Description
ಕೆಲ ವರ್ಷ ಕಿರಂ ಜೊತೆ ಅಡ್ಡಾಡುತ್ತಾ ಅವರೊಡನೆ ಪ್ರೀತಿ,ಕಲೆಕೆ,ತಾತ್ವಿಕ,ಜಗಳ,ಎಂ.ಎಂ.ಎಸ್. ಮೂಲಕ ಪ್ರತಿಭಟನೆ ಹೀಗೆ ಹಲಬಗೆಯ ಸಂಕೀರ್ಣ ಸಂಭಂಧಗಳನ್ನು ಇರಿಸಿಕೊಂಡಿದ್ದ ವಾಸುದೇವಮೂರ್ತಿ ಒಂದೆಡೆ ನೀಷೆ.ಮತ್ತೊಂದೆಡೆ ಅಲ್ಲಮನಿಗೆ ಮಾರು ಹೋದವರು.ನೀಷೆ ಹಾಗೂ ಅಲ್ಲಮರ ಬೌದ್ಧಿಕ ಅರಾಜಕತಾವಾದಿ ಗುಣವು ಇದ್ದ ಕಿರಂ ಬಗೆಗೆ ವಾಸುದೇವ್ ಗೆ ಗೌರವ,ಸೆಳೆತಗಳು ಬೆಳದದ್ದು ,ಅದರ ಜೊತೆಗೇ ಕಿರಂ ವ್ಯಕ್ತಿತ್ವವನ್ನು,ಅವರನ್ನು ಭೇಟಿಯಾಗುತ್ತಿದ್ದ ಬಗೆಬಗೆಯ ಬರಹಗಾರರನ್ನು, ಅವರು ಓದುತ್ತಿದ್ದ ರೀತಿಗಳನ್ನು,ಅವರ ಚಿಂತನೆಯ ಬೀಸನ್ನು ವಿಮರ್ಶಾತ್ಮಕವಾಗಿ ನೋಡಬಲ್ಲ ಸಿದ್ದತೆ ವಾಸುದೇವ್ ಅವರಿಗಿದೆ.ಅವರು ತಲುಪುವ ಕೆಲವು ಬಗೆಯ ತೀರ್ಮಾನಗಳಿಗೆ ಗಟ್ಟಿ ತಳಹದಿ ಇದ್ದಂತಿಲ್ಲ; ಆದರೆ ತಮ್ಮ ಕಣ್ಣಳತೆಯಲ್ಲಿ ಕಂಡದನ್ನು ಹೇಳಲು ಅವರು ಪ್ರಾಮಾಣಿಕವಾಗಿ ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ.
Reviews
There are no reviews yet.