ಕಪ್ಪೆ ಅರಭಟ್ಟನ ಶಾಸನ

150.00

Add to Wishlist
Add to Wishlist
Email

Description

ಲೇಖಕರು: ಷ. ಶೆಟ್ಟರ್
ಪುಟಗಳು: 120,
ಪ್ರಕಾಶನ: ಅಭಿನವ, ಬೆಂಗಳೂರು
…………………
ಹಿಂದೊಮ್ಮೆ ಪೂರ್ವಚಾಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಶಾಸನ ಈ ಅಭ್ಯಾಸದ ಪ್ರಧಾನ ವಸ್ತು. ಜೆ.ಎಫ್. ಫ್ಲೀಟ್ ಇದನ್ನು 1881ರಲ್ಲಿಯೇ ಬೆಳಕಿಗೆ ತಂದರೂ ಸುಮಾರು ಅರ್ಧ ಶತಮಾನ ಕಾಲ ಇದು ಯಾರ ಗಮನವನ್ನೂ ಸೆಳೆಯಲಿಲ್ಲ. ಇದರಲ್ಲಿ ಬಳಸಿರುವ ವಿಶೇಷ ಛಂದಸ್ಸು ಮತ್ತು ಈ ಶಾಸನ ವೀರನಲ್ಲಿ ಸ್ಥಳೀಯರು ಕಂಡುಕೊಂಡ ಸ್ವಸ್ವರೂಪದಿಂದಾಗಿ ಕೆಲವು ಭಾಷಾಶಾಸ್ತ್ರಜ್ಞರ ಕುತೂಹಲವನ್ನು ಇದು ಕ್ರಮೇಣ ಕೆರಳಿಸತೊಡಗಿತು. ಇದರ ಪರಿಣಾಮದಿಂದಾಗಿ, 1930-2011ರ ಅವಧಿಯಲ್ಲಿ ಹತ್ತು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಅತ್ಯಂತ ಪುರಾತನವೆನಿಸಿದ ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ ಪದ್ಯಗಳನ್ನಲ್ಲದೆ, ಇಲ್ಲಿಯವರೆಗೂ ಇದರ ಬಗ್ಗೆ ಮಾಡಿದ ಸಂಶೋಧನೆಯ ಸ್ವರೂಪವನ್ನು ಪರಿಚಯಿಸಲು ನಾನಿಲ್ಲಿ ಪ್ರಯತ್ನಿಸಿರುವೆ.
*
…ಶಾಸನದ ಪಾಠವನ್ನು ಇದ್ದಕ್ಕಿದ್ದಂತೆಯೇ ಇಲ್ಲವೇ ಅಲ್ಪಸ್ವಲ್ಪ ಬದಲಿಸಿಯೋ ಬೇರೊಂದು ಪ್ರದೇಶದಲ್ಲಿ ಮರುಕಂಡರಿಸಿದ ನಿದರ್ಶನಗಳನ್ನು ವಿರಳವಾಗಿಯಾದರೂ ಕಾಣಬಹುದು, ಆದರೆ ಒಂದು ಶಾಸನವನ್ನು ತುಂಡರಿಸಿ ಒಂದೇ ಸ್ಥಳದಲ್ಲಿ ಅದನ್ನು ಹಂಚಿರುವುದನ್ನು ನಮ್ಮ ದೇಶದಲ್ಲೆಲ್ಲಿಯೂ ಕಾಣೆವು. ಈ ವಿಶೇಷ ಪ್ರಯೋಗದಿಂದಾಗಿ ನಮ್ಮ ದೇಶದ ಶಾಸನ ಕ್ಷೇತ್ರದಲ್ಲಿ ತಟ್ಟುಕೋಟೆಯ ಈ ಶಾಸನಕ್ಕೆ ವಿಶಿಷ್ಟ ಸ್ಥಾನವೊಂದು ದೊರಕಿದೆ.
*
ಈ ಶಾಸನದ ಸಾಹಿತ್ಯಿಕ ಚರ್ಚೆ ಇಂದು ಮುಕ್ತಾಯದ ಹಂತ ತಲುಪಿದೆ. ತ್ರಿಪದಿ ಛಂದಸ್ಸಿನ ಪ್ರಾರಂಭವನ್ನು ನಾವಿಲ್ಲಿ ಕಂಡು, ಈ ಕಾವ್ಯಪ್ರಭೇದವು (ಆಂಧ್ರಪ್ರದೇಶವನ್ನೊಳಗೊಂಡು) ದಖ್ಖಣದಲ್ಲೆಲ್ಲ ಪ್ರಸರಿಸಿ, ಗಟ್ಟಿಗೊಳ್ಳುತ್ತಾ ರಂಗುಪಡೆದುಕೊಳ್ಳುತ್ತಾ ಮುಂದುವರಿದು, ಕನ್ನಡದ ಮಹಾಕವಿಗಳಾದ ಪಂಪ, ಪೊನ್ನ, ದುರ್ಗಸಿಂಹ, ಇಮ್ಮಡಿ ನಾಗವರ್ಮ, ಜನ್ನ, ಬಂಧುವರ್ಮ, ಮುಂತಾದವರ ಮೇಲೆ ಹೇಗೆ ಪ್ರಭಾವ ಬೀರಿ, ಕನ್ನಡದ ಸಂತ ಕವಿಯಾದ ಸರ್ವಜ್ಞನ ಹಾಡುಗಳಲ್ಲಿ ಹೇಗೆ ಔನ್ನತ್ಯದ ಅಂಚನ್ನು ಕಂಡುಕೊಂಡಿತು, ಮತ್ತು ಕನ್ನಡ ಮತ್ತು ಸಂಸ್ಕøತ ಅಲಂಕಾರಿಕರ ಗಮನವನ್ನು ತನ್ನೆಡೆಗೆ ಹೇಗೆ ಸೆಳೆದುಕೊಂಡಿತು, ಎಂಬುದನ್ನು ಕನ್ನಡ ಸಾಹಿತ್ಯ ಚರಿ

Reviews

There are no reviews yet.

Be the first to review “ಕಪ್ಪೆ ಅರಭಟ್ಟನ ಶಾಸನ”

Your email address will not be published.