತ್ವದ ವರ್ಚಸ್ಸಿನ ಸಾನಿಧ್ಯದಲ್ಲಿ, ನಿಂತ ನೆಲ ಮತ್ತು ಗಾಳಿಯೂ ಶಾಂತಿ ಸಂದೇಶವನ್ನು ನೀಡುತ್ತವೆ. ಮೌನದ ಶಕ್ತಿಯ ಅರಿವಾಗುತ್ತದೆ. ಒಂದು ನಗೆ, ಒಂದು ನೋಟ, ಒಂದು ಸಂಜ್ಞೆ ಅನಂತ ಸಂದೇಶಗಳ ಸಂಕೇತವಾಗುವ ದಿವ್ಯಕ್ಷಣವೇ ಶಾಂತಿಯ ಅಲೌಕಿಕ ಪ್ರಭೆಯನ್ನು ಸೂಸುವ ‘ಅಮೃತ ಸಂಧಿ’.
ಘೋರ್ಪಡೆಯವರ ಭಾಷೆ ಪ್ರಾಂಜಲ. ಅಕೃತ್ರಿಮ ಅನುಭವ ತೀವ್ರತೆಯಿಂದಾಗಿ ಗಾಢತೆ ದೊರಕಿದೆ. ಪದಗಳಿಗೆ ತಡಕಾಟವಿಲ್ಲ. ಸ್ವಾಮೀಜಿಯವರಿಂದ ತಮ್ಮೆಡೆಗೆ ಹರಿದುಬಂದ ಅನುಭವದ ಅಮೃತ ಧಾರೆಯನ್ನು ಅಷ್ಟೇ ಶುದ್ಧಮನಸ್ಸಿನಿಂದ ಉದಾರವಾಗಿ ನಮ್ಮೆಡೆಗೆ ಹರಿಯಗೊಟ್ಟಿದ್ದಾರೆ. ಇಲ್ಲಿ ಹಂಚಿಕೊಡಬೇಕೆನ್ನುವ ಪ್ರಾಮಾಣಿಕತೆ ಇದೆ. ಸ್ವಾನುಭವದ ಸುಖವಿದೆ. ಬೆರಗುಗೊಳಿಸಬೇಕೆಂಬ ಪ್ರಯಾಸವಿಲ್ಲ. ಋಣಭಾರದ ಅಪಾಯವಿಲ್ಲ. ಹಾಗಾಗಿಯೇ ಜೊತೆಯಲ್ಲಿ ನಡೆದಾಗ ಅವರ ಅನುಭವದ ಬಹಳಷ್ಟು ಭಾಗ ನಮ್ಮದೂ ಆಗುತ್ತದೆ. ಅಸಾಮಾನ್ಯ ಛಾಯಾಚಿತ್ರಗ್ರಾಹಕರೂ ಆಗಿರುವುದರಿಂದ ಇಲ್ಲಿಯ ಚಿತ್ರಗಳು ನಿಜವಾದ ‘ಭಾವ’ಚಿತ್ರಗಳೇ ಆಗಿವೆ. ಒಂದೊಂದೂ ಜೀವಂತಿಕೆಯ ಪಡಿಯಚ್ಚುಗಳಾಗಿ ನಮ್ಮ ಹೃದಯ ತುಂಬುತ್ತವೆ.
ಕೆಲವೊಮ್ಮೆ ದಿನಕ್ಕೆರಡು ಭೇಟಿ, ಮತ್ತೊಮ್ಮೆ ದೀರ್ಘಕಾಲದವರೆಗೆ ಸಂದರ್ಶನವಿಲ್ಲ. ಆದರೆ ಪ್ರತ್ಯಕ್ಷ ಪರೋಕ್ಷಗಳ ಪ್ರಭಾವದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಘೋರ್ಪಡೆಯವರು ಕೈಗೊಂಡ ಮಹತ್ವದ ಯೋಜನೆಗಳಿಗೆ ಆಚಾರ್ಯರು ಒದಗಿಸಿದ ಅಂತಃಪ್ರೇರಣೆ ಅಂತಹುದೆನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಅರ್ಥಪೂರ್ಣ ಬದುಕಿಗೆ ಮತ್ತಿನ್ನೇನು ಬೇಕು?
-ಟಿ.ಎಸ್. ಸತ್ಯವತಿ
– See more at: https://abhinavabook.myinstamojo.com/product/2946614/-79f89/#sthash.0Gnalq4v.dpuf
Reviews
There are no reviews yet.