ಕಾವೇರಿಯ ಕುವರ

1,485.00

Add to Wishlist
Add to Wishlist
Email

Description

ರಾಮಸ್ವಾಮಿಅಯ್ಯರ್ ಕೃಷ್ಣಮೂರ್ತಿ ಎನ್ನುವವರು ‘ಕಲ್ಕಿ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ತಮಿಳು ಭಾಷೆಯ ಲೇಖಕರು, ಪತ್ರಕರ್ತರು, ಕವಿಗಳು, ವಿಮರ್ಶಕರು ಮತ್ತು ಭಾರತದ ಸ್ವಾತಂತ್ರ ಸಂಗ್ರಾಮದ ಹೋರಾಟಗಾರರು. ಇವರು ೧೮೯೯ನ ಇಸವಿ ಸೆಪ್ಟೆಂಬರ್ ೯ನೆಯ ತಾರೀಖು, ಹಳೆಯ ತಂಜಾವೂರು ಜಿಲ್ಲೆಯ ಮೈಲಾಡುತುರೈ ಹತ್ತಿರವಿರುವ ಪುತ್ತಮಂಗಲಂನಲ್ಲಿ ಹುಟ್ಟಿದರು. ತಂದೆ ರಾಮಸ್ವಾಮಿ ತಾಯಿ ತೆಯ್ಯಲ್‌ನಾಯಕಿ. ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರು, ಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ನೂರು ಕಿ.ಮೀ.ದೂರದಲ್ಲಿದ್ದ ತಿರುಚ್ಚಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ೧೯೨೧ರಲ್ಲಿ ಇವರು ಮಹಾತ್ಮಾಗಾಂಧಿಯ ಅಸಹಕಾರ ಚಳುವಳಿಯಲ್ಲಿ ಸೇರಿಕೊಳ್ಳಲು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ೧೯೨೨ರಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ ಇವರಿಗೆ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಪತಿ ಸದಾಶಿವಂ ಮತ್ತು ರಾಜಾಜಿಯವರ ಸ್ನೇಹದೊರಕಿತು. ೧೯೨೩ರಲ್ಲಿ ಇವರು ‘ನವಶಕ್ತಿ’ ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಲಾರಂಭಿಸಿದರು. ಈ ಪತ್ರಿಕೆಗೆ ತಮಿಳು ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಯಾಣಸುಂದರಂ ಎನ್ನುವವರು ಸಂಪಾದಕರಾಗಿದ್ದರು. ೧೯೨೪ರಲ್ಲಿ ರುಕ್ಕಿಣಿ ಎನ್ನುವವರನ್ನು ವಿವಾಹವಾಗಿ ಚೆನ್ನೈನಲ್ಲಿ ವಾಸಮಾಡತೊಡಗಿದರು. ಇವರಿಗೆ ಇಬ್ಬರು ಮಕ್ಕಳು, ಈಗ ಕಲ್ಕಿಪತ್ರಿಕೆ ನಡೆಸುತ್ತಿರುವ ಕಲ್ಕಿ ರಾಜೇಂದ್ರನ್ ಮತ್ತು ಆನಂದಿರಾಮಚಂದ್ರನ್. ಇವರು ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಪ್ರತಿ ತಿಂಗಳು ಐದು ಕಾದಂಬರಿಗಳನ್ನು ಹೊರ ತರುತ್ತಿದ್ದರು. ‘ಕುಮುದಂ’ ‘ಆನಂದವಿಕಟನ್’ ವಾರಪತ್ರಿಕೆಗಳಲ್ಲಿ ಸಣ್ಣ ಕಥೆಗಳು, ಕಾದಂಬರಿಗಳನ್ನು ಬರೆಯುತ್ತಿದ್ದರು. ಅವರ ಈ ಸಾಹಿತ್ಯ ತಮಿಳುನಾಡು ಮತ್ತು ಶ್ರೀಲಂಕಾಗಳಲ್ಲಿ ಪ್ರಸಿದ್ಧಿ ಪಡೆಯಿತು.

Reviews

There are no reviews yet.

Be the first to review “ಕಾವೇರಿಯ ಕುವರ”

Your email address will not be published.